ಪ್ರತಿಯೊಬ್ಬ ತನ್ನ ಬದುಕಿನಲ್ಲಿ ಈ ಐದು ವೈಶಿಷ್ಟ್ಯತೆಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆತನ ಬದುಕು ಸಾರ್ಥಕ್ಯ ಗಳಿಸಲು ಸಾಧ್ಯ..!

0
1180

ಐದು ಧರ್ಮ ವೈಶಿಷ್ಟ್ಯತೆಗಳು

ಪರೋಪಕಾರ ;

source: bangla.samakal.net

ಹಿಂದೂ ಜೀವನಶೈಲಿಯ ವೈಶಿಷ್ಟ್ಯತೆಗಳಲ್ಲಿ ಮೂಲ ಭೂತವಾದದ್ದು. ಪರೋಪಕಾರದ ಗುಣ. ತನ್ನಂತೆ ಪರರ ಬಗೆದೊಡೆ ಕೈಲಾಸವಕ್ಕು ಎಂಬ ಸರ್ವಜ್ಞವಾಣಿಯಿಂದಾಗಿ ಮಾನವ ಮಾನವರ ನಡುವಿನ ಶೋಷಣೆ ಜಗಳ ಇರಲಿಲ್ಲ. ಜಿಸಕಾ ಲಾಠಿ ಉಸಕಾ ಭೈಂಸ್ (ಶಕ್ತಿವಂತನಿಗೆ ಬದುಕುವ ಹಕ್ಕು) ಎಂಬ ಬಂಡವಾಳಷಾಹಿ ಚಿಂತನೆ, ಲಿವ್ ಲೆಟ್ ಲಿವ್ (ಬದುಕು ಬದುಕಲು ಬಿಡು ಅಂದರೆ ಈಗ ಬದುಕಿರಲಿ ಮುಂದೆಂದಾದರೂ ನನಗೆ ಬೇಕಾದೀತು) ಎಂಬ ಸಮಾಜವಾದದ ಚಿಂತನೆಗಿಂತ ಹಿಂದುತ್ವದಲ್ಲಿ ಪರಹಿತದಲ್ಲಿ ಸ್ವಹಿತ ಕಾಣುವ ಚಿಂತನೆ ಇದೆ. ಹಲವು ಸಲ ಪರಹಿತಕ್ಕಾಗಿ, ಸಮಾಜ ಮತ್ತು ಗ್ರಾಮಗಳ ಕ್ಷೇಮಕ್ಕಾಗಿ ಸ್ವಂತ ತೊಂದರೆ ಅನುಭವಿಸ ಬೇಕು ಎಂಬ ಚಿಂತನೆ ಹಿಂದು ಜೀವನ ಶೈಲಿಯದ್ದಾಗಿದೆ.

ಅಹಿಂಸೆ:

source: redletterchristians.org

ಹಿಂಸೆ ಎಂದರೆ ಶಾರೀರಿಕ ಯಾತನೆ ಮತ್ತು ಕೊಲ್ಲುವುದಕ್ಕೆ ಮಾತ್ರ ಸೀಮಿತವಾಗಿಡಲಿಲ್ಲ. ಮಾತಿನ ಚಾಟಿಯಿಂದ ಮಾನಸಿಕ, ಬೌದ್ಧಿಕ ಕಿರಿಕಿರಿ ಮಾಡುವುದು, ಮೂಲ ನಂಬಿಕೆಗಳನ್ನು ಮೂಢ ನಂಬಿಕೆಗಳು ಎಂದು ಕರೆವ, ಸಾತ್ವಿಕತೆಗೆ ಕಾರಣವಾಗುವ ಆದರ್ಶಗಳನ್ನು, ತತ್ವಗಳನ್ನು ಕಲುಷಿತ ಗೊಳಿಸುವ ಎಲ್ಲ ಸಂಗತಿಗಳು ಹಿಂಸೆಗಳ ಪಟ್ಟಿಗೆ ಸೇರುತ್ತವೆ. ಅಹಿಂಸೆ ಪಾಲಿಸಲು ಶರೀರ, ಬುದ್ಧಿ., ಮನಸ್ಸು ಮತ್ತು ಆತ್ಮಗಳು ಶಕ್ತಿಯುತವಾಗಿಸಬೇಕು. ಅಹಿಂಸೆ ಪಾಲಿಸಲು ಅವಶ್ಯವಿರುವ ನೀಡುವ ಶಿಕ್ಷೆ ಹಿಂಸೆ ಆಗಲಾರದು ಎಂಬ ಜೀವನ ವಿಧಾನ ಹಿಂದೂ ಜೀವನ ಶೈಲಿಯದ್ದಾಗಿದೆ.

