ಹೆಲೋ ಫ್ರೆಂಡ್ಸ್, ವಿಶ್ವಾದ್ಯಂತ ನೆಟ್’ವರ್ಕ್ ಸ್ಲೋ ಆಗಲಿದೆ; ಎಚ್ಚರ ಎಚ್ಚರ..! ಇದು ನಿಮ್ಮ ಗ್ರಹಚಾರವಲ್ಲ..

0
519

ಓಹ್..! ನೆಟ್ ಸ್ಲೋ.. ವಾಟ್ಸಪ್, ಫೇಸ್ಬುಕ್ ವರ್ಕ್ ಆಗ್ತಿಲ್ಲ.. ಯಪ್ಪಾ ಯಾಕೀಗಾಗ್ತಿದೆ.. ಸಿಮ್ ಪ್ರಾಬ್ಲಮ್ ಇರ್ಬಹುದಾ..? ಮೊಬೈಲ್’ಗೆ ಏನಾಯ್ತಪ್ಪಾ..? ಸಿಟ್ಟು ಬರ್ತಿದೆ. ಅಯ್ಯೋ ಯಾವ್ ಇನ್ಫಾರ್ಮೇಲನ್ ಗೂಗಲ್ ಮಾಡೋಕು ಆಗ್ತಿಲ್ವೆ..!

Also read: ರಾಜಕೀಯ ತಿರುವು ಪಡೆದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರ; ಶಬರಿಮಲೆ ಉಳಸಿ ಘೋಷವಾಕ್ಯದಡಿ ಪಾದಯಾತ್ರೆ..!

ಹೆಲ್ಲೋ ಫ್ರೆಂಡ್ಸ್ ಇಲ್ಕೇಳಿ, ಇನ್ನೆರಡು ದಿನ ನೆಟ್ ಸ್ಲೋ ಆಗುತ್ತೆ.. ನಿಮ್ಮ ಫೇಸ್’ಬುಕ್, ವಾಟ್ಸಪ್ ಎಲ್ಲವೂ ಸ್ಲೋ ಆಗಿ ವರ್ಕ್ ಆಗುತ್ತೆ.. ಡೋಂಟ್ ವರಿ, ಜಾಸ್ತಿ ತಲೆಕೆಡಿಸ್ಕೊಬೇಡಿ ಇದು ಎರಡು ದಿನ ಮಾತ್ರ. ಯಾಕೆ ಗೊತ್ತಾ..?
ಅಂತರ್ಜಾಲ ಪೂರೈಸುವ ಪ್ರಮುಖ ಸರ್ವರ್ ನಲ್ಲಿ ಕೆಲವು ಮೂಲಭೂತ ಕೆಲಸಗಳು ಮತ್ತು ದುರಸ್ತಿ ಕಾರ್ಯ ನಡೆಸಲಿರುವುದರಿಂದ ಮುಂದಿನ ಎರಡು ದಿನಗಳಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿ ಸ್ವಲ್ಪ ಸಮಯ ವ್ಯತ್ಯಯವುಂಟಾಗಬಹುದು ಎಂದು ರಷ್ಯಾ ತಿಳಿಸಿದೆ.


Also read: ಕೇರಳದಲ್ಲಿ ಸಿಕ್ಕಿಬಿದ್ದ ಉಗ್ರ ಸಲಿಂ ಬಾಯ್ಬಿಟ್ಟ ಸ್ಫೋಟಕ ಸುದ್ದಿಗಳು; ದೇಶಾದ್ಯಂತ ಟೆರರ್ ಅಟ್ಯಾಕ್’ಗೆ ನಡೆದಿತ್ತಾ ಸಂಚು..??

