ಬಿರು ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿಯುವುದು ಒಳ್ಳೇದೇ, ಆದರೆ ಫುಟ್ಪಾತ್-ನಲ್ಲಿ ಸಿಗುವ ಕಬ್ಬಿನ ಹಾಲು ಕುಡಿಯಬೇಕೆ? ಬೇಡವೇ?

0
415

ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬಿಸಿಲಿನ ಝಳಕ್ಕೆ ತಂಪಿನ ವಾತಾವರಣಕ್ಕಾಗಿ ಜನ ಹಾತೊರೆಯುವಂತಾಗಿದೆ. ದಾಹ ತಣಿಸಲು ಹಾತೊರೆಯುವ ಜನರಿಗೆ ರಸ್ತೆ ಬದಿಯಲ್ಲಿ ಸಿಗುವ ಕಬ್ಬಿನ ಹಾಲಿನ ಮಾರಾಟ ಅಂಗಡಿಗಳು ಅಮೃತ ಸಂಜೀವಿನಿಯಂತೆ ಕೈಹಿಡಿಯುತ್ತಿವೆ. ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಕಬ್ಬಿನ ಹಾಲಿನ ಸೇವನೆಯಿಂದ ದೇಹವು ಕೂಡಲೇ ಸಮಸ್ಥಿತಿಗೆ ಬಂದು ಉರಿಶಮನವಾಗಿ ಚೈತನ್ಯ ವೃದ್ಧಿಸುವುದು.

Also read: ನಿದ್ದೆ ಬರ್ತಿಲ್ಲ ಅಂತ ಮಾತ್ರೆ ಮತ್ತು ಮಧ್ಯಪಾನದ ಮೊರೆ ಹೋಗ್ತಿರೋವ್ರಿಗೆ ಇಲ್ಲಿದೆ ಸಿಹಿ ಸುದ್ದಿ..ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ಕಬ್ಬಿನ ಹಾಲು ರಾಮಬಾಣ ಆಗೋದ್ರಲ್ಲಿ ಸಂಶಯನೇ ಇಲ್ಲ…ಹೇಗೆ ಅಂತೀರಾ ಮುಂದೆ ಓದಿ..

ತಾಜಾ ಕಬ್ಬಿನ ಹಾಲು ಸೇವನೆಯಿಂದ ದೇಹಕ್ಕೆ ಬೇಕಾದ ಪ್ರೋಟಿನ್, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ನೈಸರ್ಗಿಕವಾಗಿ ಪಡೆಯಬಹುದು. ಇತರ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನ ಹಾಲಿನಲ್ಲಿ ಶರ್ಕರ ಪಿಷ್ಟ (ಕಾರ್ಬೊಹೈಡ್ರೇಟ್‌) ಮತ್ತು ಪ್ರೊಟೀನ್‌ಗಳು ಯಥೇಚ್ಚವಾಗಿವೆ. ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಪೊಟಾಶಿಯಂ, ವಿಟಮಿನ್‌ ಎ, ಬಿ ಮತ್ತು ಸಿ ಕೂಡ ಧಾರಾಳವಾಗಿದೆ.

