ಹೆಬ್ಬುಲಿ ಯುಟ್ಯೂಬ್ ನಲ್ಲಿ ಟ್ರೆಂಡಿಂಗ್

0
1151

‘ಹೆಬ್ಬುಲಿ’ ಚಿತ್ರತಂಡಕ್ಕೆ ಈ ವರ್ಷದ ಕ್ರಿಸ್ಮಸ್ ಹಬ್ಬ ವಿಶೇಷ! ದಾವಣಗೆರೆಯಲ್ಲಿ ಡಿಸೆಂಬರ್ ೨೫ ರಂದು ಸಿನೆಮಾದ ಅದ್ದೂರಿ ಆಡಿಯೋ ಬಿಡುಗಡೆ ಮಾಡಿತ್ತು. ಈ ಆಡಿಯೋ ಈಗ ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ .

ಹೆಬ್ಬುಲಿ, ಭರಪೂರ ಮನೋರಂಜನೆ ನೀಡುವ ಅದ್ಧೂರಿ ಚಿತ್ರ. ಅಪ್ಪಟ ದೇಶಭಕ್ತ ಪ್ಯಾರಾ ಕಮಾಂಡರ್‌ನ ವ್ಯಕ್ತಿತ್ವದ ಸುತ್ತ ಹೆಣೆದಿರುವ ಕಥೆಯೇ ಈ ಸಿನಿಮಾದ ಜೀವಾಳ

ಕಿಚ್ಚ ಸುದೀಪ್ ಬಹುಭಾಷಾ ನಟ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಬಾಲಿವುಡ್‍ನ ಶಾರೂಖ್‍ ಖಾನ್, ಹೃತಿಕ್‍ ರೋಷನ್ ಅವರನ್ನೂ ಹಿಂದಿಕ್ಕಿದ ಅಪರೂಪದ ಸಾಧನೆ ಮಾಡಿದ್ದಾರೆ.

ಹೆಬ್ಬುಲಿ ಐಎಂಡಿಬಿಯಲ್ಲಿ ಬಾರಿ ಘರ್ಜನೆ : 

ban26121613medn

ಬಹುನಿರೀಕ್ಷಿತ ಚಿತ್ರಗಳು ಯಾವುವು ಎಂದು ಐಎಂಡಿಬಿ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಹೆಬ್ಬುಲಿ ಚಿತ್ರಕ್ಕೆ ನಂ.1 ಸ್ಥಾನ ನೀಡಿದರೆ, ನಂತರದ ಸ್ಥಾನದಲ್ಲಿ ಶಾರೂಖ್‍ ಅಭಿನಯದ `ರೇಸ್’, ಅಜಯ್ ದೇವಗನ್‍ ಅವರ ಸಿಂಗಮ್‍-3 ಮತ್ತು ಹೃತಿಕ್‍ ರೋಶನ್‍ ಅವರ `ಕಾಬಿಲ್‍’ ಸ್ಥಾನ ಪಡೆದಿವೆ.

ಕಿಚ್ಚ ಸುದೀಪ್‍ ಅಭಿನಯದ ಹೆಬ್ಬುಲಿ ಚಿತ್ರದ ಪರ ಅಭಿಮಾನಿಗಳು ಶೇ. 28.8ರಷ್ಟು ಮತ ನೀಡಿದರೆ, ಶಾರೂಖ್ ‍ಅಭಿನಯದ ರೇಸ್‍ ಪರ ಶೇ.25.7, ಸಿಂಗಂ-3 ಪರ ಶೇ. 21.1, ಕಾಬಿಲ್‍ ಪರ 10.8, ಓಕೆ ಜಾನು ಚಿತ್ರಕ್ಕೆ ಶೇ. 4.4ರಷ್ಟು ಮತಗಳು ದಾಖಲಾಗಿವೆ.