ಗಣೇಶ್ ಗಬ್ಬಕೆ ಊರಿಗೆ ಹೋಗುವರಿಗೆ ಬಿಗ್ ಶಾಕ್; ಹಣ ಸುಲಿಗೆಗೆ ನಿಂತ ಖಾಸಗಿ ಬಸ್-ಗಳ ಮೊದಲೇ ಕೆಎಸ್ ಆರ್ ಟಿಸಿ ದರ ದುಪ್ಪಟ್ಟು,!

0
252

ಗಣೇಶನ ಹಬ್ಬಕೆ ಊರಿಗೆ ಹೋಗುವರಿಗೆ ಬಿಗ್ ಶಾಕ್ ಒಂದು ತಿಳಿದಿದ್ದು, ಬಸ್ ದರದಲ್ಲಿ ಭಾರಿ ಏರಿಕೆ ಆಗಿದೆ ಈಗಾಗಲೇ ಖಾಸಗಿ ಬಸ್-ಗಳು 3 ರಷ್ಟು ದರವನ್ನು ಏರಿಸಿದ್ದು, ಈ ಹಿನ್ನೆಲೆಯಲ್ಲೇ KSRTC ಕೂಡ ದರ ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾಹಿತಿ ನೀಡಿದ್ದು, ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ಸಿಎಂ ಯಡಿಯೂರಪ್ಪ ಅವರೊಂದಿಗೆ ಅಂತಿಮವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಕಳೆದ ಬಾರಿ ದರ ಹೆಚ್ಚು ಮಾಡುವ ಖಾಸಗಿ ಬಸ್-ಗಳ ಮೇಲೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು, ಒಂದು ವೇಳೆ ದರ ಹೆಚ್ಚಳ ಮಾಡಿದರೆ ಪರವಾನಿಗೆ ರದ್ದು ಮಾಡುವುದಾಗಿವು ಹೇಳಿತ್ತು.

Also read: ದೇವರ ಹರಕೆಗೆ ಮಾನವರ ಬಲಿ; ಸ್ವಂತ ಮಕ್ಕಳನ್ನೇ ವಿಚಿತ್ರವಾಗಿ ಬಲಿ ಪದ್ಧತಿ, ಒಂದೇ ಸ್ಥಳದಲ್ಲಿ ಪತ್ತೆಯಾದವು 227 ಮಕ್ಕಳ ಅಸ್ಥಿಪಂಜರ.!

ಆಗಸ್ಟ್ 30ರ ಸಂಜೆಯಿಂದಲೇ ವೀಕೆಂಡ್ ಸಂಭ್ರಮ, ವೀಕೆಂಡ್ ಬೆನ್ನಲ್ಲೇ ಗೌರಿ, ಗಣೇಶ ಹಬ್ಬ. ತಮ್ಮೂರಿಗೆ ಹೋಗಲು, ಪ್ರವಾಸಕ್ಕೆ ಹೋಗಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಬಾರಿ ಖಾಸಗಿ ಬಸ್-ಗಳಿಂತ ಮೊದಲು ಸರ್ಕಾರಿ ಬಸ್-ಗಳೇ ಏರಿ ಪ್ರಯಾಣಿಕರಿಗೆ ಆಘಾತ ತಂದಿದೆ. ಏಕೆಂದರೆ ಪ್ರೈವೇಟ್ ಬಸ್‍ಗಳು ಲೂಟಿ ಮಾಡೋದು ಸಾಮಾನ್ಯವಾಗಿತ್ತು. ಈಗ ಈ ಸಾಲಿಗೆ ಸರ್ಕಾರಿ ಸಾರಿಗೆ ಸಂಸ್ಥೆಯೂ ಸೇರಿಕೊಂಡಿದೆ. ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್ ದರ ದುಪ್ಪಟ್ಟು ಮಾಡಿದರೆ, ಇತ್ತ ಕೆಎಸ್ ಆರ್ ಟಿಸಿ ಅವರು ನಾವೇನ್ ಕಡಿಮೆ ನಾವೂ ಸಹ ಜಾಸ್ತಿ ಮಾಡುತ್ತೇವೆ ಎಂದು ಪ್ರಯಾಣಿಕರ ಮೇಲೆ ಹೊರೆ ಹಾಕಲು ಮುಂದಾಗಿದ್ದಾರೆ. ಈ ಕುರಿತು KSRTC ಮುಂಗಡ ಬಸ್ ಬುಕಿಂಗ್ ಫೋನ್ ಮಾಡಿ ವಿಚರಿಸಿದ್ದಾಗ. ಮೊದಲು 500 ಇದ್ದ ದರವನ್ನು ಒಂದೇ ಬಾರಿಗೆ 1200 ಏರಿಸಲಾಗಿದೆ. ಎಂದು ಹೇಳಿದ್ದಾರೆ.

Also read: ದಿಢೀರನೆ ಕಣ್ಣು ಬಿಟ್ಟ ಕಲ್ಲು ದೇವರು; ದೇವರು ನೋಡಲು ಬಂದ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು. ಕೊನೆಗೆ ತಿಳಿಯಿತು ಕಣ್ಣಿನ ಅಸಲಿಯತ್ತು..