Also read: ವಿಟಮಿನ್ಗಳ ಆಗರ, ಪೋಷಕಾಂಶಯುಕ್ತ ಪಾನೀಯ ಕಬ್ಬಿನ ಹಾಲು

ಕಬ್ಬಿನ ಹಾಲು ಪಿತ್ಥಶಮನಕಾರಿ ಎಂದು ಕೂಡ ಹೇಳಲಾಗುತ್ತದೆ. ಬೇಸಿಗೆಯಲ್ಲಿ ಪಿತ್ಥ ಹೆಚ್ಚಾಗುವುದರಿಂದ ಇದಕ್ಕೆ ಕಬ್ಬಿನ ಹಾಲಿನ ಸೇವನೆ ತುಂಬಾ ಒಳ್ಳೆಯದು ಎಂಬುದು, ಆಯುರ್ವೇದ ತಜ್ಞರ ಅಭಿಪ್ರಾಯ. ಪುದೀನಾ, ಜೀರಿಗೆ, ಚಾಟ್‌ ಮಸಾಲಾ, ನಿಂಬೆರಸ ಇದರಲ್ಲಿ ಬೆರೆಸಿ ಸೇವಿಸಿದರೆ ಇನ್ನು ಒಳ್ಳೆಯದು. ಇದಲ್ಲದೆ ಕಬ್ಬಿನ ಹಾಲಿನ ಸೇವನೆಯು ಯಕೃತ್ತಿನ ಆರೋಗ್ಯವನ್ನು ವೃದ್ಧಿಸಿ ಡಿಟೊಕ್ಸಿಫಿಕೇಷನ್ ಪ್ರೋಸೆಸ್ ಅನ್ನು ಹೆಚ್ಚು ಮಾಡುತ್ತದೆ. ಅದಲ್ಲದೆ ಕ್ಯಾನ್ಸರ್, ಹೃದ್ರೋಗ, ಮಧುಮೇಹದಂತಹ ಹತ್ತು ಹಲವು ಖಾಯಿಲೆಗಳು ಬಾರದಂತೆ ತಡೆಗಟ್ಟುತ್ತದೆ.

Also read: ಬೇಸಿಗೆಯ ಬಿಸಿಯಲ್ಲಿ ತಣ್ಣಗಾಗಲು ರಾಸಾಯನಿಕ ಭರಿತ ಕೋಲಾ ಪಾನೀಯಗಳನ್ನು ಸೇವಿಸೋ ಬದಲು ಮನೆಯಲ್ಲೇ ಈ ಅರೋಗ್ಯಕರ ಪಾನೀಯಗಳನ್ನು ಮಾಡಿಕೊಳ್ಳಿ!!

ಇಷ್ಟೆಲ್ಲಾ ಉಪಯೋಗವಿರುವ ಕಬ್ಬಿನ ಹಾಲನ್ನು ಈ ರೀತಿ ರಸ್ತೆ ಬದಿಗಳಲ್ಲಿ ಕುಡಿಯುವುದು ಎಷ್ಟು ಸುರಕ್ಷಿತ..? ಹೀಗೆ ರಸ್ತೆ ಬದಿಯಲ್ಲಿ ಕುಡಿಯುವಾಗ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳವುದು ಒಳ್ಳೆಯದು. ಮೊದಲಿಗೆ ಶುಚಿತ್ವಕ್ಕೆ ಗಮನ ಹರಿಸಬೇಕು. ಕೆಲವು ಅಂಗಡಿಗಳಲ್ಲಿ ನೊಣ, ಧೂಳು ಇರುವೆ ಇರುವ ಕಡೆಗಳಲ್ಲಿಯ ಹಾಲು ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತವೆ. ಅಂತಹ ಅಂಗಡಿಗಳಲ್ಲಿ ಹಾಲನ್ನು ಸೇವಿಸುವುದರಿಂದ ನಮ್ಮ ದೇಹ ಅನಾರೋಗ್ಯಕ್ಕೆ ಬೀಳಬಹುದು ಆದ್ದರಿಂದ ಶುಚಿತ್ವದ ಕಡೆ ಗಮನ ಅತ್ಯಗತ್ಯ. ನಂತರ ಅಲ್ಲಿ ಬಳಸುವ ನೀರು, ಐಸ್‌ ಸಹಿತ ಇತರ ವಸ್ತುಗ‌ಗಳ ಬಗ್ಗೆಯೂ ಎಚ್ಚರ ವಹಿಸುವುದು ಅತ್ಯಗತ್ಯ. ಕೊನೆಯದಾಗಿ ಮೊದಲೇ ಶೇಖರಮಾಡಿಟ್ಟಿರುವ ಕಬ್ಬಿನ ಹಾಲಿನ ಸೇವನೆ ಒಳ್ಳೆಯದಲ್ಲ ಸಾದ್ಯವಾದಷ್ಟು ಆಗಿಂದಾಗಲೇ ತಾಜಾ ಶುದ್ಧ ಹಾಲನ್ನೇ ಕುಡಿದರೆ ಒಳ್ಳೆಯದು.