ಕಾವೇರಿ ಜಗಳದಲ್ಲಿ ಬರಿದಾದ ಹೇಮಾವತಿ

0
759

ತಮಿಳುನಾಡಿಗೆ ಅಳಿದುಳಿದ ನೀರು ಬಿಟ್ಟಮೇಲೆ ಖಾಲಿ ಆಗಿದ್ದು ಕೆಆರ್‍ಎಸ್, ಕಬಿನಿ ಜಲಾಶಯಗಳು ಮಾತ್ರವಲ್ಲ, ಹೇಮಾವತಿ ಜಲಾಶಯ ಕೂಡ…

ಹಂಗೆ ನೋಡಿದರೆ ಇತ್ತೀಚಿನ ವಾ‍ರಗಳಲ್ಲಿ ಕೆಆರ್‍ಎಸ್ ನಿಂದ ಬಿಟ್ಟ ನೀರು ಹೇಮಾವತಿ ಜಲಾಶಯದಿಂದ ಹರಿದುಬಂದಂತದ್ದು..

37 tmcft ನೀರು ಸಾಮರ್ಥ್ಯದ ಹೇಮಾವತಿ ಜಲಾಶಯದಿಂದ ಜೂನ್ ನಿಂದ ಮೊನ್ನೆ ಮೊನ್ನೆ ತನಕ 23 tmcft ನೀರು ಕೆ‍ಆರ‍್ಎಸ್ ಮೂಲಕ ತಮಿಳುನಾಡಿನ ಪಾಲಾಗಿದೆ..

ಒಟ್ಟು  37 tmcft ಶೇಖರಣಾ ಸಾಮರ್ಥ್ಯ ಹೊಂದಿರುವ ಹೇಮಾವತಿ ಅಣೆಕಟ್ಟಲ್ಲಿ ಪ್ರಸ್ತುತ ಇರುವುದು ಕೇವಲ 7 tmcft ನೀರು

ಇರುವ 7 tmcft ಯಲ್ಲಿ ಉಪಯೋಗಕ್ಕೆ ಉಳಿದಿರುವುದು ಮೂರೆ ಮೂರು tmc ನೀರು! ಹೀಗಾಗಿ ತಮಿಳರ ಬೆಳೆಗೆ ಸಮೃದ್ಧಿ ತರಲು ಕೇವಲ ಮಂಡ್ಯ ಮೈಸೂರು ಚಾಮರಾಜನಗರ ಜಿಲ್ಲೆಗಳ ರೈತರು ಬಲಿ ಆಗಿಲ್ಲ , ಹಾಸನ, ತುಮಕೂರು ಜಿಲ್ಲೆಗಳ ರೈತರ ರಕ್ತವೂ ಬಸಿದು ಹೋಗಿದೆ!

ಮುಂಗಾರು ಕೈ ಕೊಟ್ಟ ಪರಿಣಾಮ ಹೇಮಾವತಿ ಜಲಾಶಯದ ಸಂಗ್ರಹ ಕಡಿತವಾಗಿದೆ . ರೈತರು ಇದರಿಂದ ತ್ರೀವವಾಗಿ ಕಂಗೇಟು , ಕೃಷಿ ಬಿಟ್ಟು ದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ

ಜೂನ್ ರಿಂದ, ಇಲ್ಲಿತನಕ 16 tmcft ನೀರನ್ನು ಹೇಮಾವತಿ ರಿಂದ ಕೃಷ್ಣ ರಾಜ ಸಾಗರ ಅಣೆಕಟ್ಟಿಗೆ ಬಿಡಲಾಗಿದೆ. ಸಾಮಾನ್ಯವಾಗಿ, ಹೇಮಾವತಿಯಾ 1/3 ಭಾಗದ ನೀರನ್ನು ಮಾತ್ರ  ಕೆ.ರ್.ಎಸ್ ಗೆ ಬಿಡಲಾಗುತ್ತೆ ಆದರೆ ಈ ಬಾರಿ 1/2 ಕಿಂತ ಜಾಸ್ತಿ ಬಿಡಲಾಗಿದೆ