ಸರ್ಪಸುತ್ತು ಸರ್ಪದೋಷದಿಂದ ಬರುವಂತದಲ್ಲ.. ಈ ರೋಗದ ಕಾರಣ ಲಕ್ಷಣ ಉಪಚಾರದ ಬಗ್ಗೆ ಇಲ್ಲಿದೆ ಮಾಹಿತಿ…!!

0
4097

“ಸರ್ಪಸುತ್ತು” ಈ ಕಾಯಿಲೆಗೂ ಸರ್ಪಕ್ಕೂ ಯಾವುದೆ ಸ೦ಬ೦ಧ ಇಲ್ಲ ಅಂದ್ರೆ ನೀವು ನಂಬಲೇಬೇಕು..!!

ಸರ್ಪಸುತ್ತು ರೋಗಕ್ಕೆ ನಾಗದೇವನ ಮುನಿಸು ಮತ್ತು ದೈವ ದೋಷ ಖಂಡಿತಾ ಕಾರಣವಲ್ಲ. ಚಿಕ್ಸಿತೆಯಿಂದ ಪೂರ್ತಿಯಾಗಿ ಗುಣಪಡಿಸಬಹುದಾದ ಕಾಯಿಲೆಯಂತೂ ಹೌದು. ಬೆನ್ನಿಗೆ ಜಾಜಿನಿಂದ ಗರುಡನ ರೇಖಾಚಿತ್ರ ಬರೆಯುವರು. ಆಗ ಅದು ಹರಡುವುದು ನಿಲ್ಲುವುದು. ಹೀಗೆ ಅನೇಕ ಮೂಢನಂಬಿಕೆಗಳಿವೆ. ಈ ಕಾಯಿಲೆಗೂ ಸರ್ಪಕ್ಕೂಯಾವುದೆ ಸ೦ಬ೦ಧ ಇಲ್ಲ. ಆದ್ದರಿ೦ದ ಇದಕ್ಕಾಗಿ ಸರ್ಪ ಸ೦ಸ್ಕಾರ ಸೇವೆ ಮಾಡಿಸು ಆವಶ್ಯವಿಲ್ಲ. ನಿಮ್ಮ ಎಲ್ಲಾ ಗೊಂದಲ, ನೋವು, ಮತ್ತು ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ ನೋಡಿ.

ಸರ್ಪ ಸುತ್ತು ವೈರಸ್ ನಿ೦ದ ಉ೦ಟಾಗುವ ಒಂದು ಬಗೆಯ ರೋಗ. ಚಿಕನ್ ಪೊಕ್ಸ್ (ಕೋಟ್ಲೆ)ಉ೦ಟು ಮಾಡುವ ರೋಗಾಣು ಇದಕ್ಕೂ ಕಾರಣ. ಈ ರೋಗದಲ್ಲಿ ನರಗಳ ಸೋ೦ಕು ಆಗುವುದು. ಇದರಿ೦ದ ಎದೆ ,ಮುಖ ಅವಯವಗಳ ನರಗಳ ಉದ್ದಕ್ಕು ಗುಳ್ಳೆಗಳು ಏಳುತ್ತವೆ ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆ ಹರಡುತ್ತದೆ. ದೇಹದ ಯಾವುದೇ ಭಾಗಗಳಿಗೆ ಅಂದರೆ ಮುಖ, ಕಣ್ಣು, ಕಿವಿ, ಬಾಯಿ, ಹಣೆ, ಕೈಕಾಲು, ಜನನಾಂಗಗಳಲ್ಲಿ ಇದು ವ್ಯಾಪಿಸಬಹುದು.

ದೇಹದಲ್ಲಿ ಸರ್ಪಸುತ್ತು ಗೋಚರಿಸುವ ಒಂದೆರಡು ವಾರಗಳ ಮೊದಲಿನಿಂದ ವೈರಸ್ ಸೋಂಕು ಕ್ರೀಯಾಶೀಲವಾಗಿರುತ್ತದೆ. ಈ ಸಮಯದಲ್ಲಿ ಚಳಿ, ಜ್ವರ, ತಲೆನೋವು, ಬೆನ್ನುನೋವು, ಸಂಧಿ ನೋವು, ಸುಸ್ತು, ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತವೆ. ಮುಖ ಅಥವಾ ಬಾಯಿಯಲ್ಲಾದರೆ ಮುಖ ವಕ್ರತೆ, ಕತ್ತಿನ ಗ್ರಂಥಿ ಊತ, ಕಣ್ಣಲ್ಲಾದರೆ ಕಣ್ಣಿನ ಊತ, ದೃಷ್ಟಿ ದೋಷ, ಕಿವಿಯಲ್ಲಾದರೆ ಶ್ರವಣ ದೋಷ ಕಾಣಿಸಿಕೊಳ್ಳುವುದು.

