ದಾರಿತಪ್ಪಿದ ಹೆಲಿಕ್ಯಾಪ್ಟರ್ ಪೈಲಟ್ ಏನ್ ಮಾಡಿದ ಗೊತ್ತ??

0
581

ದಿಕ್ಕು ತಪ್ಪಿ ರಸ್ತೆಗಿಳೀತು ಲೋಹದ ಹಕ್ಕಿ

ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ಹಕ್ಕಿಯೊಂದು ದಿಕ್ಕು ತಪ್ಪಿದ ಪರಿಣಾಮ ರಸ್ತೆಗೆ ಇಳಿದು ಅವಾಂತರ ಸೃಷ್ಟಿಸಿತ್ತು.

ಹೌದು ಈ ಘಟನೆ ನಡೆದಿದ್ದು ಕಜಕಸ್ತಾನದಲ್ಲಿ, ಆ ಲೋಹದ ಹಕ್ಕಿ ನಿಲುಗಡೆಯ ಸ್ಥಳ ಇದಲ್ಲಾ ಎಂದು ಹೇಳುವ ಹೊತ್ತಿಗೆ, ಹಠಾತ್ತನೆ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಅವಕ್ಕಾಗಿ ಏನಪ್ಪ ಇದು ಆಕಾಶದಲ್ಲಿ ಹಾರಾಡುತ್ತಿದ್ದ ಹಕ್ಕಿ ಭುವಿಗೆ ಬಂದಿದೆಯಲ್ಲಾ ಎಂದು ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಅಂದಹಾಗೆ ಆ ಲೋಹದ ಹಕ್ಕಿ ಬಂದು ನಿಂತಿದ್ದು ಕಜಕಸ್ತಾನದ ಸ್ನೋವೇ ಹೈವೆಯಲ್ಲಿ ಆ ಹಕ್ಕಿಯ ಗಾತ್ರಕ್ಕೆ ದೊಡ್ಡದಾದ ರಸ್ತೆಯೂ ಭರ್ತಿಯಾಗಿತ್ತು.
Image result for helicopter pilot asking for directions
ಕಜಕಸಸ್ತಾನದ ಮಿಲಿಟರಿಗೆ ಸೇರಿದ ಎಂಐ-೮ ಹೆಲಿಕಾಪ್ಟರ್‌ನ ಪೈಲಟ್‌ಗೆ ದಿಕ್ಕು ತಪ್ಪಿದ್ದರಿಂದ ರಸ್ತೆಗೆ ಇಳಿಸಿದ್ದರಂತೆ ಬಳಿಕ ಕಾಪ್ಟರ್‌ನ ಮುಂದೆ ನಿಂತಿದ್ದ ಟ್ರಕ್‌ನಲ್ಲಿನ ಸಿಬ್ಬಂದಿಗೆ ಪೈಲಟ್ ಮುಂದೆ ಹೋಗುವುದಕ್ಕೆ ದಾರಿ ಯಾವುದಯ್ಯ ಎಂದು ವಿಚಾರಿಸಿದ್ದಾನೆ. ಟ್ರಕ್ ಸಿಬ್ಬಂದಿ ದಾರಿ ತೋರಿಸಿದ ನಂತರ ಪೈಲಟ್ ಹೆಲಿಕಾಪ್ಟರ್‌ನ್ನು ರಸ್ತೆಯಿಂದ ಮೇಲಕ್ಕೆ ಹಾರಿಸಿದನಂತೆ.
Image result for helicopter pilot asking for directions
ಸುತ್ತ-ಮುತ್ತ ದಟ್ಟ ಮಂಜು ಕವಿದಿದ್ದರಿಂದ ಪೈಲಟ್‌ಗೆ ಯಾವ ದಾರಿಯಲ್ಲಿ ಹೆಲಿಕಾಪ್ಟರ್ ಸಾಗುತ್ತಿದೆ ಎನ್ನುವುದು ತಿಳಿಯದಾಗಿತ್ತು. ಗೊಂದಲಕ್ಕೀಡಾದ ಪೈಲಟ್ ಕಾಪ್ಟರ್‌ನ್ನು ತುರ್ತು ಭೂ ಸ್ಪರ್ಶ ಮಾಡಿಸಿದರು. ಹೆಲಿಕಾಪ್ಟರ್ ರಸ್ತೆಯಲ್ಲಿ ನಿಂತಿದ್ದರಿಂದ ಸ್ನೋವೇ ಹೈವೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಇದನ್ನು ಕ್ಲೀಯರ್ ಮಾಡುವುದರೊಳಗೆ ಅಲ್ಲಿನ ಪೊಲೀಸ್ ಸಿಬ್ಬಂದಿ ಹೈರಾಣಾಗಿದ್ದರಂತೆ. ಅನನುಭವಿ ಪೈಲಟ್ ಆಗಿದ್ದರಿಂದ ಇಂತಹ ಸಮಸ್ಯೆ ಎದುರಾಗಿದೆ. ಕಾಪ್ಟರ್‌ಗಳನ್ನು ಎಲ್ಲಿ ನಿಲ್ಲಿಸಬೇಕು ಎನ್ನುವುದರ ಬಗ್ಗೆ ಪೈಲಟ್‌ಗಳಿಗೆ ಸೂಕ್ತ ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಎಚ್ಚರವಹಿಸಲಾಗುವುದು ಎಂದು ಕಜಕಸ್ತಾನದ ಮಿಲಿಟರಿ ರಕ್ಷಣಾ ಪಡೆ ಹೇಳಿದೆ.