ಚಾಲಕರು ಸಂಚಾರ ನಿಯಮ ಉಲ್ಲಂಘನೆಯಿಂದ ಸರ್ಕಾರಕ್ಕೆ ದಂಡದ ಮೂಲಕ ಸೇರುತ್ತಿರುವ ಮೊತ್ತ ಕೇಳಿದ್ರೆ ಶಾಕ್ ಆಗ್ತೀರ!!

0
254

ರಸ್ತೆಮೇಲೆ ವಾಹನಗಳನ್ನು ಓಡಿಸುವುದೇ, ಕಷ್ಟವಾಗಿದೆ. ಎಲ್ಲ ಸರಿಯಿದ್ದರು ಒಂದಿಲ್ಲದೊಂದು ನಿಯಮ ಹೇಳಿ ಪೊಲೀಸರು ಸುಲಿಗೆ ಮಾಡುತ್ತಾರೆ ಎನ್ನುವ ಭಯ ಎಲ್ಲ ಕಡೆಯಲ್ಲಿ ಹುಟ್ಟಿಕೊಂಡಿದೆ. ಆದರೆ ವಾಹನ ಸವಾರರು ನಿಯಮ ಪಾಲಿಸದೆ ಬೇಕಾಬಿಟ್ಟಿ ವಾಹನ ಚಲಾಯಿಸಿ ಅಪಘಾತ ನಡೆಯಲು ಕಾರಣರಾಗುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆ. ಆದರೆ ಇದರ ನಡುವೆ ರಾಜ್ಯದಲ್ಲಿ ತಿಂಗಳಿಗೆ ಕೋಟ್ಯಾಂತರ ರೂ. ದಂಡವನ್ನು ವಸೂಲಿ ಮಾಡುತ್ತಿದ್ದು. ಇದೆ ದೊಡ್ಡ ದಂದೆಯಾಗಿದೆ ಎಂದು ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿಯಂತೆ ಚಿಕ್ಕಮಂಗಳುರಿನಲ್ಲಿ 7 ತಿಂಗಳಲ್ಲಿ ವಸೂಲಿ ಮಾಡಿದ ದಂಡ ಕೇಳಿದರೆ ಶಾಕ್ ಆಗುತ್ತೆ.

Also read: ಇನ್ಮುಂದೆ ಪಾನ್ ಕಾರ್ಡ್​ ಕಡ್ಡಾಯವಲ್ಲ; ಆದಾಯ ತೆರಿಗೆ ವಿವರ ಸಲ್ಲಿಸಲು ಪಾನ್ ಬದಲು ಆಧಾರ್​ ಕಾರ್ಡ್​​ ಬೇಕು..

ಹೌದು ಚಿಕ್ಕಮಂಗಳೂರು ಜಿಲ್ಲಾದ್ಯಂತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬರಿ 7 ತಿಂಗಳಲ್ಲಿ ವಾಹನಗಳ ಚಾಲಕರು ಮತ್ತು ಮಾಲಕರಿಂದ ಜಿಲ್ಲಾ ಪೊಲೀಸ್ ಇಲಾಖೆ ಬರೋಬ್ಬರಿ 1 ಕೋ. 30 ಲಕ್ಷ (1,30,01,300) ರೂ. ದಂಡ ಸಂಗ್ರಹಿಸಿದ್ದು, ಇದು ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಜಿಲ್ಲಾದ್ಯಂತ ಈ ಸಾಲಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಹಾಗೂ ದಂಡ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. ಇದಕ್ಕೆ ಎಸ್ಪಿ ಹರೀಶ್ ಪಾಂಡೆ ನೇತೃತ್ವದ ಜಿಲ್ಲಾ ಪೊಲೀಸ್ ಇಲಾಖೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳ ಸಂಬಂಧ ಕಟ್ಟುನಿಟ್ಟಿನ ಕ್ರಮವಹಿಸಿರುವುದಕ್ಕೆ ಸಾಕ್ಷಿಯಾಗಿದೆ.

ಭಾರತೀಯ ಮೋಟಾರು ವಾಹನ ಕಾಯ್ದೆಯಂತೆ ನಿರ್ದಿಷ್ಟ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸಿರುವ ನಿರ್ಧಿಷ್ಟ ಪ್ರಮಾಣದ ದಂಡಗಳಡಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಈ ದಂಡವನ್ನು ಸಂಗ್ರಹಿಸಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ ಪರಿಣಾಮ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಸಾಲಿನಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ದಂಡ ಕಟ್ಟಿದವರಿಂದ ಹೆಚ್ಚಿನ ಹಣವನ್ನೇ ವಸೂಲಿ ಮಾಡಲಾಗಿದೆ.

