ವಿಶ್ವದ ವಿಚಿತ್ರ ಹೋಟೆಲ್; ಇಲ್ಲಿ ಕುಡಿಯಲು, ಊಟ ಮಾಡಲು ಹೋಗಬೇಕು ಅಂದರೆ ಬೆತ್ತಲಾಗಿ ಹೋಗಬೇಕು..

0
422

ದೇಶದಲ್ಲಿ ವಿಚಿತ್ರ ಹೋಟೆಲ್-ಗಳಿವೆ ಇವೆಲ್ಲವೂ ಗ್ರಾಹಕರನ್ನು ಸೆಳೆಯಲು ಮಾಡಿರುವ ವಿನ್ಯಾಸದಿಂದ ಹೆಸರು ಪಡೆದುಕೊಂಡಿವೆ, ಇಂತಹ ಹೋಟೆಲ್-ಗಳು ವಿಶ್ವ ಮಟ್ಟದಲ್ಲಿ ಹೆಸರು ಮಿಂಚುತ್ತಿವೆ. ಇಂತಹ ಹೋಟೆಲ್ ಗಳು ಭಾರತದಲ್ಲಿ ಕೂಡ ಹೆಚ್ಚಾಗಿ ಕಂಡು ಬರುತ್ತಿದ್ದು, ಆಶ್ಚರ್ಯ ರೀತಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಅಹಮದಾಬಾದ್-ನಲ್ಲಿರುವ ಹೋಟೆಲ್ ಒಂದರಲ್ಲಿ ಊಟ ಮಾಡುವ ಟೇಬಲ್-ಗಳಿಂದ ಹಿಡಿದು ಎಲ್ಲವು ಟಾಯ್ಲೆಟ್ ರೀತಿಯಲ್ಲಿ ಇದೆ. ಅಲ್ಲಿ ಕುಳಿತರೆ ಟಾಯ್ಲೆಟ್ ಅಲ್ಲೇ ಕುಳಿತ ಹಾಗೆ ಅನಿಸುತ್ತೆ. ಇದೆ ತರಹದ ಹೋಟೆಲ್ ಹೈದರಾಬಾದ್ ನಲ್ಲಿದೆ ಅಲ್ಲಿ ಕತ್ತಲು ತುಂಬಿರುತ್ತದೆ. ಕತ್ತಲಲ್ಲೇ ಊಟ ಮಾಡಬೇಕು, ಇವುಗಲೇ ಇಷ್ಟು ವಿಚಿತ್ರ ಅನಿಸಿದರು ಇಲ್ಲೊಂದು ಹೋಟೆಲ್ ಬಗ್ಗೆ ಕೇಳಿದರೆ ಬಾಯಿ ಮೇಲೆ ಕೈ ಇಟ್ಟುಕೊಳ್ಳುತ್ತಿರ.

Also read: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೋಟೆಲ್‌ನಲ್ಲಿ ರೋಬೋ ಸಪ್ಲೈಯರ್‌; ಈ ವ್ಯವಸ್ಥೆ ಎಲ್ಲಿದೆ, ಹೇಗೆ ಕೆಲಸ ಮಾಡುತ್ತೆ? ಇದಕ್ಕೆ ನೀಡಿದ ಹಣವೆಷ್ಟು ಗೊತ್ತಾ??

ಹೌದು ಕುತೂಹಲ ಮೂಡಿಸುವ ಹೊಟೆಲ್-ನಲ್ಲಿ ಊಟ ಮಾಡಲು ಹೋಗಬೇಕು ಎಂದರೆ ಸಂಪೂರ್ಣ ಬೆತ್ತಲಾಗಿ ಹೋಗಬೇಕು ಅಂತೆ. ಇಲ್ಲಿ ಗಂಡು -ಹೆಣ್ಣು ಎಲ್ಲರೂ ಬಟ್ಟೆಬಿಚ್ಚಿಟ್ಟು ಹೋಗಬೇಕು. ಇಂತಹ ವಿಚಿತ್ರ ಹೋಟೆಲ್ ಲಂಡನ್​ನಲ್ಲಿದೆ. ಇದು ರೆಟ್ರೋ ಶೈಲಿಯ ಹೋಟೆಲ್ ಹಾಗೂ ಬಾರ್​​ಗಳು ಸಾಲಿನಲ್ಲಿ ಬರುತ್ತದೆ. ಇಂತಹ ಪಬ್​​ಗಳನ್ನು ಪ್ರವೇಶಿಸಿದರೆ ನಿಮಗೆ ಹಳೆ ಕಾಲದ ಫೀಲ್​ ಸಿಗಲಿದೆ. ಅಲ್ಲಿರುವ ಬಟ್ಟಲು, ಲೋಟ ಸೇರಿ ಎಲ್ಲವೂ ಹಳೆಕಾಲದಲ್ಲಿ ಬಳಸುವಂಥದ್ದು. ಇದೆ ಸ್ಟೈಲ್-ನಲ್ಲಿ 1847 ಇಸವಿಗೂ ಮೊದಲೇ ಸ್ಥಾಪನೆಗೊಂಡ ‘ಕೋಚ್​ ಆ್ಯಂಡ್​ ಹಾರ್ಸಸ್​’ ಹೆಸರಿನ ಪಬ್​​​ ಲಂಡನ್​ನಲ್ಲಿದೆ. ಮೊದಲಿನಿಂದಲೂ ಗ್ರಾಹಕರಿಗೆ ಭಿನ್ನ ರೀತಿಯಲ್ಲೇ ಸೇವೆ ನೀಡುತ್ತಾ ಬಂದಿರುವ ಈ ಪಬ್​ಗೆ​ ಇತ್ತೀಚೆಗೆ ಹೊಸ ಪರವಾನಿಗೆ ಸಿಕ್ಕಿದೆ. ಇದರನ್ವಯ ಈ ಹೋಟೆಲ್​ಅನ್ನು ಬೆತ್ತಲಾಗಿ ಪ್ರವೇಶಿಸಬಹುದಾಗಿದೆ.

Also read: ಈ ಹೋಟೆಲ್-ನ ದೋಸೆಗೆ ಎಷ್ಟು ಬೇಡಿಕೆ ಇರುತ್ತೆ ಅಂದ್ರೆ, ಘಂಟೆಗಟ್ಟಲೆ ಕಾದ್ರೂನು ಸಿಗೋದು ಕೇವಲ Half-ದೋಸೆ!!

‘ಕೋಚ್​ ಆ್ಯಂಡ್​ ಹಾರ್ಸಸ್​’ ಹೋಟೆಲ್​ ದೊಡ್ಡದಿದ್ದು, ಈ ವಿಶೇಷ ಪಬ್ಅನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ಇದನ್ನು ಪ್ರವೇಶಿಸುವ ವೇಳೆ ನೀವು ನಿಮ್ಮ ಸಂಪೂರ್ಣ ಉಡುಪನ್ನು ತೆಗೆದು ಬೀರುವಿನಲ್ಲಿ ಇಡಬಹುದು. ಇಲ್ಲಿ ನಿಮಗೆ ಮದ್ಯ, ಸಿಗರೇಟು, ಊಟದ ವ್ಯವಸ್ಥೆಯೂ ಇರಲಿದೆ. ಇದನ್ನು ಸದ್ಯ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ನಂತರ ಪಬ್​ಅನ್ನು ಸಂಪೂರ್ಣವಾಗಿ ನ್ಯೂಡ್​ ಪಬ್​ ಸಾಲಿಗೆ ಸೇರಿಸಲು ನಿರ್ಧರಿಸಲಾಗಿದೆ. ಹೊಸದನ್ನೇನಾದರೂ ಮಾಡಬೇಕು ಎನ್ನುವುದು ನಮ್ಮ ಆಲೋಚನೆ ಆಗಿತ್ತು. ಅಂತೆಯೇ ಹೀಗೊಂದು ಆಲೋಚನೆ ಹೊಳೆದಿತ್ತು. ಇದಕ್ಕೆ ಅಗತ್ಯವಿರುವ ಒಪ್ಪಿಗೆ ಪಡೆದು ನಾವು ಇದನ್ನು ಆರಂಭಿಸಿದ್ದೇವೆ.

Also read: ಈ ಹೋಟೆಲ್-ನಲ್ಲಿ ಬೆಳಿಗ್ಗೆ ವೇಳೆ ಉಚಿತ ಊಟ ಕೊಡುತ್ತಾರಂತೆ, ಮತ್ತೆ ರಾತ್ರಿ ವೇಳೆ ಈ ಹೋಟೆಲ್ ಗ್ರಂಥಾಲಯ ಆಗುತ್ತಂತೆ!!

ಪಬ್​ನಲ್ಲಿ ಬೆತ್ತಲಾಗಿ ನೃತ್ಯ ಮಾಡಬೇಕು ಎಂದು ಅನೇಕರಿಗೆ ಅಭಿಪ್ರಾಯವಾಗಿತ್ತು, ಅವರ ಕನಸನ್ನು ಸಾಕಾರ ಮಾಡುವ ಉದ್ದೇಶದಿಂದ ನಾವು ಇದನ್ನು ಆರಂಭಿಸಿದ್ದೇವೆ,” ಎಂದು ಪಬ್​ ಆಡಳಿತ ಮಂಡಳಿ ಮಾಹಿತಿ ನೀಡುತ್ತದೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಅನೇಕರು ಈ ವಿಚಾರ ತಿಳಿದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇನ್ನೂ ಕೆಲವರು ಈ ಪಬ್​ ಪ್ರವೇಶಿಸಲು ಎಷ್ಟು ಹಣ ತೆತ್ತಬೇಕು ಎಂದು ಹುಡುಕಾಡಿದ್ದಾರೆ. ಕೆಲವರಂತೂ ಹೋಟೆಲ್ ರುಚಿ ನೋಡಲು ಲಂಡನ್ ಅತ್ತ ಸಾಗುತ್ತಿದ್ದಾರೆ.