ಹಿಂದೂ ಧರ್ಮದಲ್ಲೇಕೆ ಇಷ್ಟೊಂದು ದೇವರುಗಳು? ಸತ್ಯವಾದ ಕಾರಣ ಇಲ್ಲಿದೆ!! 

0
3852

ಹೀಗೆ ಒಬ್ಬ ಹೆಣ್ಣು ಮಗಳು ಒಂದು ಸಭೆಯಲ್ಲಿ ಕೇಳಿದಳಂತೆ -” ಹಿಂದೂ ಧರ್ಮದಲ್ಲೇಕೆ ಇಷ್ಟೊಂದು ದೇವರುಗಳು ? ಒಬ್ಬರು ರಾಮನ ಭಕ್ತರು ಮತ್ತೊಬ್ಬರು ಶಿವನ ಭಕ್ತರು ಇನ್ನ್ಯಾರೋ ಒಬ್ಬರು ಕೃಷ್ಣನ ಭಕ್ತರು . ಒಂದು ಅಂತಿಮ ಶಕ್ತಿ ಎಂದು ಹಿಂದೂ ಧರ್ಮದಲ್ಲಿ ಏಕೆ ಇಲ್ಲ ?

Image result for molee art
© Molee Art

ಅದಕ್ಕೆ ಜಯ್ ಲಖಾನಿ , ಇಂಗ್ಲೆಂಡ್ ನಾ ಧಾರ್ಮಿಕ ಶಿಕ್ಷಣ ಸಮಿತಿಯ ಡೈರೆಕ್ಟರ್ ಕೊಟ್ಟ ಉತ್ತರ ಎಷ್ಟು ಚೆನಾಗಿದೆ ನೋಡಿ – ” ಈ ಪ್ರಶ್ನೆ ತುಂಬಾ ಜನರ ಮನಸಿನಲ್ಲಿರುತ್ತದೆ , ಎಷ್ಟೋ ಬಾರಿ ಜನರು ಕೇಳುತ್ತಾರೆ , ಶಿವ ಅಂತಿಮ ದೇವರ ? ಹೌದು . ಹಾಗಾದರೆ ಕೃಷ್ಣ ? ಅವನು ಅಂತಿಮ ದೇವರೇ . ಹಾಗಿದ್ರೆ ರಾಮ ? ಅವನು ಅಂತಿಮ . ಅದ್ ಹೇಗೆ ಸಾದ್ಯ ? ಎಂದು ಎಷ್ಟೋ ಸರಿ ಎಷ್ಟೋ ಜನರು ಕೇಳಿದ್ದುಂಟು . ನಮ್ಮೆಲ್ಲರ ಪ್ರಕಾರ ಹಿಂದೂ ಧರ್ಮ ಬಹುದೇವ ಧರ್ಮ .

Image result for molee art
© Molee Art

ಇಲ್ಲ , ಹಿಂದೂ ಧರ್ಮ ಬಹುದೇವ ಧರ್ಮವಲ್ಲ ಒಂದೇ ಅಂತಿಮ ಶಕ್ತಿಯನ್ನ ಬಹುಹೆಸಾರಿನಲ್ಲಿ ಕರೆಯುವ ಧರ್ಮ . ಇರುವುದು ಅದೇ ಶಕ್ತಿ , ಆದರೆ ಅದಕ್ಕೆ ಎಷ್ಟೋ ಹೆಸರು . ಶಿವ ಎಂದು ಪೂಜಿಸಿದರು ಸರಿ , ರಾಮ ಎಂದು ಆರಾಧಿಸಿದರು ಸರಿ , ನಾವು ಆರಾಧಿಸಿ , ಪೂಜಿಸುತ್ತಿರುವುದು ಅದೇ ಶಕ್ತಿಯನ್ನ . ಹಾಗಾದರೆ ಅವರುಗಳಿಗೇಕೆ ಬೇರೆ ಬೇರೆ ರೂಪ ? ನಾವು ಮನುಷ್ಯರು , ನಾವು ನಮಗೆ ಅರ್ಥವಾಗುವ, ಭಕ್ತಿ ಬರುವ ರೀತಿಯಲ್ಲಿ ರೂಪಗಳನ್ನು ಕೊಟ್ಟು ಕೊಂಡಿದ್ದೇವೆ . ಅದು ಶಿವ , ಬೇಡಿಕೊ ಅವನ್ನಲ್ಲಿ ಎಂದರೆ , ಎಲ್ಲಿ ? ನಾನೇನು ಮಾಡ್ಬೇಕು?  ಎಂದು ಪ್ರಶ್ನೆಗಳು ಹುಟ್ಟುತ್ತವೆ . ಅದೇ , ಶಿವನಿಗೆ ನಮ್ಮದೇ ರೂಪ ಕೊಟ್ಟರೆ , ನಮಗಿನ್ನೂ ಹತ್ತಿರವಾಗುತ್ತಾನೆ , ನಮಗೆ ಮತ್ತೂ ನಂಬಿಕೆ ಬರುತ್ತದೆ .ನಮ್ಮದು ತತ್ವಾದರಿತ ಧರ್ಮ . ಆ ತತ್ವಕ್ಕೆ ನಾವು ನಾನಾ ರೂಪ ಕೊಟ್ಟಿದ್ದೇವೆ . ಶಿವ, ರಾಮ, ಕೃಷ್ಣ ಎಂದು . ಈ ಎಲ್ಲ ಹೆಸರುಗಳು ಅದೇ ತತ್ವದ ನಾನಾ ರೂಪಗಳು ”