Also read: ಮುಂದಿನ ವರ್ಷ ಮಾರ್ಚ್ ಒಳಗೆ ಮನೆ ಖರೀದಿಸುವವರಿಗೆ ಮತ್ತು ಕಟ್ಟುವವರಿಗೆ, ಬಜೆಟ್ ಘೋಷಣೆ ಪ್ರಕಾರ 7 ಲಕ್ಷ ರುಪಾಯಿ ಉಳಿಸಬಹುದು ಹೇಗೆ ಅಂತ ಓದಿ!!

ಯಾವುದಕ್ಕೆ ಎಷ್ಟು ದಂಡ?

ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ ಕಳೆದ ಜನವರಿ ತಿಂಗಳಲ್ಲಿ ಜಿಲ್ಲಾದ್ಯಂತ 11,677 ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಪೊಲೀಸರು ಒಟ್ಟು 14,36,200 ರೂ. ದಂಡವನ್ನು ಸಂಗ್ರಹಿಸಿದ್ದಾರೆ. ಅಂತೆಯೇ ಫೆಬ್ರವರಿ ತಿಂಗಳಲ್ಲಿ 13,113 ಪ್ರಕರಣ ದಾಖಲಾಗಿದ್ದು, ಒಟ್ಟು, 17,00400 ರೂ. ದಂಡ ಸಂಗ್ರಹಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಜಿಲ್ಲಾದ್ಯಂತ ಒಟ್ಟು 17,395 ಪ್ರಕರಣಗಳು ದಾಖಲಾಗಿದ್ದು, ಒಟ್ಟು 20,85,800 ರೂ. ದಂಡ ಸಂಗ್ರಹವಾಗಿದೆ. ಎಪ್ರಿಲ್ ತಿಂಗಳಲ್ಲಿ 14,690 ಪ್ರಕರಣಗಳು ದಾಖಲಾಗಿದ್ದು, 17,07600 ರೂ.ದಂಡ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 16,149 ಪ್ರಕರಣಗಳು ದಾಖಲಾಗಿದ್ದು, 19,36900 ರೂ. ದಂಡ ಸಂಗ್ರಹವಾಗಿದೆ.

Also read: ಶೂನ್ಯ ಖರ್ಚಿನಲ್ಲಿ ಬೋರ್‌ವೆಲ್ ರೀಚಾರ್ಜ್ ಕಂಡು ಹಿಡಿದ ಮಾದರಿ ರೈತ; ಬತ್ತಿ ಹೋದ ಬೋರ್‌ವೆಲ್-ಗಳಲ್ಲಿ ಮತ್ತೆ ನೀರು ಭರಿಸುವುದು ಹೇಗೆ ಅಂತ ಇಲ್ಲಿದೆ ನೋಡಿ..

ಇತ್ತೀಚೆಗೆ ಸುಪ್ರೀಂ ಕೋರ್ಟ್ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರು, ಕಾರ್ಮಿಕರನ್ನು ಸಾಗಿಸುವುದನ್ನು ನಿಷೇದಿಸಿ ಕಾನೂನು ಜಾರಿ ಮಾಡಿದೆ. ಈ ಕಾನೂನನ್ನು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಕಟ್ಟುನಿಟ್ಟಿನಿಂದ ಜಾರಿ ಮಾಡುತ್ತಿದೆ. ಅಲ್ಲದೇ ಈ ಸಂಬಂಧ ಸರಕು ಸಾಗಣೆ ವಾಹನಗಳ ಮಾಲಕರು, ಚಾಲಕರ ಸಭೆ ಕರೆದು ತಿಳುವಳಿಕೆ ನೀಡಲಾಗಿತ್ತು. ಆದರೂ ಜಿಲ್ಲಾಡಳಿತದ ಆದೇಶ ಮೀರಿ ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಸಾಗಿಸುತ್ತಿದ್ದ ಆರೋಪ ಮೇರೆಗೆ ಸಂಚಾರಿ ಪೊಲೀಸರು ಇದುವರೆಗೂ 867 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಒಟ್ಟು 1,75,700 ರೂ. ದಂಡ ಸಂಗ್ರಹಿಸಿದೆ.