ನಿಮ್ಮ ಮುಖದ ಬ್ಯೂಟಿಯನ್ನು ಹಾಳು ಮಾಡುವ ಮೊಡವೆ ಕಲೆಗಳನ್ನ ಒಂದೇ ವಾರದಲ್ಲಿ ಹೊಗಿಸುವ ಮನೆಮದ್ದುಗಳು ಇಲ್ಲಿವೆ ನೋಡಿ..

0
1354

ನೀವೆಲ್ಲ ಸುಂದರವಾಗೇ ಇರ್ತೀರ ಆದ್ರೆ ಏನ್ ಮಾಡೋದ್ ಮೊಡವೆ ಅನ್ನೂ ಪಿಶಾಶಿಗಳು ಮುಖದ ತುಂಬಾ ಹುಟ್ಟಿ ನಿಮ್ಮ ಬ್ಯೂಟಿಯನ್ನೇ ಕೊಂದು ಹಾಕುತ್ತೇವೆ. ಇವುಗಳಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರು ಮತ್ತೆ ಮತ್ತೆ ಆಗುತ್ತೇವೆ. ಕೆಲವೊಂದು ವಯಸ್ಕರಲ್ಲಿ ಅಂತು ಮುಖದಲ್ಲಿ ಬಿಡುವಿಲ್ಲದೆ ಆಗಿ ವಿಪರಿತ ತೊಂದರೆಯನ್ನುಂಟು ಮಾಡುತ್ತೇವೆ. ಇಂತಹ ಮೊಡವೆಗಳು ಆದರೆ ಅವುಗಳನ್ನು ಹಿಚ್ಚಿಗಿ, ಕೆರೆದು ಉಗುರುಗಳಿಂದ ಚುಚ್ಚಿ ಹಿಂಸೆಯಿಂದ ಒಡಿದು ತೆಗೆದು ನಂತರ ಕಲೆಯಾಗಿ ಮುಖದಲ್ಲೆ ಮನೆಮಾಡಿ ನಿಮ್ಮ ಸೌದರ್ಯವನ್ನೆ ಹಾಳುಮಾಡುತ್ತೆವೆ ಈ ಮೊಡವೆ ಎಂಬ ಪಿಶಾಶಿಗಳು. ಇಂತಹ ಮೊಡವೆಗಳಿಗೆ ಮನೆಮದ್ದುಗಳಿವೆ ಇವುಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡು ಉಪಯೋಗಿಸಿ ನೋಡಿ ಕೇವಲ ಒಂದೇ ವಾರದಲ್ಲಿ ಮೊಡವೆಗಳು ಮಾಯವಾಗುತ್ತೆ.

ಮೊಡವೆಗಳಾಗಲು ಮೊದಲು ನೀವು ಮಾಡುವ ತಪ್ಪುಗಳಲೇನು ಗೊತ್ತೇ..?

ಅತಿಯಾದ ಆಯಿಲ್ ಇರುವ ಆಹಾರ ಸೇವನೆ, ಮತ್ತು ಹಸಿ ತರಕಾರಿ, ತಾಜಾ ಹಣ್ಣು ಹಾಲು ಸೇವಿಸದೆ ಇರುವುದು ಹೆಚ್ಚು ಹೆಚ್ಚು ಕರಿದ ತಿಂಡಿ ತಿನುಸುಗಳನ್ನು ತಿನ್ನುವುದು. ಮುಖ್ಯಕಾರಣವಾದರೆ ಚರ್ಮದಲ್ಲಿರುವ ಜೀವಸತ್ವಗಳ ಕೊರತೆಯಿಂದ ಬರುತ್ತದೆ ಹಾಗಾಗಿ ಅಶುಚಿ ಅಸ್ವಸ್ಥತೆಯು ಮೊಡವೆಗಳಿಗೆ ಕಾರಣವಾಗಿವೆ. ಮತ್ತು ಮೊಡವೆಗಳನ್ನು ಕೈಯಿಂದ ಹಿಂಸಿಸುವುದು ಕೂಡ ಕಲೆಗಳಾಗಲು ಕಾರಣವಾಗಿವೆ. ಆದರಿಂದ ಚಿಕಿತ್ಸೆ ಮೊದಲು ಇವುಗಳನ್ನು ಬಿಡುವುದು ಒಳ್ಳೆಯದು.

ಮೊಡವೆ ಕಲೆಗಳಿಗೆ ಮನೆ ಮದ್ದುಗಳು:

 • ಕೊತ್ತಂಬರಿ ಸೊಪ್ಪಿನ ರಸಕ್ಕೆ ನಿಂಬೆ ರಸವನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರವಾಗಿ ಕಲೆಗಳು ಮಾಯವಾಗುತ್ತವೆ.
 • ದಾಲ್ಚಿನ್ನಿ ಚಕ್ಕೆ ಯನ್ನು ನಿಂಬೆರಸದಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು ಹೋಗುತ್ತೇವೆ.
 • ನಿಂಬೆಹಣ್ಣಿನ ಸಿಪ್ಪೆ ಅಥವಾ ನಿಂಬೆ ಎಲೆಗಳನ್ನು ಅರಿಶಿಣದ ಜೊತೆ ಬೆರೆಸಿ ನುಣ್ಣಗೆ ಅರೆದು ಪೇಸ್ಟ್ ತಯಾರಿಸಿಕೊಳ್ಳಬೇಕು ನಂತರ ಮುಖಕ್ಕೆ ಹಚ್ಚಬೇಕು ಆಗ ಮೊಡವೆಗಳು ದೂರವಾಗುತ್ತವೆ.

 • ಶುದ್ಧವಾದ ಹಾಲನ್ನು ಕುದಿಸಿ ನಂತರ ಕೆಳಗಿಳಿಸಿ ಅದಕ್ಕೆ ಒಂದು ಚಮಚ ಗ್ಲಿಸರಿನ್ ಹಾಗೆಯೇ ಒಂದು ಚಮಚ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು ಆಗ ಮೊಡವೆ ಕಲೆಗಳು ದೂರವಾಗುತ್ತವೆ.
 • ಸೇಬಿನ ತಿರುಳನ್ನು ಅರೆದು ಚೆನ್ನಾಗಿ ಪೇಸ್ಟ್ ತಯಾರಿಸಿ ನಂತರ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುವುದು
  ಸೇಬಿನಲ್ಲಿಉತ್ಕೃಷ್ಟವಾದ ಜೀವಸತ್ವಗಳು ಇರುವುದರಿಂದ ಮುಖ ಕಾಂತಿಯುಕ್ತವಾಗುವುದು.
 • ಶ್ರೀಗಂಧವನ್ನು ತೇಯ್ದು ದಾಲ್ಚಿನ್ನಿ ಚಕ್ಕೆಯ ಪುಡಿಯನ್ನು ಬೆರೆಸಿ ನಂತರ ಮುಖಕ್ಕೆ ಲೇಪಿಸುವುದರಿಂದ ಮೊಡವೆಗಳು ಅಲ್ಲಿಯೇ ನಶಿಸಿ ಹೋಗುತ್ತವೆ.
 • ಪ್ರತಿದಿನ ಮುಖಕ್ಕೆ ಎಳೆ ನೀರು ಹಚ್ಚಿ ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಮೊಡವೆಗಳು ನಿವಾರಣೆಯಾಗುತ್ತೇವೆ.

 • ಕಿತ್ತಲೆ ಹಣ್ಣಿನ ರಸ ಮತ್ತು ಸಿಪ್ಪೆ ಯನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ದೂರಾಗುತ್ತವೆ ಹಾಗೆಯೇ ಮುಖದ ಮೇಲಿರುವ ಮೊಡವೆಗಳು ಅದರ ಕಲೆಗಳು ದೂರವಾಗುತ್ತವೆ.
 • ಸೌತೆಕಾಯಿಯ ರಸ ಅಥವಾ ಸೌತೆಕಾಯಿಯನ್ನು ಬಿಲ್ಲೆಗಳಾಗಿ ಹಚ್ಚಿಕೊಂಡು ಮುಖಕ್ಕೆ ಹಚ್ಚುವುದು ಬಿಲ್ಲೆಗಳನ್ನು ಮುಖವನ್ನು ತಿಕ್ಕುವುದರಿಂದ ಮೊಡವೆಗಳು ದೂರವಾಗುವುದು ಮುಖದ ಮೇಲಿರುವ ಕಪ್ಪು ಕಲೆಗಳು ಹೋಗುತ್ತೇವೆ.
 • ಹಾಲಿನ ಕೆನೆಗೆ ಕಡಲೆಹಿಟ್ಟು ಅರಿಶಿಣ ನಿಂಬೆರಸ ಬೆರೆಸಿ ಚೆನ್ನಾಗಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದು ಹಾಗೆಯೇ ಮೊಡವೆಗಳು ದೂರವಾಗುತ್ತವೆ ಈ ಪೇಸ್ಟ್ ಅನ್ನು ಇಡೀ ಶರೀರಕ್ಕೆ ಸಂಪೂರ್ಣವಾಗಿ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುವುದು.