ರಂಜಾನ್ “ರೋಜಾ ಮಾಡಲು ಕೈ ಬಿಟ್ಟ ಅನಾರೋಗ್ಯಕ್ಕೀಡಾದ ಮುಸ್ಲಿಂ ಡ್ರೈವರ್ ಪರವಾಗಿ ಹಿಂದೂ ಅರಣ್ಯ ಅಧಿಕಾರಿ ಮಾಡಿದ್ದು ಏನು ಗೊತ್ತಾ??

0
350

ದೇಶದಲ್ಲಿ ಸಾವಿರಾರು ಜಾತಿ ಧರ್ಮಗಳಿವೆ ಅದರಂತೆ ಪ್ರತಿಯೊಂದು ಧರ್ಮದವರಿಗೆ ಅವರದೇ ಆದ ದೇವರುಗಳು ಇವೆ. ಅದರಲ್ಲಿ ಮುಖ್ಯವಾಗಿ ಹಿಂದೂಗಳು ಗಣೇಶ್, ಶಿವನನ್ನು ಪೂಜಿಸುವ ಹಾಗೆ ಮುಸ್ಲಿಂರು ಅಲ್ಲಾನನ್ನು ಪೂಜಿಸುತ್ತಾರೆ ಅದರಲ್ಲಿ ರಂಜಾನ್ ಬಂತು ಎಂದರೆ ಸಾಕು ಮುಸ್ಲಿಂ ಜನಾಂಗ ತಪ್ಪದೆ ಒಂದು ತಿಂಗಳು ರೋಜಾ ಮಾಡುತ್ತಾರೆ. ಅವರು ಎಷ್ಟೇ ಬಡವರಾದರು, ದೃಷ್ಟರಾದರು ಭಕ್ತಿಯಿಂದ ಉಪವಾಸವನ್ನು ಮಾಡುವ ಪದ್ಧತಿ ಮೊದಲಿನಿಂದ ಬೆಳೆದುಕೊಂಡು ಬಂದಿದೆ. ಇಂತಹ ಉಪವಾಸವನ್ನು ಡ್ರೈವರ್ರೊಬ್ಬರು ಅನಾರೋಗ್ಯದ ಕಾರಣ ಕೈ ಬಿಟ್ಟ ರೋಜಾವನ್ನು ಮುಸ್ಲಿಂ ಡ್ರೈವರ್ ಪರವಾಗಿ ಅರಣ್ಯ ಅಧಿಕಾರಿ ಉಪವಾಸ ಮಾಡಿದ್ದಾರೆ.

 

ಗೌದು ಮಾನವೀಯತೆಗೆ ಹಿಂದೂ, ಮುಸ್ಲಿಂ ಎಂಬ ಭೇದಭಾವವೂ ಇರುವುದಿಲ್ಲ ಎಂಬುದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಉಪವಾಸವೆ ಸಾಕ್ಷಿಯಾಗಿದ್ದು. ಅನಾರೋಗ್ಯದಿಂದಾಗಿ ಉಪವಾಸ ಮಾಡಲು ಸಾಧ್ಯವಿರದ ತನ್ನ ಕಾರಿನ ಡ್ರೈವರ್ ಅವರ ಬದಲಾಗಿ, ಕಾರಿನ ಮಾಲಿಕರೇ ರೋಜಾ ಆಚರಿಸಿದ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಡ್ರೈವರ್ ಬದಲಾಗಿ ರೋಜಾ ಆಚರಿಸಿದವರು ವಿಭಾಗೀಯ ಅರಣ್ಯಾಧಿಕಾರಿ ಆಗಿರುವ ಸಂಜಯ್ ಎಸ್ ಮಾಲಿ ಆಚರಣೆ ಮಾಡಿ ಧರ್ಮದ ವಿರುದ್ದ ಹೋರಾಡುವ ಜನರಿಗೆ ಮನವರಿಕೆ ಮಾಡಿದ್ದಾರೆ.

ಏನಿದು ಡ್ರೈವರ್ ಗಾಗಿ ರೋಜಾ?