ಪ್ರಾಮಾಣಿಕತೆ:

source: iaspaper.net

ಪರವಾದದ್ದು, ಅನ್ಯರಿಗೆ ಸಂಬಂಧಿಸಿದ ವಸ್ತುಗಳ ಉಪಭೋಗ ನಿರಾಕರಣೆ, ನಡೆ ನುಡಿ ಅಂತರವಿಲ್ಲದ. ಅಂತರಂಗ ಬಹಿರಂಗ ಪಾರದರ್ಶಕವಾಗಿರುವ ಜೀವನ ಸಾಗಿಸುವ, ಅತಿ ಸಂಗ್ರಹ, ಅನೈತಿಕ, ಅಸಂವಿಧಾನಿಕ ಕಾರ್ಯ ಮಾಡದಿರುವುದನ್ನು ಪ್ರಾಮಾಣಿಕತೆ ಎನ್ನುತ್ತಾರೆ.

ಸಂಯಮ ಇಂದ್ರೀಯ ನಿಗ್ರಹ:

source: i.ytimg.com

ಕೈ, ಬಾಯಿ, ಕಚ್ಚೆ ಗಟ್ಟಿಯಾಗಿರುವನು ಜಗಜಟ್ಟಿ ಎಂಬ ಮಾತು ಉತ್ತರ ಕರ್ನಾಟಕ ಜಾನಪದರ ಬಾಯಲ್ಲಿ ನಲಿದಾಡುತ್ತದೆ. ಮನಸ್ಸು ಹೇಳಿದ್ದನ್ನು ಕೇಳುವುದಕ್ಕಿಂತ ಬುದ್ಧಿಯಿಂದ ಕಾರ್ಯನಿರ್ವಹಣೆ. ಇಂದ್ರೀಯಗಳ ದಾಸನಾಗದೇ ಮಾಲೀಕನಾಗಿ ಬದುಕುವುದು ಸರ್ವಶ್ರೇಷ್ಠ ಎಂದು ಹಿಂದು ಧರ್ಮದ ವೈಶಿಷ್ಟ್ಯತೆ.

ಮಾತೃತ್ವದ ಪರಿಕಲ್ಪನೆ:

source: positivepsychologyprogram.com

ಭೂಮಿಯ ಮೇಲಿನ ಭಗವಂತನ ಅವತಾರ ತಾಯಿ. ಮಾತೃ ಹೃದಯ ವಿಶಾಲವಾದದ್ದು. ನಿರಪೇಕ್ಷೆಯಿಂದ ನೀಡುವಂತಹದ್ದು. ಬೇಸರವಿಲ್ಲದೆ, ಲೆಕ್ಕ ಇಡದೇ ಕೊಡುವ ಗುಣ ತಾಯಿಯಲ್ಲಿ ಮಾತ್ರ ಇದೆ. ಈ ರೀತಿ ಗುಣ ಹೊಂದಿರುವ ಭೂಮಿ, ನದಿ, ಗೋವು ಎಲ್ಲವನ್ನು ತಾಯಿ ಎಂದು ಕರೆದು ಕೃತಜ್ಞತೆ ಸಲ್ಲಿಸುವ ಗುಣ ಹಿಂದು ಧರ್ಮದ ವೈಶಿಷ್ಟ್ಯತೆ.