ಸಮುದ್ರದಲ್ಲಿ ಇದೆಯಂತೆ ಹೈಡ್ರೋಜನ್ ಅನಿಲ!

0
408

ಸಾಗರದಾಳದಲ್ಲಿರುವ ಕಲ್ಲು ಬಮಡೆಗಳಿಂದ ಕೂಡಿದ ರಾಚನಿಕ ಪದರದಡಿಯಲ್ಲಿ ಬೃಹತ್ ಪ್ರಮಾಣದ ಹೈಡ್ರೊಜನ್ ಅನಿಲ (ಎಚ್ 2) ವಿರಬಹುದೆಂದು ನೂತನ ಅಧ್ಯಯನವೊಂದು ಹೇಳಿದೆ. ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ಈ ಆನ್ವೇಷಣೆ ಮಾಡಿದ್ದು, ಭವಿಷ್ಯದಲ್ಲಿ ಶುದ್ಧ ಮತ್ತು ಪರ್ಯಾಯ ಇಂಧನವಾಗಿ ಇದನ್ನು ಬಳಕೆ ಮಾಡಬಹುದೆಂದು ಹೇಳಿದ್ದಾರೆ.

ಡ್ಯೂಕ್ ವಿವಿಯ ಸಂಶೀಧಕರು ನಿರ್ಮಿಸಿದ ಮಾದರಿಯಲ್ಲಿ ಸಮುದ್ರದ ತಳಪದರದಲ್ಲಿ ಈ ಹಿಂದೆ ಅಂದಾಜಿಸಿದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಎಚ್2 ಲಭ್ಯತೆ ಇರಬಹುದೆಂದು ತೋರಿಸಲಾಗಿದೆ. ಈ ಸ್ಟಡಿ ಮಾಡೆಲ್ ಅನ್ನು ಖಚಿತಗೊಳಿಸಲು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಭೂಮಿಯ ರಚನೆ ಮತ್ತು ಇಲ್ಲಿನ ಜೀವವಿಕಾಸದ ಕುರಿತೂ ಸಾಗರದ ಆಳದಲ್ಲಿರುವ ಹೈಡ್ರೋಜನ್ ಅನಿಲ ನಿಕ್ಷೇಪಗಳು ಮಾಹಿತಿ ಒದಗಿಸಲಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಅಧ್ಯಯನದ ಸಿದ್ಧಾಂತಗಳು ನಿಜವೇ ಆದಲ್ಲಿ ಭವಿಷ್ಯದಲ್ಲಿ ನಾವು ಹೈಡ್ರೋಜನ್ ಅನಿಲದ ಉತ್ಪಾದನೆಗೆ ಪರ್ಯಾಯ ಮೂಲದ ಹುಡುಕಾಟ ನಡೆಸಬೇಕಿಲ್ಲ. ಈಗ ವಾಹನಗಳು, ಫ್ಯಾಕ್ಟರಿಗಳು ವಾತಾವರಣಕ್ಕೆ ಅತಿಯಾದ ಇಂಗಾಲವನ್ನು ರಸ್ತೆಗಿಳಿಸಲಾಗುತ್ತದೆ. ಎಲ್ಲಾದರೂ ಸಮುದ್ರದ ಅಡಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೈಡ್ರೋಜನ್ ಅನಿಲ ಲಭಿಸಿದರೆ ವಾಯುಮಾಲಿನ್ಯ ಕಡಿಮೆಯಾಗಲಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ.