ಹೆಬ್ಬಾಳ ಕೆರೆಯನ್ನು ಸ್ವಚ್ಛಗೊಳಿಸಿದ ಸ್ವಯಂಸೇವಕರು..!

0
571

ಇತ್ತೀಚಿನ ಕೆಲವು ದಿನಗಳಿಂದ ಹೆಬ್ಬಾಳ ಕೆರೆ ಸುತ್ತ ಕಟ್ಟಡದ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ಹಲವು ವರಿದಿಗಳು ಬಂದಿವೆ. ಅಷ್ಟೇ ಯಾಕೆ ಹೆಬ್ಬಾಳ ಕೆರೆ ಅಭಿವೃದ್ಧಿ ಅಭಿಯಾನ ಮತ್ತು ನಮ್ಮೂರ ಕೆರೆ ಉಳಿಸಿ ಇಂತಹ ಅನೇಕ ವಿಷಯಗಳ ಬಗ್ಗೆ ವರದಿಯಾಗಿವೆ ಆದರೆ ಹೆಬ್ಬಾಳ ಕೆರೆ ಅಭಿವೃದ್ಧಿ ಮಾತ್ರ ಆಗಿಲ್ಲಾ. ಭಾರತ ಪರಿಸರವಾದಿ ಫೌಂಡೇಶನ್ ಆಫ್ ಇಂಡಿಯಾ (ಇಎಫ್ಐ), ಚೆನ್ನೈ ಟ್ರೆಕಿಂಗ್ ಕ್ಲಬ್ ಮತ್ತು ದಿ ಹಿಂದೂಗಳಿಂದ ಆಯೋಜಿಸಲ್ಪಟ್ಟ ಕ್ಲೀನ್ ಎನ್ಲೀಪ್ ಡ್ರೈವ್ನ ಅಂಗವಾಗಿ ಭಾನುವಾರದಂದು ಬೆಂಗಳೂರಿನ ಹೆಬ್ಬಾಳ ಕೆರೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

EFI ವ್ಯವಸ್ಥೆಯು ಸಂವಹನ ಮುಖ್ಯಸ್ಥ ಗೌತಮಿ ಅಶೋಕ್, ಮತ್ತು ಅವರ ಜೊತೆ ಸುಮಾರು 70 ಸ್ವಯಂಸೇವಕರು ಕೆರೆ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

BBMPನಿಂದ ಮೊದಲು ಅನುಮತಿ ಪಡೆದು ಭಾನುವಾರ ಬೆಳಗ್ಗೆ ಬೆಂಗಳೂರು ಹೆಬ್ಬಾಳ ಕೆರೆಯಲ್ಲಿ ಸುಮಾರು 70 ಸ್ವಯಂಸೇವಕರು ಒಂದುಗೂಡಿ ಹೆಬ್ಬಾಳ ಕೆರೆ ಮತ್ತು ಸುತ್ತಲೂ ಸಂಗ್ರಹವಾದ ಜೈವಿಕ-ಅಲ್ಲದ ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯವನ್ನು ಒಂದುಗೂಡಿಸಿದ್ದಾರೆ. ಸುಮಾರು ಮೂರು ಗಂಟೆಗಳಲ್ಲಿ (ಬೆಳಗ್ಗೆ 6 ರಿಂದ 9 ರವರೆಗೆ) ಅವರು ಹೆಬ್ಬಾಳ ಕೆರೆಯ ಸುತ್ತಲೂ ಮೂರು ಟನ್ಗಳಷ್ಟು ಕಸವನ್ನು ತೆರವುಗೊಳಿಸಿದರು.

ಇವರ ಈ ಸುಂದರ ಕಾರ್ಯವನ್ನು www.thenewsism.com ತಂಡ ಅಭಿನಂದಿಸುತ್ತದೆ