ಜೀವನವನ್ನೆ ಬೇಸರ ಮಾಡುವ ತುರಿಕೆಗೆ ಇಲ್ಲಿವೆ ನೋಡಿ ಮನೆ ಮದ್ದುಗಳು..

0
1035

ವಾತಾವರಣ ಏರುಪೇರಿನಿಂದ ಮತ್ತು ಆಹಾರದ ಕ್ರಮಗಳಿಂದ ದೇಹದಲ್ಲಿ ಹಲವಾರು ಬದಲಾವಣೆಗಳಾಗಿ ತುರಿಕೆಯಂತ ಸಮಸ್ಯೆ ವುಂಟಾಗುತ್ತೇವೆ. ತುರಿಕೆ ಎನ್ನುವುದು ಅಂಟು ರೋಗದ ಹಾಗೆ ಎಲ್ಲಿ ಯಾವ ಸಮಯದಲ್ಲಿ ಬರುತ್ತೆ ಅಂತ ತಿಳಿಯುದಿಲ್ಲ.

ಈ ಸಮಸ್ಯೆಯಿಂದ ಬರಿ ಆರೋಗ್ಯ ಕೆಡುವುದು ಅಷ್ಟೇ ಅಲ್ಲ ಮರ್ಯಾದೆ ಕೂಡ ಹಾಳಾಗುತ್ತೆ. ಇದರಿಂದ ಬೇಸತ್ತ ರೋಗಿಗಳು ಎಷ್ಟೇ ಚಿಕಿತ್ಸೆ ಪಡೆದುಕೊಂಡರು ಸ್ವಲ್ಪ ದಿನಗಳ ನಂತರ ಮತ್ತೆ ಮತ್ತೆ ಮರಳಿ ಬರುತ್ತೆ ಹಾಗಾದ್ರೆ ಇದಕ್ಕೆ ಶಾಸ್ವತವಾದ ಪರಿಹಾರ ಇಲ್ವಾ ಅಂತ ಹಲವರ ಪ್ರಶ್ನೆಯಾಗಿದೆ. ಇಂತಹ ಮಾರಕ ತುರಿಕೆಗೆ ರಾಮಬಾಣವಾಗಿ ಈ ಮನೆಮದ್ದುಗಳಿಂದ ನೀವೇ ಗುಣಪಡಿಸಿಕೊಳ್ಳಬಹುದು.

ಲಿಂಬೆ ರಸ:

ಲಿಂಬೆಯಲ್ಲಿರುವ ಪ್ರತಿಜೀವಕ, ಉರಿಯೂತ ನಿವಾರಕ ಹಾಗೂ ತುರಿಕೆ ನಿವಾರಕಾ ಗುಣಗಳು ಚರ್ಮದ ತುರಿಕೆಯನ್ನು ನಿವಾರಿಸಲು ಅತ್ಯುತ್ತಮವಾಗಿವೆ. ಇದಕ್ಕಾಗಿ ಎರಡು ಚೆನ್ನಾಗಿ ಹಣ್ಣಾದ ಲಿಂಬೆಗಳಿಂದ ರಸವನ್ನು ಸಂಗ್ರಹಿಸಿ ಈ ರಸವನ್ನು ತ್ವಚೆಯ ಮೇಲೆ ಹತ್ತಿಯುಂಡೆಯನ್ನು ಬಳಸಿ ತೆಳುವಾಗಿ ಲೇಪಿಸಿಕೊಳ್ಳಿ. ಇದು ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ತುಳಸಿ ಎಲೆಗಳು:

ತುಳಸಿ ಬರಿ ಪೂಜೆಗೆ ಮಾತ್ರವಲ್ಲ ಇದರಲ್ಲಿ ಹಲವಾರು ಆರೋಗ್ಯದ ಗುಣಗಳಿವೆ. ತುಳಸಿ ಎಲೆಗಳಲ್ಲಿ ತುರಿಕೆ ನಿವಾರಿಸಲು ಇದರಲ್ಲಿರುವ ಕೆಲವು ಪೋಷಕಾಂಶಗಳು ನೆರವಾಗುತ್ತವೆ. ಸುಮಾರು ಆರು ತುಳಸಿ ಎಲೆಗಳನ್ನು ಅರೆದು ಇದಕ್ಕೆ ಕೊಂಚ ಕೊಬ್ಬರಿ ಎಣ್ಣೆಯನ್ನು ಬೆರೆಸಿ ತುರಿಕೆ ಇರುವ ತ್ವಚೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ.

ಕೊಬ್ಬರಿ ಎಣ್ಣೆ:

ತ್ವಚೆಯ ತುರಿಕೆ ಹಾಗೂ ಗಾಯಗಳಿಂದ ಉತ್ತಮ ಶಮನ ನೀಡಲು ಕೊಬ್ಬರಿ ಎಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಾ ಬರಲಾಗಿದೆ. ತುರಿಕೆಯ ತೊಂದರೆಯಿಂದ ತಕ್ಷಣದ ಶಮನ ಒದಗಿಸಲು ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ ಸಾಕಾಗುತ್ತದೆ. ಕೊಂಚ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ತುರಿಕೆ ಇರುವ ತ್ವಚೆಯ ಮೇಲೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಎಣ್ಣೆಯನ್ನು ಸಂಜೆ ಹಚ್ಚಿ ಇಡಿಯ ರಾತ್ರಿ ಹಾಗೇ ಇರಲು ಬಿಟ್ಟು ಮರುದಿನ ಸ್ನಾನ ಮಾಡಿ.

ಬೇವಿನ ಎಲೆಗಳು:

ಇದರ ಶಿಲೀಂಧ್ರ ನಿವಾರಕ, ಪ್ರತಿಜೀವಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯುತ ನಿವಾರಕ ಗುಣಗಳು ಹಲವಾರು ತ್ವಚೆಯ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಇದಕ್ಕಾಗಿ ಬೇವಿನ ಎಣ್ಣೆಯನ್ನು ತೆಳುವಾಗಿ ಲೇಪಿಸಿಕೊಳ್ಳಬಹುದು ಅಥವಾ ಕೊಂಚ ಎಲೆಗಳನ್ನು ಅರೆದು ಲೇಪನದಂತೆಯೂ ಬಳಸಬಹುದು.

ಅಡುಗೆ ಸೋಡಾ:

ಒಂದು ವೇಳೆ ತುರಿಕೆ ಸತತವಾಗಿದ್ದು ತುರಿಸಿದ ಬಳಿಕ ಚಿಕ್ಕದಾಗಿ ಗಾಯಗಳಾಗಿದ್ದರೆ ಇದಕ್ಕೆ ಅಡುಗೆ ಸೋಡಾ ಉತ್ತಮ ಪರಿಹಾರವಾಗಿದೆ. ಇದರ ಉರಿಯೂತ ನಿವಾರಕ ಗುಣ ತ್ವಚೆಗೆ ತಂಪು ನೀಡುತ್ತದೆ. ಒಂದು ಕಪ್ ಅಡುಗೆ ಸೋಡಾವನ್ನು ಸ್ನಾನದ ತೊಟ್ಟಿಯ ನೀರಿನಲ್ಲಿ ಬೆರೆಸಿ ಈ ನೀರಿನಲ್ಲಿ ಸುಮಾರು ಅರ್ಧ ಘಂಟೆಯಾದರೂ ದೇಹವನ್ನು ಮುಳುಗಿಸಿಡಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ.

ಪುದೀನಾ ಎಣ್ಣೆ:

ಈ ಎಣ್ಣೆಯಲ್ಲಿರುವ ಉರಿಯೂತ ನಿವಾರಕ, ಪ್ರತಿಜೀವಕ ಹಾಗೂ ಶಮನಕಾರಿ ಗುಣಗಳು ತುರಿಕೆಯಿಂದ ಶೀಘ್ರವೇ ಉಪಶಮನ ಒದಗಿಸುತ್ತದೆ. ವಿಶೇಷವಾಗಿ ಸ್ಕೇಬೀಸ್ ಹಾಗೂ ಡರ್ಮಾಟೈಟಿಸ್ ರೋಗಗಳಿಂದ ಎದುರಾದ ತುರಿಕೆಗೆ ಈ ವಿಧಾನ ಅತ್ಯುತ್ತಮವಾಗಿದೆ, ತುರಿಕೆ ಇರುವ ಭಾಗದಲ್ಲಿ ಕೆಲವು ತೊಟ್ಟು ಪುದಿನಾ ಎಣ್ಣೆಯನ್ನು ಸ್ನಾನದ ತೊಟ್ಟೆಯಲ್ಲಿ ಹಾಕಿ ಈ ನೀರಿನಲ್ಲಿ ದೇಹವನ್ನು ಅರ್ಧಘಂಟೆಯವರೆಗೆ ಮುಳುಗಿಸಿಡಿ. ಇನ್ನೊಂದು ವಿಧಾನವೆಂದರೆ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆಗೆ ನಾಲ್ಕು ತೊಟ್ಟು ಪುದಿನಾ ಎಣ್ಣೆಯನ್ನು ಬೆರೆಸಿ ಈ ಎಣ್ಣೆಯನ್ನು ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ.

