ಓದಿದ್ದು ಮೂರನೇ ತರಗತಿ… 15 ಲಕ್ಷ ರೂಪಾಯಿನಲ್ಲಿ ತಯಾರಿಸಿದ ಒಂದು ಹೆಲಿಕಾಪ್ಟರ್….!

0
2329

ಓದಿದ್ದು ಮೂರನೇ ತರಗತಿ… ತಯಾರಿಸಿದ ಒಂದು ಹೆಲಿಕಾಪ್ಟರ್….!

ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿದ್ದರೆ, ವಿದ್ಯೆ, ಹಣದ ಅವಶ್ಯಕ ಬೇಕಾಗಿಲ್ಲ ಎಂದು ನಿರೂಪಿಸಿದ್ದಾನೆ ಮೂರನೆಯ ತರಗತಿ ಓದಿದ ಸಾಗರ್ ಪ್ರಸಾದ್ ಶಾರ್ಮ.

ವಿಡಿಯೋ ನೋಡಿ ತಿಳಿಯುತ್ತದೆ ನಿಮ್ಮಗೆ

ಅಸ್ಸಾಂನ ಹಳ್ಳಿಯೊಂದರಲ್ಲಿ ವಾಸವಿರುವ ಸಾಗರ್ ಪ್ರಸಾದ್ ಶಾರ್ಮ ತಮ್ಮ ಊರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದ. ಒಂದಲ್ಲೊಂದುದಿನ ನಾನು ಹೆಲಿಕಾಪ್ಟರ್ ತಯಾರಿಸಬೇಕು ಎಂಬುದು ಶಾರ್ಮನ ಜೀವನ ಗುರಿ. ಅದಕ್ಕಾಗಿ ಮೂರು ವರ್ಷಗಳ ಕಾಲ ಹೆಲಿಕಾಪ್ಟರ್ ತಯಾರಿಸಲು ಕಷ್ಟಪಟ್ಟ. ತನಗೆ ತಿಳಿದ ಜ್ಞಾನದಿಂದ ಆ ಹೆಲಿಕಾಪ್ಟರ್ ಅನ್ನು ಪೈನಲ್ ಸ್ಟೆಜ್’ಗೆ ತಂದನು.

ಈ ಹೆಲಿಕಾಪ್ಟರ್ ತಯಾರಿಸಲು ಅವರು ಟಾಟಾ ಸುಮೋ ಡೀಸೆಲ್ ಎಂಜಿನ್ ಬಳಕೆ ಮಾಡಿದರೆ . ಇಂತಹ ಎಷ್ಟೋ ಸಾಧನೆ ಮಾಡಿದರೆ ಶಾರ್ಮ.

ಇದನ್ನು ತಯಾರಿಸಲು ತನ್ನ ಹೆಂಡತಿ ಹಾಗೂ ಸ್ನೇಹತನ ಸಹಾಯ ಪಡೆದುಕೊಂಡನು. ಈ ಹೆಲಿಕಾಪ್ಟರ್ ತಯಾರಿಸಲು ಸಾಗರ್ ಪ್ರಸಾದ್ ಶಾರ್ಮಗೆ ಸುಮಾರು 15 ಲಕ್ಷ ರೂಪಾಯಿ ಖರ್ಚ್ಚಾಗಿದೆಯಂತೆ. ಹೆಲಿಕಾಪ್ಟರ್ ಮಾಡುವುದನ್ನು ನೋಡಿ ಊರಿನವರು ನಕ್ಕರೂ ತಾನು ಮಾತ್ರ ತನ್ನ ಗುರಿ ಸಾಧನೆಯ ಕಡೆಗೆ ಮುನ್ನುಗ್ಗಿದ. ಹೆಲಿಕಾಪ್ಟರ್ ಗೆ ‘ಪವನ ಪುತ್ರ’ ಎಂದು ನಾಮಕರಣ ಮಾಡಿದ. ಇನ್ನು ಕೆಲವೇ ದಿನಗಳಲ್ಲಿ ಈ ಹೆಲಿಕಾಪ್ಟರ್ ಆಕಾಶದಲ್ಲಿ ಹಾರಲಿದೆ…..

ಆಲ್ ದಿ ಬೆಸ್ಟ್ ಶಾರ್ಮಾ