ಡೊಮೈನ್​ ನೇಮ್​ ಸಿಸ್ಟಮ್ ಅಥವಾ ಇಂಟರ್​ನೆಟ್​​ ಅಡ್ರೆಸ್​ ಬುಕ್​ನ್ನು ಕಾಪಾಡುವ ಕ್ರಿಪ್ಟೋಗ್ರಾಫಿಕ್​ ಕೀಯನ್ನು ಬದಲಾಯಿಸುತ್ತಿದೆ. ಈ ಸಂದರ್ಭದಲ್ಲಿ ಸರ್ವರ್​ ಡೌನ್​ ಆಗಿ ನೆಟ್​ವರ್ಕ್​ ಸಮಸ್ಯೆಗಳು ಎದುರಾಗಲಿವೆ. ಹೆಚ್ಚುತ್ತಿರುವ ಸೈಬರ್​ ದಾಳಿಗಳಿಗೆ ಕಡಿವಾಣ ಹಾಕಲು ಇದು ಅನಿವಾರ್ಯವಾಗಿದೆ ಎಂದು ಐಸಿಎಎಸ್​ಎನ್​ ತಿಳಿಸಿದೆ. ಇದರಿಂದ ಕೆಲ ಕಾಲ ಮುಖ್ಯ ಡೊಮೈನ್​ ಸರ್ವರ್​ ಮತ್ತು ಸಂಬಂಧಿಸಿದ ನೆಟ್​ವರ್ಕ್​ ಮೂಲಸೌಕರ್ಯಗಳ ಕಾರ್ಯನಿರ್ವಹಿಸದ ಕಾರಣ ಜಗತ್ತಿನಾದ್ಯಂತ ಅಂತರ್ಜಾಲ ಬಳಕೆದಾರರು ಈ ತೊಂದರೆ ಎದುರಿಸಬೇಕಿದೆ. ಇಂಟರ್​ನೆಟ್​ ಕಾರ್ಪೊರೇಷನ್​ ಆಫ್​ ಅಸೈನ್ಡ್ ನೇಮ್ಸ್​ ಅಂಡ್ ನಂಬರ್ಸ್​ ಈ ಕಾರ್ಯ ನಡೆಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Also read: ಕರ್ನಾಟಕ ಸರ್ಕಾರದ ಮೈತ್ರಿಯಲ್ಲಿ ಒಂದು ವಿಕೆಟ್ ಪತನ; ಮತೊಮ್ಮೆ ಶುರುವಾಯಿತೇ ಅಪರೇಷನ್ ಕಮಲ?

ಡಿಎನ್​ಎಸ್​ ರಕ್ಷಣೆ ಮತ್ತು ಬದ್ಧತೆಗೆ ಈ ಕಾರ್ಯ ಅನಿವಾರ್ಯವಾಗಿದೆ. ಮುಂದಿನ 48 ಗಂಟೆಗಳಲ್ಲಿ ಕೆಲವು ವೆಬ್ ಸೈಟ್ ಪೇಜ್ ಗಳು ಸಿಗದೆ ಅಥವಾ ವಹಿವಾಟು ನಡೆಸಲು ಸಾಧ್ಯವಾಗದಿರಬಹುದು. ಹಳೆಯ ಇಂಟರ್ನೆಟ್ ಸರ್ವಿಸ್ ಬಳಕೆಯನ್ನು ಉಪಯೋಗಿಸುತ್ತಿರುವವರಿಗೆ ಇಂಟರ್ನೆಟ್ ಸಿಗದಿರಬಹುದು. ಅಲ್ಲದೆ, ಬಳಕೆದಾರರು ಹಳೆಯ ISP ಅನ್ನು ಬಳಸುತ್ತಿದ್ದರೆ ಜಾಗತಿಕ ಜಾಲಬಂಧವನ್ನು ಪ್ರವೇಶಿಸುವ ಅನಾನುಕೂಲತೆಯನ್ನು ಎದುರಿಸಬಹುದು ಎಂದು ಕಮ್ಯುನಿಕೇಷನ್​ ರೆಗ್ಯುಲೇಟರಿ ಅಥಾರಿಟಿ ಎಂದು ತಿಳಿಸಿದೆ..