ಆಯುರ್ವೇದದಲ್ಲಿ ಈ ಕಾಯಿಲೆಗೆ ಅತ್ಯುತ್ತಮ ಚಿಕಿತ್ಸೆ ಇದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.

ಆಯುರ್ವೇದದ ಮನೆಮದ್ದುಗಳು :

1. ಬೇವಿನ ಎಲೆಯ ರಸವನ್ನು ಮೈಗೆಲ್ಲಾ ಹಚ್ಚಬೇಕು .

2. ಗರಿಕೆಯನ್ನು ಬೇರುಸಮೇತ ಕಿತ್ತು ಚೆನ್ನಾಗಿ ನೀರಿನಲ್ಲಿ ತೊಳೆದು, ನಂತರ ನುಣ್ಣಗೆ ಅರೆದು ಸರ್ಪ ಸುತ್ತು ಇರುವ ಜಾಗಕೆಲ್ಲಾ ಹಚ್ಚಬೇಕು.

3. ಗೋಟಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನದಲ್ಲಿ ನಾಲ್ಕು ಅಥವಾ ಐದುಬಾರಿ ಮೈಗೆಲ್ಲ ಲೇಪಿಸಬೇಕು.

4. ಕೆಂಪು / ಬಿಳಿ ಅಗಸೆ ಸೊಪ್ಪನ್ನು ತಣ್ಣೀರಿನಲ್ಲಿ ನುಣ್ಣಗೆ ಅರೆದು ಹಚ್ಚಬೇಕು .

5. ನೆಲ್ಲಿ ಪುಡಿ, ಲಾವಂಚ, ಸೊಗದೆ ಬೇರು ಪ್ರತಿಯೊಂದನ್ನು 10 -15 ಗ್ರಾಂ ನಷ್ಟು ತೆಗೆದುಕೊಂಡು ಬೇರೆ ಬೇರೆಯಾಗಿ ಪುಡಿಮಾಡಿ 8 ರಷ್ಟು ನೀರು ಬೆರೆಸಿ ಕುದಿಸಿ, ಅರ್ಧ ನೀರು ಹಿಂಗಿದ ಮೇಲೆ ಒಲೆಯಿಂದ ಇಳಿಸಿ, ಆರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು , ಎರಡು ಚಮಚ ಕ್ಕಿಂತ ಹೆಚ್ಚು ಸೇವಿಸಬಾರದು . (21 ದಿನ ತಪ್ಪದೆ ಈ ಕ್ರಿಯೆ ಮುಂದುವರಿಸಬೇಕು)
ಸೂಚನೆ: ಸೊಗದೆ ಬೇರಿನಿಂದ ತಯಾರಿಸಿದ ಈ ಮದ್ದು ಬಳಸುವ ಸಮಯದಲ್ಲಿ ಉದ್ದಿನಕಾಳು, ಹುರಳಿ ಕಾಳು , ಈರುಳ್ಳಿ ಬೆಳ್ಳುಳ್ಳಿ , ಜಿಡ್ಡು ಪದಾರ್ಥ, ಬೆಲ್ಲ, ಸಿಹಿ ಪದಾರ್ಥ ಮತ್ತು ಹಗಲು ನಿದ್ರೆ ಮಾಡಬಾರದು.

 

ಸೊಗದೆ ಬೇರು
ಲಾವಂಚ

ಮುನ್ನೆಚ್ಚರಿಕೆಗಳು

ಸರ್ಪಸುತ್ತು ರೋಗದಿಂದ ಬಳಲುತ್ತಿರುವವರು ರೋಗ ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ರೋಗ ಶಂಕಿತ ವ್ಯಕ್ತಿ ಬಳಸಿದ ತಟ್ಟೆ, ಕರವಸ್ತ್ರ, ಬಟ್ಟೆ ಮುಂತಾದವುಗಳನ್ನು ಬಳಸಬಾರದು. ಸಾಮಾನ್ಯವಾಗಿ ಈ ರೋಗಿಗಳನ್ನು ಏಕಾಂತದಲ್ಲಿ ಇರಿಸಿ, ಇತರರಿಗೆ ರೋಗ ಹರಡದಂತೆ ನೋಡಿಕೊಳ್ಳಲಾಗುತ್ತದೆ. ಈ ವೈರಾಣು ರೋಗಿಯಿಂದ ರೋಗಿಗೆ ಸ್ಪರ್ಶದ ಮುಖಾಂತರ ಹರಡಬಹುದು. ಗುಳ್ಳೆಗಳಿಂದ ಬರುವ ದ್ರವಗಳಿಂದ ಮತ್ತು ಉಸಿರಾಟದ ಗಾಳಿಯಿಂದ ಹರಡುವ ಸಾಧ್ಯತೆ ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ.