ಹಿಂದಿ ಹೈ ಕಮಾಂಡ್ ಗೆ Bucket ಹಿಡಿಯುತ್ತಿರುವ ಈಶ್ವರಪ್ಪ ಅಂಡ್ ಟೀಮ್.

0
1222

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಸೋಮವಾರ ಮಾತನಾಡಿದ ಹೊರಟ್ಟಿ, ಹಿಂದಿ ರಾಷ್ಟ್ರ ಭಾಷೆ ಎಂಬುದೇನೊ ಸರಿ. ಆದರೆ, ನಮಗೆ ಅರ್ಥ ಆಗುವುದಿಲ್ಲ. ಭಾಷೆ ಅರ್ಥ ಆಗದಿದ್ದ ಮೇಲೆ ಅವರ ಭಾಷಣ ಕೇಳುವ ಉತ್ಸಾಹ ಬರುವುದಿಲ್ಲ ಎಂದರು.

ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದಕ್ಕೆ ವಿಧಾನ ಪರಿಷತ್ತಿನ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರೆ, ಹಿಂದಿ ಭಾಷಣವನ್ನು ಬಿಜೆಪಿ ಸದಸ್ಯರು ಸಮರ್ಥಿಸಿಕೊಂಡರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಸೋಮವಾರ ಮಾತನಾಡಿದ ಹೊರಟ್ಟಿ, ಹಿಂದಿ ರಾಷ್ಟ್ರ ಭಾಷೆ ಎಂಬುದೇನೊ ಸರಿ. ಆದರೆ, ನಮಗೆ ಅರ್ಥ ಆಗುವುದಿಲ್ಲ. ಭಾಷೆ ಅರ್ಥ ಆಗದಿದ್ದ ಮೇಲೆ ಅವರ ಭಾಷಣ ಕೇಳುವ ಉತ್ಸಾಹ ಬರುವುದಿಲ್ಲ ಎಂದರು.

ಬಿಜೆಪಿ ನಾಯಕರಿಗೆ ಬಹುಶಃ ಗೊತ್ತಿಲ್ಲ ಹಿಂದಿ ಕೂಡ ಬರಿ ಒಂದು ಭಾಷೆ ರಾಷ್ಟ್ರ ಭಾಷೆ ಅಲ್ಲ ಅಂತ . ಇವಾಗಿನ ರಾಜ್ಯಪಾಲರು ಬಿಜೆಪಿನವರು ಅಂತ ಅವರಿಗೆ bucket ಹಿಡಿಯವು ಹೊರಟಿದರೆ ಈಶ್ವರಪ್ಪ ಅಂಡ್ ಟೀಮ್.

ಅವರ GK ಯಾಕೋ ವೀಕ್ ಇದೆ . ಹಿಂದಿ ರಾಷ್ಟ್ರ ಭಾಷೆ ಅಲ್ಲ ಅಂತಾನೂ ಗೊತ್ತಿಲ್ಲ . ಅವರಿಗೆ ಸಮರ್ಪಣೆ ಈ ಚಿತ್ರ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಎಸ್‌.ವಿ. ಸಂಕನೂರ, ಹಿಂದಿ ರಾಷ್ಟ್ರಭಾಷೆ. ಹಿಂದಿಯಲ್ಲಿ ಭಾಷಣ ಮಾಡುವುದನ್ನು ನೀವು ಒಪ್ಪದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಎಚ್‌.ಎಂ. ರೇವಣ್ಣ, ರಾಜ್ಯದ ಆಡಳಿತ ಭಾಷೆ ಕನ್ನಡ. ಕನ್ನಡದಲ್ಲಿಯೆ ಭಾಷಣ ಮಾಡಬೇಕಿತ್ತು. ರಾಜ್ಯಪಾಲರು ಏನು ಮಾತನಾಡಿದರು ಎಂಬುದು ಜನಸಾಮಾನ್ಯರಿಗೆ ಅರ್ಥವೇ ಆಗದಿದ್ದರೆ ಹೇಗೆ ಎಂದು ಆಕ್ಷೇಪಿಸಿದರು.

‘ರಾಜ್ಯಪಾಲರು ಬೇರೆ ರಾಜ್ಯಗಳಿಂದ ಬಂದಿರುತ್ತಾರೆ. ಅವರು ಕನ್ನಡ ಕಲಿಯಬೇಕು ನಿಜ. ಆದರೆ, ನಿವಾರ್ಯವಾದಾಗ ಹಿಂದಿಯಲ್ಲಿ ಭಾಷಣ ಮಾಡುವುದು’ ಸಹಜ ಎಂದು ಈಶ್ವರಪ್ಪ ಹೇಳಿದರು.

ಆಗ ರೇವಣ್ಣ ಅವರು, ‘ತಮಿಳುನಾಡಿನಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಮಾತನಾಡಿದ್ದರೆ ಇಡೀ ಸದನವೇ ವಿರೋಧ ವ್ಯಕ್ತಪಡಿಸುತ್ತಿತ್ತು’ ಎಂದರು. ವಿ.ಎಸ್. ಉಗ್ರಪ್ಪ ಮಾತನಾಡಿ, ತ್ರಿಭಾಷಾ ಸೂತ್ರ ಜಾರಿಯಲ್ಲಿರಬಹುದು. ಆದರೆ, ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಕನ್ನಡವೇ ಬಳಕೆ ಆಗಬೇಕು ಹೊರತು ಅನ್ಯಭಾಷೆ ಅಲ್ಲ ಎಂದರು.