ಮಹಾರಾಷ್ಟ್ರದಲ್ಲಿ ಅರಣ್ಯ ಅಧಿಕಾರಿಯಾಗಿರುವ ಸಂಜಯ್ ಎನ್ ಮಾಲಿ ಎನ್ನುವರು ಮೇ 6ರಂದು ತಮ್ಮ ಡ್ರೈವರ್ ಬಳಿ ನೀನು ಉಪವಾಸ ಮಾಡುತ್ತೀಯಾ ಎಂದು ಕೇಳಿದ್ದಾರೆ. ಆಗ ಡ್ರೈವರ್ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನಗೆ ಉಪವಾಸ ಇರಲು ಆಗುವುದಿಲ್ಲ. ಹಾಗಾಗಿ ನಾನು ಉಪವಾಸ ಇರಲ್ಲ ಎಂದು ಹೇಳಿದ್ದಾರೆ. ಆಗ ಡ್ರೈವರ್ ಮಾತು ಕೇಳಿದ ಸಂಜಯ್ ಅವರು, ನಿನ್ನ ಪರವಾಗಿ ನಾನು ಉಪವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ನಂತರ ಮೇ 6 ರಿಂದ ಉಪವಾಸ ಮಾಡುತ್ತಿರುವ ಅವರು ಬೆಳಗ್ಗೆ 4 ಗಂಟೆಗೆ ಎದ್ದು ಸ್ವಲ್ಪ ಆಹಾರವನ್ನು ಸೇವಿಸುತ್ತಾರೆ. ಬಳಿಕ ಸಂಜೆ 7 ಗಂಟೆಗೆ ಊಟ ಮಾಡುವ ಮೂಲಕ ನನ್ನ ಉಪವಾಸವನ್ನು ಕೈ ಬಿಡುತ್ತಾರೆ.

ಈ ಬಗ್ಗೆ ಮಾತನಾಡಿದ ಅವರು ನನಗೆ ರಂಜಾನ್ ಬಗ್ಗೆ ಇದ್ದ ಮಾಹಿತಿಯನ್ನು ಅನುಸರಿಸಿ ಈ ಉಪವಾಸವನ್ನು ಮಾಡಿದೆ. ಇಂತಹ ಆಚರಣೆಗಳನ್ನು ಕೋಮು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲರೂ ರಂಜಾನ್ ಸಮಯದಲ್ಲಿ ಈ ಪದ್ಧತಿಯನ್ನು ಪಾಲಿಸಬೇಕು. ಇದರಿಂದ ಮನಸ್ಸು ಮತ್ತು ದೇಹಗಳೆರಡೂ ಆರೋಗ್ಯಕರವಾಗಿರುತ್ತವೆ. ನನಗೆ ಎಲ್ಲಾ ಧರ್ಮದ ಮೇಲೆ ವಿಶ್ವಾಸ ಇದೆ. ಪ್ರತಿಯೊಂದು ಧರ್ಮ ನಮಗೆ ಒಳ್ಳೆಯದನ್ನು ಕಲಿಸಿಕೊಡುತ್ತದೆ. ನಾವು ಮನುಷ್ಯರನ್ನು ಗೌರವಿಸಬೇಕು. ಬಳಿಕ ಧರ್ಮಗಳನ್ನು ಗೌರವಿಸಬೇಕು. ಉಪವಾಸ ಮಾಡಿದ ನಂತರ ನನಗೆ ಒಳ್ಳೆಯ ಅನುಭವ ಆಯಿತು. ನಾವು ಮೊದಲು ಎಲ್ಲವನ್ನೂ ಮಾನವೀಯತೆಯ ದೃಷ್ಟಿಯಿಂದ ನೋಡಬೇಕು, ಧರ್ಮ ನಂತರ. ಪ್ರತಿದಿನ ರೋಜಾ ಆಚರಿಸುತ್ತಿರುವುದರಿಂದ ನಾನು ಪ್ರತಿದಿನ ಉಲ್ಲಾಸಭರಿತನಾಗಿದ್ದೇನೆ ಎಂದು ಮಾಲಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..