ಭಾರತ ಅಮೆರಿಕಾದ ನಾಸಾ-ಗಿಂತಲೂ ಮೊದಲು, ಸುಮಾರು 2000 ವಷಗಳ ಹಿಂದೆಯೇ ಬಾಹ್ಯಾಕಾಶ ಸಂಶೋಧನೆ ಮಾಡಿತ್ತಂತೆ ಗೊತ್ತಾ?

0
1468

Kannada News | NASA

ಭಾರತವನ್ನು ವಿಶ್ವದಾದ್ಯಂತ ವಿಸ್ಮಯಗಳ ನಾಡು, ಭಾರತೀಯರು ಎಲ್ಲರಿಗಿಂತಲೂ ಬುದ್ದಿವಂತರು ಎನ್ನುವುದಕ್ಕೆ ಇಲ್ಲಿದೆ ಒಂದು ಪುರಾವೆ. ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಾದ ಅಮೇರಿಕ, ಇಂಗ್ಲೆಂಡ್ ನವರು ಇನ್ನು ಊಹಿಸಲು ಸಾಧ್ಯವಾಗದಷ್ಟು ಸಾಧನೆಯನ್ನು ಭಾರತ ಮಾಡಿದೆ.

ಹೌದು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಂಚೂಣಿಯಲ್ಲಿರುವ ದೇಶಗಳಿಗಿಂತ ಸುಮಾರು 2000 ವರ್ಷಗಳಿಗೂ ಹಿಂದೆಯೇ ಭಾರತ ಬಾಹ್ಯಾಕಾಶ ಸಂಶೋಧನೆ ನಡೆಸಿತ್ತು, ಆಗಲೇ ಅಷ್ಟು ವಿದ್ಯೆ ಇತ್ತು ಎಂಬುದನ್ನು ನಿರೂಪಿಸುತ್ತವೆ ಮಹಾರಾಷ್ಟ್ರದ ಅಜಂತ ಮತ್ತು ಎಲ್ಲೋರಾ ಗುಹೆಗಳು.

ಮಹಾರಾಷ್ಟ್ರದ ಔರಂಗಾಬಾದಿನಲ್ಲಿರುವ ಅಜಂತಾ ಗುಹೆಗಳ ಬಗ್ಗೆ ಸಂಶೋಧನೆ ನಡೆಸಿದ ವಿದೇಶಿ ಸಂಶೋಧಕರು ಒಂದು ಕ್ಷಣ ದಂಗಾಗಿದ್ದರಂತೆ. ಕ್ರಿ.ಪು. 1 ಅಥವಾ 2 ರಲ್ಲಿ ನಿರ್ಮಿಸಲಾದ ಅಜಂತಾ ಗುಹೆಗಳಿಂದ, ಭಾರತೀಯರು ಬಾಹ್ಯಾಕಾಶ ಸಂಶೋಧನೆಯನ್ನು ಆಗಿನಿಂದಲೇ ಶುರುಮಾಡಿದ್ದರು ಎಂದು ತಿಳಿದುಬಂದಿದೆ.

ತಂತ್ರಜ್ಞಾನ ಎಂದರೆ ಏನು ಎಂದು ಗೊತ್ತಿರದ ಆ ಕಾಲದಲ್ಲಿ ಸುಮಾರು 30 ಗುಹೆಗಳಿರುವ ವಿಶಾಲವಾದ ಈ ಸುಂದರ ಗುಹೆಗಳನ್ನು ನಿರ್ಮಿಸಿದ್ದಾರೆ. ಜೂನ್ 21 ಮತ್ತು ಡಿಸೆಂಬರ್ 21 ರಂದು ನಡೆಯುವ ಬೇಸಿಗೆ ಸೋಲ್ಸ್ಟಿಸ್, ಸೂರ್ಯನ ಕಿರಣಗಳನ್ನು ನೇರವಾಗಿ ಗುಹೆಯಲ್ಲಿರುವ ಬುದ್ಧನ ಪ್ರತಿಮೆ ಮೇಲೆ ಬೀಳುವ ಹಾಗೆ ಮಾಡಲಾಗಿದೆ.

ಈ ಗುಹೆಯನ್ನು ಕುದುರೆಲಾಳ ರೂಪದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದೆ, ಇದರಿಂದ ಆಕಾಶಕಾಯಗಳ ಚಲನವಲನಗಳನ್ನು ಅಧ್ಯಯನ ಮಾಡಲಾಗುತ್ತಿತ್ತು. ಈಗ ಸಿಗುವ ಬಣ್ಣಗಳನ್ನು ಮೀರಿಸುವ ಹಾಗೆ ಇದೆ ಈ ಗುಹೆಗಳ ಶಿಲ್ಪಾಕೃತಿ ಗಳಿಗೆ ಬಳಸಲಾದ ಬಣ್ಣ, ಅವು 20 ಶತಮಾನಗಳಿಂದ ಮಾಸಿಲ್ಲ.

ಈ ಗುಹೆಗಳನ್ನು ಯಾವುದೇ ಆಧುನಿಕ ಯಂತ್ರ ಅಥವಾ ಕಂಪ್ಯೂಟರ್ ಬಳಸದೆ ಸೂರ್ಯನ ಕಿರಣಗಳು ನೇರವಾಗಿ ಗುಹೆಯನ್ನು ಪ್ರಕಾಶಿಸುವಂತೆ ಮಾಡಲಾಗಿದೆ. ಈ ಗುಹೆಗಳು ಹಿಂದೂ ಮತ್ತು ಬೌದ್ಧ ಧರ್ಮಿಗಳ ಅನುಯಾಯಿಗಳ ಶ್ರಮದಿಂದ ನಿರ್ಮಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ತಾಣವು ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ರಕ್ಷಣೆಗಾಗಿ ಸಂರಕ್ಷಿತ ಸ್ಮಾರಕವಾಗಿದ್ದು, 1983 ರಿಂದ ಅಜಂತಾ ಗುಹೆಗಳು UNESCO ವಿಶ್ವ ಪರಂಪರೆಯ ತಾಣವಾಗಿದೆ.