ಅದರಂತೆ ಬಸ್ ಟಿಕೆಟ್ ದರ ಕೇಳಿ ಪ್ರಯಾಣವನ್ನೇ ಕ್ಯಾನ್ಸಲ್ ಮಾಡಲು ನಿರ್ಧರಿಸಿಬಿಟ್ಟಿದ್ದಾರೆ. ಉದಾಹರಣೆಗೆ ಹೇಳಬೇಕೆಂದರೆ ಬೆಂಗಳೂರಿನಿಂದ ವಿಜಯವಾಡಕ್ಕೆ ಹೋಗಲು 5,000 ರೂ. ಕೊಡಬೇಕು. ರಾಯಚೂರು, ಗೋವಾ, ಹೈದ್ರಾಬಾದ್ ಗೆ ಹೋಗಲು 3,000 ರೂ. ಆಗುತ್ತೆ. ಅದೂ ಕೂಡಾ ಒನ್ ವೇ ದರ. ವಾಪಸ್ ಬರಲು ಮತ್ತೆ ಅಷ್ಟೇ ಹಣ ತೆರಬೇಕು. ಈ ಕುರಿತು ಹೆಚ್ಚಿನ ಮಾಹಿತಿ ಕೇಳಿದರೆ ಕೆಎಸ್ಆರ್‌ಟಿಸಿ ಸಿಬ್ಬಂದಿ: ನಾರ್ಮಲ್ ಡೇಸ್‍ನಲ್ಲಿ 3,800 ಆಗುತ್ತೆ.. ಈಗ 4,440 ಆಗಿದೆ. ಡಿಸ್ಕೌಂಟ್ 4,200 ಆಗಬಹುದು.. 400 ರೂಪಾಯಿ ಜಾಸ್ತಿಯಾಗಿದೆ.. ನೂರು, ನೂರೈವತ್ತು ರೂಪಾಯಿ ಜಾಸ್ತಿ ಆಗುತ್ತೆ ಎಂದು ಉತ್ತರಿಸಿದ್ದಾರೆ. ಈ ಎಲ್ಲ ದರ ಹಬ್ಬದ ಪ್ರಯಕ್ತವೆಂದು ಕೂಡ ತಿಳಿಸಿದ್ದಾರೆ.

Also read: ರಾಜ್ಯದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತ; ಈ ಜಿಲ್ಲೆಯಲ್ಲಿ ದಲಿತರು ಹೋಟೆಲ್‍ಗೆ ಹೋಗಂಗಿಲ್ಲ, ಕುಡಿಯಲು ನೀರು ಇಲ್ಲ, ಮೆಡಿಕಲ್-ನಲ್ಲಿ ಟ್ಯಾಬ್ಲೆಟ್ ಕೂಡ ಕೊಡಲ್ಲ..

ಇದಕ್ಕಾಗಿ ಹಲವು ಖಾಸಗಿ ಬಸ್ ಕಂಪನಿಗಳ ಆನ್ ಲೈನ್ ಪೋರ್ಟಲ್ ನಲ್ಲಿ ಬಸ್ ಪ್ರಯಾಣ ದರಗಳನ್ನು ನೋಡ್ತಿದ್ದರೆ ಬೆಚ್ಚಿಬೀಳುವಂತಾಗುತ್ತೆ. ಹಬ್ಬದ ಹೆಸರಲ್ಲಿ ನಡೆಯುವ ಈ ಸುಲಿಗೆಯನ್ನು ನಿಯಂತ್ರಿಸೋರು ಯಾರು? ಸರ್ಕಾರಕ್ಕೆ ಈ ಹಗಲು ದರೋಡೆ ಕಾಣ್ತಿಲ್ವಾ ಅನ್ನೋದು ಪ್ರಯಾಣಿಕರ ಪ್ರಶ್ನೆಯಾಗಿದೆ. ಲೆಕ್ಕಾಚಾರದ ಪ್ರಕಾರ ಖಾಸಗಿ ಬಸ್ ಗಳಿಗೆ ಹೋಲಿಸಿದ್ರೆ ಸರ್ಕಾರಿ ಬಸ್ ದರ ಒಂದಷ್ಟು ಸಮಾಧಾನಕರವಾಗಿದೆ. ಜೊತೆಯಲ್ಲೇ ಕೆಎಸ್ ಆರ್ ಟಿಸಿ 1,800 ಹೆಚ್ಚುವರಿ ಬಸ್ ಗಳನ್ನೂ ಓಡಿಸಲು ನಿರ್ಧರಿಸಿದ್ದು ಆಗಸ್ಟ್ 30 ಮತ್ತು 31ರಂದು ಸುಮಾರು 1,800ಕ್ಕೂ ಹೆಚ್ಚು ಬಸ್ಸುಗಳು ಬೆಂಗಳೂರಿನಿಂದ ಹೊರಡಲಿದೆ. ಆಯಾಯ ಊರುಗಳಿಗೆ ಹೋಗಲು ಅನುಕೂಲವಾಗುವಂತೆ, ಮೆಜಿಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಿಲೈಟ್ ಮತ್ತು ಕೆ ಎಚ್ ರಸ್ತೆಯ (ಡಬಲ್ ರೋಡ್) ಶಾಂತಿ ನಗರ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ಸುಗಳು ಹೊರಡಲಿದೆ.