ಭೀಕರ ಭೂಕಂಪನದ ಭೀತಿಯಲ್ಲಿ ಹಿಮಾಲಯ..!!!

0
1478

ವಿಜ್ಞಾನಿಗಳ ಪ್ರಕಾರ ಹಿಮಾಲಯದಲ್ಲಿ ಸಂಭವಿಸಲಿರುವ ಭೂಕಂಪನದ ಪ್ರಮಾಣ ರಿಕ್ಟರ್ ಮಾಪನದಲ್ಲಿ 9.25 !!! ಭೂಕಂಪನದ ರಿಕ್ಟರ್ ಪ್ರಮಾಣ 6.5 ಇದ್ದರೂ ಅದು ಅತ್ಯಂತ ವಿನಾಶಕಾರಿ ಆಗಿರುತ್ತದೆ. ಅಂತಹದರಲ್ಲಿ ರಿಕ್ಟರ್ ಪ್ರಮಾಣ 9.25 ಆದರೆ ಅದು ಎಂತಹ ವಿನಾಶಕಾರಿ ಆಗಿರಬೇಕು ಎಂಬುದನ್ನು ಊಹಿಸಲೂ ಭಯವಾಗುತ್ತದೆ. ಅದು ಎಂತಹ ಭಯಾನಕವಾಗಿರುತ್ತದೆ ಎಂಬುದನ್ನು ಅರಿಯಲು ಗುಜರಾತ್‍ನಲ್ಲಿ ಜನವರಿ 26, 2001ರಲ್ಲಿ ಘಟಿಸಿದ ಮೃತ್ಯು ಕಂಪನವನ್ನು ಒಂದು ಕ್ಷಣ ನೆನಪಿಸಿಕೊಳ್ಳೋಣ ಬನ್ನಿ.

Image result for himalaya earthquake

ಅಂದು ದೇಶದ ಗಣರಾಜ್ಯೋತ್ಸವ. ಮುಂಜಾವಿನ 8.46 ಸಮಯ. ಗುಜರಾತಿನ ಜನ ಗಣರಾಜ್ಯೋತ್ಸವದ ಸಡಗರದಲ್ಲಿದ್ದರು. ಒಮ್ಮೆಲೇ ನಿಂತ ನೆಲ ಕಂಪಿಸಿತು. ಭೂಮಿ ಕಂಪನಕ್ಕೊಳಗಾದುದು ಕೇವಲ 2-3 ನಿಮಿಷ ಮಾತ್ರ. ಆದರೆ ಆದ ಅನಾಹುತವನ್ನು ವರ್ಣೀಸಲು ಬಹುಶಃ ಜಗತ್ತಿನ ಯಾವುದೇ ಭಾಷೆಯಲ್ಲೂ ಪದಗಳು ಸಿಗಲಾರವು ಎಂದೇ ಹೇಳಬೇಕು. ಭುಜ್‍ನಲ್ಲಿ ಕೇಂದ್ರೀಕೃತಗೊಂಡಿದ್ದ ಈ ಮೃತ್ಯು ಕಂಪನ ರಿಕ್ಟರ್ ಮಾಪನದಲ್ಲಿ 7.9ರಷ್ಟು ಇದ್ದು ಎಷ್ಟೊಂದು ಶಕ್ತಿಶಾಲಿ ಆಗಿತ್ತೆಂದರೆ ದೂರದ ರಾಜ್ಯಗಳಾದ ತಮಿಳುನಾಡು, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಾಂಡಿಚೇರಿ, ರಾಜಧಾನಿ ದೆಹಲಿ, ಕಾಶ್ಮೀರಗಳ ನೆಲಗಳು ಅಲುಗಾಡಿದವು.

Image result for gujrat earthquake
ಗುಜರಾತಿನಲ್ಲಿ ಆದ ಭೂಕಂಪನದ ಅನಾಹುತ

ಕೇಂದ್ರೀಕೃತ ಸ್ಥಳದಿಂದ ಸುಮಾರು 1500 ಕಿ.ಮೀ. ಗಳಿಗೂ ಹೆಚ್ಚಿನ ದೂರದವರೆಗೆ ಇದು ಹರಡಿತ್ತು. ಗುಜರಾತಿನ 50.000ಕ್ಕೂ ಹೆಚ್ಚು ಜನ ಅಸುನೀಗಿದರು. ಹೃದಯ ವಿದ್ರಾವಕ ಘಟನೆ ಅಂದರೆ 400 ಶಾಲಾ ಮಕ್ಕಳು ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಕ್ಕು ನರಳಿ ಸತ್ತದ್ದು! ರೈಲು ಸಂಚಾರ, ವಿದ್ಯುತ್ ಪೂರೈಕೆ, ದೂರವಾಣಿ ಸೌಲಭ ಎಲ್ಲವೂ ಸ್ಥಗಿತ. ಈ ಭೂಕಂಪನದ ರಿಕ್ಟರ್ ಪ್ರಮಾಣ 7.9. ಆದರೆ ವಿಜ್ಞಾನಿಗಳು ಹೇಳಿದಂತೆ ಹಿಮಾಲಯದಲ್ಲಿ ಸಂಭವಿಸಲಿರುವ ಭೂಕಂಪನದ ರಿಕ್ಟರ್ ಮಾಪನ 9.25! ಭೂವಿಜ್ಞಾನಿಗಳ ಅಂದಾಜಿನ ಪ್ರಕಾರ ಪ್ರತಿವರ್ಷ ಐದು ಲಕ್ಷ ಭೂಕಂಪನಗಳಿಂದ ಭೂಮಿ ತತ್ತರಿಸುತ್ತದೆ. ಆದರೆ ಇವುಗಳಲ್ಲಿ 1000 ಭೂಕಂಪನಗಳು ಮಾತ್ರ ಮೃತ್ಯು ಕಂಪನ ತೀವ್ರತೆ ಹೊಂದಿರುತ್ತವೆ. ಅಂತಹ ಒಂದು ಭೂಕಂಪ ಹಿಮಾಲಯದ ತಪ್ಪಲಲ್ಲಿ ಸಂಭವಿಸುವ ಸೂಚನೆಯನ್ನು ಭೂವಿಜ್ಞಾನಿಗಳು ಕೊಟ್ಟಿದ್ದಾರೆ.