ಲೋಳೆಸರ:

ಲೋಳೆಸರದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂದ್ರನಿವಾರಕ ಗುಣ ತ್ವಚೆಯ ತುರಿಕೆಯನ್ನೂ ಇಲ್ಲವಾಗಿಸುತ್ತದೆ. ಒಂದು ಲೋಳೆಸರದ ಕೋಡನ್ನು ಮುರಿದು ಇದರ ತಿರುಳನ್ನು ಸಂಗ್ರಹಿಸಿ. ಈ ತಿರುಗಳನ್ನು ನೇರವಾಗಿ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಸಾಸಿವೆ ಎಣ್ಣೆ:

ತುರಿಕೆ ಇರುವ ಚರ್ಮಕ್ಕೆ ಸಾಸಿವೆ ಎಣ್ಣೆಯೂ ಉತ್ತಮವಾದ ಉಪಶಮನ ಒದಗಿಸ್ತುತದೆ ಹಾಗೂ ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ತ್ವಚೆಯ ಆರೋಗ್ಯ ಹೆಚ್ಚಿಸುತ್ತದೆ. ತುರಿಕೆ ಇರುವ ಭಾಗದಲ್ಲಿ ಕೊಂಚ ಸಾಸಿವೆ ಎಣ್ಣೆಯನ್ನು ತೆಳ್ಳಗೆ ಹಚ್ಚಿ ಕೆಲವು ಘಂಟೆಗಳ ಕಾಲ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಜೇನು ತುಪ್ಪ:

ಜೇನಿನಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ತುರಿಕೆಯನ್ನೂ ಇಲ್ಲವಾಗಿಸುತ್ತವೆ. ಒಂದು ವೇಳೆ ಕೀಟದ ಕಡಿತದಿಂದ ತುರಿಕೆ ಎದುರಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಕೀಟ ಕಡಿದ ಭಾಗಕ್ಕೆ ಜೇನನ್ನು ನೇರವಾಗಿ ಹಚ್ಚಿಕೊಳ್ಳಬಹುದು. ಪರ್ಯಾಯವಾಗಿ ಸಮಪ್ರಮಾಣದ ಜೇನು ಮತ್ತು ಆಲಿವ್ ಎಣ್ಣೆಯನ್ನು ಬೆರೆಸಿಯೂ ತುರಿಕೆ ಇರುವ ಭಾಗಕ್ಕೆ ಹಚ್ಚಿಕೊಳ್ಳಬಹುದು.

ಆಲಿವ್ ಎಣ್ಣೆ:

ಚರ್ಮದ ಉರಿಯೂತ, ತುರಿಕೆ, ಕೆಂಪಗಾದ ಚರ್ಮ ಮೊದಲಾದವುಗಳನ್ನು ಆಲಿವ್ ಎಣ್ಣೆ ಸಮರ್ಥವಾಗಿ ಕಡಿಮೆಗೊಳಿಸುತ್ತದೆ. ಇದರ ಬ್ಯಾಕ್ಟೀರಿಯಾನಿವಾರಕ, ಶಿಲೀಂಧ್ರ ನಿವಾರಕ ಗುಣಗಳು ಚರ್ಮಕ್ಕೆ ತಂಪನ್ನೆರೆಯುತ್ತವೆ. ತುರಿಕೆ ಇರುವ ಭಾಗಕ್ಕೆ ಕೊಂಚ ಆಲಿವ್ ಎಣ್ಣೆಯನ್ನು ನೇರವಾಗಿ ಹಚ್ಚಿಕೊಳ್ಳುತ್ತಾ ಬಂದರೆ ಕೆಲವೇ ದಿನಗಳಲ್ಲಿ ತುರಿಕೆ ಇಲ್ಲವಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.