ಟೋಲ್‌ಗಳಲ್ಲಿ ಹಗಲು ದರೋಡೆ; ಸಾವಿರಾರು ಕೋಟಿ ಭ್ರಷ್ಟಾಚಾರ ತೆರೆದಿಟ್ಟ ವಕೀಲರು, ಹೇಗೆ ನಡೆಯುತ್ತಿದ್ದೆ ನೋಡಿ ಭ್ರಷ್ಟಾಚಾರ.!

0
960

ದೇಶದಲ್ಲಿ ಎಷ್ಟೊಂದು ಟೋಲ್-ಗಳಿವೆ ಇವೆಲ್ಲವೂ ಜನರನ್ನು ಏಟಿಎಂ ಆಗಿ ಮಾಡಿಕೊಂಡಿವೆ, ಎನ್ನುವ ಬೃಹತ್ ಭ್ರಷ್ಟಾಚಾರ ಇಬ್ಬರು ವಕೀಲರು ಬಯಲಿಗೆಳದಿದ್ದಾರೆ. ವಕೀಲರು ನೀಡಿದ ಮಾಹಿತಿಯಂತೆ ಸರ್ಕಾರ ಜನರನ್ನು ಹೇಗೆ ಸೂಲಿಗೆ ಮಾಡುತ್ತಿದ್ದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲಿ ನೂರಾರು ಕೋಟಿ ಹಣದಲ್ಲಿ ರಸ್ತೆ ನಿರ್ಮಾಣ ಮಾಡಿ ಸಾವಿರಾರು ಕೋಟಿ ಹಣವನ್ನು ಕಿತ್ತುಕೊಳ್ಳುತ್ತಿರುವ ಟೋಲ್ ವ್ಯವಸ್ಥೆಯ ಬಗ್ಗೆ ಜನರಿಗೆ ಮನವರಿಕೆಯಾಗಬೇಕು. ಏಕೆಂದರೆ ಟೋಲ್-ಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಣ್ಣದಲ್ಲ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಟೋಲ್-ಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ

ಹೌದು ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆದ್ದಾರಿ ಬಳಿ ನಿರ್ಮಿಸಿರುವ ನವಯುಗ ಟೋಲ್‌ ವಿಡಿಯೋ ಒಂದನ್ನು ಮಾಡಿರುವ ಜಗದೀಶ್, ಸಿದ್ದರಾಜು ಎಂಬ ಇಬ್ಬರು ವಕೀಲರು ನವಯುಗ ಟೋಲ್‌ ಅನ್ನೇ ಉದಾಹರಣೆಯಾಗಿಟ್ಟುಕೊಂಡು ಟೋಲ್‌ಗಳು ಮಾಡುತ್ತಿರುವ ಹಗಲು ದರೋಡೆಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ವಾಹನ ಮಾಲೀಕ ವಾಹನ ಖರೀದಿಸುವಾಗಲೇ ರಸ್ತೆ ತೆರಿಗೆ ಕಟ್ಟಿರುತ್ತಾನೆ ಆದರೂ ಸಹ ಟೋಲ್‌ಗಳು ನೂರಾರು ರೂಪಾಯಿ ರಸ್ತೆ ತೆರಿಗೆ ವಸೂಲಿ ಮಾಡುತ್ತವೆ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ಇನ್ನೋವಾ ಕಾರು ಕೊಂಡರೆ ಸುಮಾರು 4.5 ಲಕ್ಷ ರೂಪಾಯಿ ರಸ್ತೆ ತೆರಿಗೆ ಪಾವತಿಸುತ್ತಾನೆ ಹಾಗಿದ್ದರೂ ಈ ಟೋಲ್ ಹೆಸರಲ್ಲಿ ನಿತ್ಯ ಹಣ ಏಕೆ ಕಟ್ಟಬೇಕು? ಎಂಬುದು ಅವರ ಪ್ರಶ್ನೆಯಾಗಿದೆ.

ಈ ವಕೀಲರು ಏರ್‌ಪೋರ್ಟ್ ರಸ್ತೆಯ ನವಯುಗ ಟೋಲ್‌ ಬಗ್ಗೆ ಆರ್‌ಟಿಐ ಅರ್ಜಿ ಹಾಕಿ ಪಡೆದಿರುವ ಮಾಹಿತಿಯನ್ನು ಬಹಿರಂಗ ಗೊಳಿಸಿದ್ದು, ನವಯುಗ ಟೋಲ್ ರಸ್ತೆ ನಿರ್ಮಾಣಕ್ಕೆ 680 ಕೋಟಿ ರೂಪಾಯಿ ಖರ್ಚಾಗಿದೆ. ಈ ರಸ್ತೆಯನ್ನು 2011 ರಲ್ಲಿ ಪ್ರಾರಂಭ ಮಾಡಲಾಗಿದೆ. ಟೋಲ್ ವಸೂಲಿಗೆ ನವಯುಗಕ್ಕೆ ಬರೋಬ್ಬರಿ 20 ವರ್ಷದ ಪರವಾನಗಿ ನೀಡಿದೆ. ದಿನಕ್ಕೆ ಲಕ್ಷಾಂತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇವುಗಳಿಂದ ದಿನಕ್ಕೆ ಕೋಟ್ಯಂತರ ಹಣ ವಸೂಲಿ ಆಗುತ್ತದೆ. ಆರ್‌ಟಿಐ ಮಾಹಿತಿಯಲ್ಲಿ ಕೇಳಿದಂತೆ ಟೋಲ್ ನವರೇ ನೀಡಿರುವ ಮಾಹಿತಿಯ ಪ್ರಕಾರ 2018 ರ ಸೆಪ್ಟೆಂಬರ್ ತಿಂಗಳು ಒಂದರಲ್ಲೇ ಬರೋಬ್ಬರಿ 15.51 ಕೋಟಿ ರೂಪಾಯಿ ವಸೂಲಿ ಆಗಿದೆ. ಇದು ಕೇವಲ ಒಂದು ತಿಂಗಳ ಲೆಕ್ಕವಷ್ಟೆ. ಪ್ರತಿದಿನವೂ ಇಲ್ಲಿ ಓಡಾಡುವ ಗಾಡಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತವೆ.

ತಿಂಗಳಿಗೆ ಸರಾಸರಿ 15 ಕೋಟಿ ವಸೂಲಿ ಆಗುವುದಾದರೆ ಇಪತ್ತು ವರ್ಷಕ್ಕೆ 3.77 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವಸೂಲಿ ಆಗುತ್ತದೆ. ಟೋಲ್ ನಿರ್ಮಾಣಕ್ಕೆ ಖರ್ಚಾಗಿರುವ ವೆಚ್ಚಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಳ. ನಿರ್ಮಾಣ ವೆಚ್ಚಕ್ಕಿಂತಲೂ ಇಷ್ಟೋಂದು ಲಾಭವನ್ನು ಟೋಲ್‌ ಮಾಲೀಕರಿಗೆ ಸರ್ಕಾರ ನೀಡುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಯನ್ನು ವಕೀಲರು ಎತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಪ್ರಾರಂಭವಾದ ಈ ಟೋಲ್‌ಗಳ ಹಾವಿ ದೇಶದಾದ್ಯಂತ ಹೆಮ್ಮಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಇರಲಿ ಕಳೆದ ಒಂದು ವರ್ಷದಿಂದ ರಾಜ್ಯ ಹೆದ್ದಾರಿಯಲ್ಲೂ ಟೋಲ್ ಸಂಗ್ರಹ ಪ್ರಾರಂಭವಾಗಿದೆ.

ಟೋಲ್‌ಗಳಲ್ಲಿ ಏನೆಲ್ಲಾ ಸೇವೆ ಇರಬೇಕು?

ಸುಪ್ರೀಂ ತೀರ್ಪಿನ ಪ್ರಕಾರ, ಟೋಲ್ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು, ಆಂಬುಲೆನ್ಸ್‌ ವ್ಯವಸ್ಥೆ ಇರಬೇಕು, ಶೌಚಾಲಯ ನಿರ್ಮಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಟೋ ವಾಹನಗಳು ಇರಬೇಕು, ಸರ್ವೀಸ್ ರಸ್ತೆಗಳು ಇರಬೇಕು, ರಿಫ್ಲೆಕ್ಟರ್‌ಗಳು ಇರಬೇಕು, ಆದರೆ ನವಯುಗ ಟೋಲ್ ರಸ್ತೆಯಲ್ಲಿ ಆಂಬುಲೆನ್ಸ್ ಆಗಲಿ ಟೋ ವೆಹಿಕಲ್ ಆಗಲಿ ಇಲ್ಲ, ಟೋಲ್ ಬಳಿ ಸರ್ವಿಸ್ ರಸ್ತೆ ಇಲ್ಲ, ಹಳದಿ ಪಟ್ಟಿ ಇಲ್ಲ ಎಂದು ವಕೀಲರು ಸತ್ಯ ಬಯಲಿಗೆಳೆದರು. ಇದೆಲ್ಲ ನೋಡಿದರೆ ದೇಶದಲ್ಲಿ ಆಗುತ್ತಿರುವ ಇಂತಹ ಸೂಲಿಗೆ ಇಂದ ಇಂದು ರಾಜಕಾರಣಿಗಳು ಮೆರೆಯುತ್ತಿರುವುದು ಅನಿಸುತ್ತೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522