ಹೆಬ್ಬುಲಿ ಚಿತ್ರ 2 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್

0
1282

ನಮ್ಮ ರೇಟಿಂಗ್ :

ಹೆಬ್ಬುಲಿ ಚಿತ್ರ ಸುಮಾರು ೪೫೦ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ . ಹಲವಾರು ಚಿತ್ರಮಂದಿರಗಲ್ಲಿ ಮುಂಜಾನೆ ೬ ಗಂಟೆಗೆ ಚಿತ್ರವನ್ನು ಆರಂಭಿಸಿದ್ದಾರೆ . ಇದನ್ನೆಲ್ಲ ಲೆಕ್ಕದಲ್ಲಿ ಇಟ್ಟುಕೊಂಡು ನೋಡೋದಾದರೆ ಚಿತ್ರ  ಮೊದಲು ದಿನ 10 ಕೋಟಿ ಹಾಗು 2ನೆ ದಿನ  19 ಕೋಟಿ ಎನ್ನಲಾಗುತ್ತಿದೆ. ಇದನ್ನು ನಿರ್ಮಾಪಕ ಉಮಾಪತಿ ಅವರು ತಿಳಿಸಿದ್ದಾರೆ.

ತಾಂತ್ರಿಕವಾಗಿ ಹೆಬ್ಬುಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ . ಕರುಣಾಕರ ಛಾಯಾಗ್ರಹಣ ಅದ್ಭುತವಾಗಿದೆ .ಚಿತ್ರಕ್ಕೆ ಇನ್ನೊಂದು ಉಸಿರು ಅಂದರೆ ಅರ್ಜುನ್ ಜನ್ಯ ಅವರ ಹಿನ್ನಲೆ ಸಂಗೀತ.ಹಾಗೆ ಡೈರೆಕ್ಟರ್ ತುಂಬಾ ಒಳ್ಳೆಯ ಮತ್ತು ಹೊಸದಾದ ರೀತಿಯ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ.

ಚಿತ್ರದ ನೆಗಿಟಿವ್ ಅಂಶಗಳು ಅಂದರೆ ಕಾಮಿಡಿ ಕಡಿಮೆ ಇದೆ. ಮತ್ತು ಎರಡನೇ ಭಾಗ ಸ್ವಲ್ಪ ಜಾಸ್ತಿ ಅನ್ನಿಸಬಹುದು. ಅದನ್ನು ಬಿಟ್ಟರೆ ಚಿತ್ರ ಚೆನ್ನಾಗಿ ಬಂದಿದೆ.

ಕೊನೆಯದಾಗಿ ಹೇಳಬೇಕೆಂದರೆ ಈ ಚಿತ್ರ ಕಿಚ್ಚನ ಅಭಿಮಾನಿಗಳಿಗೆ ಹಬ್ಬ ಮತ್ತು ಇನ್ನು ಉಳಿದಂತ ಎಲ್ಲ ಪ್ರೇಕ್ಷಕರಿಗೂ ಹಿಡಿಸುವಂತಹ ಚಿತ್ರ.ಹಾಗಾಗಿ ಎಲ್ಲ ವರ್ಗದವರಿಗೂ ಇಷ್ಟವಾಗುತ್ತದೆ .ಹಾಗೆ ಚಿತ್ರದಲ್ಲಿ ತುಂಬಾ ಒಳ್ಳೆಯ ಸಮಾಜಕ್ಕೆ ಬೇಕಾಗುವ ಒಂದು ಉತ್ತಮವಾದ ಸಂದೇಶ ಇದೆ.

ಈ ಚಿತ್ರದಲ್ಲಿ ಸುದೀಪ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಹಾಗೆ ಅವರು ತೆರೆಯ ಮೇಲೆ ತುಂಬಾ  ಕಡಕ್ ಮತ್ತು  ಸ್ಟೈಲಿಶ್ ಆಗಿ ಕಾಣಿಸುತ್ತಾರೆ. ಇಡೀ ಚಿತ್ರದಲ್ಲಿ ಸುದೀಪ್ ತಮ್ಮ ಪಾತ್ರಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸಿದ್ದಾರೆ. ಅಮಲಾ ಪಾಲ್ ಅವರ ಪಾತ್ರ ತುಂಬಾ ಮುದ್ದಾಗಿದೆ. ಸುದೀಪ್ ಮತ್ತು ಅಮಲಾ ಪೌಲ ಅವರ ನಡುವಿನ ದೃಶ್ಯಗಳು ಎಲ್ಲರನ್ನು ರಂಜಿಸುತ್ತವೆ.ಹಾಗೆ ಹಾಸ್ಯ ಪಾತ್ರದಲ್ಲಿ ಚಿಕ್ಕಣ್ಣ ಅವರ ಪಾತ್ರ ಕಡಿಮೆ ಇದ್ದರೂ ನೆನಪಿನಲ್ಲಿ ಉಳಿಯುತ್ತದೆ.

ಖಳನಾಯಕರಾಗಿ  ರವಿಶಂಕರ್,ಕಬೀರ್ ದುಹನ್ ಸಿಂಗ್,ರವಿಶಂಕರ್ ಮತ್ತು ಅನಿಲ್ ಅವರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.ಮುಖ್ಯವಾಗಿ ಅಂದರೆ ರವಿಶಂಕರ್ ಮತ್ತು ಸುದೀಪ್ ಅವರ ನಡುವೆ ಬರುವ ಸನ್ನಿವೇಶಗಳು ಎಲ್ಲರನ್ನು ತುಂಬ ರಂಜಿಸುತ್ತವೆ.ಇನ್ನು ಕೊನೆಯದಾಗಿ ರವಿಚಂದ್ರನ್ ಐಎಎಸ್ ಪಾತ್ರದಲ್ಲಿ ಚೆನ್ನಾಗಿ ನಟಿಸಿದ್ದಾರೆ .ಇಡೀ ಚಿತ್ರ ರವಿಚಂದ್ರನ್ ಅವರ ಪಾತ್ರದ ಸುತ್ತ ನಡೆಯುತ್ತದೆ.

ಸುದೀಪ್ ಪ್ಯಾರಾ ಕಮಾಂಡರ್ ರಾಮ್  ಪಾತ್ರದಲ್ಲಿ ಕಾಣಿಶಿಕೊಂಡಿದ್ದಾರೆ. ಹೀಗೆ ಅವರು ದೇಶದ ಗಡಿ ಕಾಯುತ್ತಿರುವಾಗ ಮನೆಯಿಂದ ಸಂದೇಶ ಬರುತ್ತದೆ.ಅದರಲ್ಲಿ ಅವರ ಅಣ್ಣ  ಐಎಎಸ್ ಸತ್ಯಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬರೆಯಲಾಗಿರುತ್ತೆ.ಆಗ ರಾಮ್ ಮನೆಗೆ ಮರಳುತ್ತಾರೆ . ಅಲ್ಲಿ ಬಂದಾಗ ಅವರಿಗೆ ಗೊತ್ತಾಗುವ ವಿಷಯ ಅಂದರೆ ಇದು  ಆತ್ಮಹತ್ಯೆ ಅಲ್ಲ ಕೊಲೆ. ಆಗ ರಾಮ್  ಕೊಲೆ ಮಾಡಿರುವವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಹೆಬ್ಬುಲಿ ಚಿತ್ರದ ಒಂದು ಲೈನ್  ಕಥೆ.