ಸಿ.ಎಂ. ಒಂದು ದಿನದ ಗ್ರಾಮ ವಾಸ್ತವ್ಯದ ಐಷಾರಾಮಿ ಬಾತ್ ರೂಂಗೆ ಮಾಡುತ್ತಿರುವ ಖರ್ಚಿನಲ್ಲಿ ಗ್ರಾಮದಲ್ಲಿ 30 ಶೌಚಾಲಯ ಆಗುತ್ತಿತ್ತು: ಗ್ರಾಮಸ್ಥರು!!

0
1030

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಇಂದಿನಿಂದ ಶುರುವಾಗಿದ್ದು, ಇದರಹಿಂದೆ ಹಲವು ಟೀಕೆಗಳು ಕೇಳಿಬರುತ್ತಿವೆ. ಏಕೆಂದರೆ ದುಂದುವೆಚ್ಚವಿಲ್ಲದೆ ಈ ಬಾರಿ ಗ್ರಾಮ ವಾಸ್ತವ್ಯ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಈಗ ಏನ್ ಮಾಡುತ್ತಿದ್ದಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿದ್ದು, ರಾತ್ರೋರಾತ್ರಿಯಲ್ಲಿ ಹುಟ್ಟಿಕೊಂಡ ಹೈಟೆಕ್ ಬಾತ್ ರೂಂ ಎನ್ನಬಹುದು. ಲಕ್ಷಾಂತರ ರೂ ಕರ್ಚು ಮಾಡಿ ಒಂದೇ ರಾತ್ರಿಯಲ್ಲಿ ಬಾತ್ ರೂಮ್ ರೆಡಿ ಮಾಡಿದ್ದು ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತೆ? ಎನ್ನುವ ಪ್ರಶ್ನೆಗಳು ವಿರೋಧ ಪಕ್ಷದವರಲ್ಲಿ ಮತ್ತು ಗ್ರಾಮಸ್ಥರಲ್ಲಿ ಹುಟ್ಟಿಕೊಂಡಿವೆ.

Also read: ಬಿಗ್ ಬ್ರೇಕಿಂಗ್: ಮಾಜಿ ಪ್ರಧಾನಿ ದೇವೇಗೌಡರಿಂದ ಮೈತ್ರಿ ಸರ್ಕಾರ ಪತನದ ಸೂಚನೆ; ಮದ್ಯಂತರ ಚುನಾವಣೆ ಪಕ್ಕಾ ಎಂದ ಹೆಚ್​.ಡಿ..

ಹೌದು ಇಂದಿನಿಂದ ನಾಡದೊರೆಯ ವಿನೂತನ ಗ್ರಾಮ ವಾಸ್ತವ್ಯ ಶುರುವಾಗಲಿದೆ. ಇಂದು ಮುಂಜಾನೆ ಯಾದಗಿರಿಗೆ ಆಗಮಿಸಿದ್ದ ಸಿಎಂ ಗುರುಮಿಠಕಲ್​ನ ಚಂಡರಕಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾದರೂ ಸಾಮಾನ್ಯರಂತೆ ರೈಲಿನಲ್ಲಿ, ಈಶಾನ್ಯ ಸಾರಿಗೆಯ ಕೆಂಪು ಬಸ್​ನಲ್ಲಿ ಹಿರಿಯ ಅಧಿಕಾರಿಗಳ ದಂಡಿನೊಂದಿಗೆ ಪ್ರಯಾಣ ಬೆಳೆಸಿ ಗ್ರಾಮಕ್ಕೆ ತಲುಪಿದ್ದಾರೆ. ಅದರಂತೆ ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತೇನೆ. ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ ಸರಕಾರದ ಖಜಾನೆಯ ದುಡ್ಡು ಉಳಿಸುತ್ತೇನೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಆದರೆ ಈಗ ಸಿಎಂ ಗ್ರಾಮ ವಾಸ್ತವ್ಯ ನಿಜಕ್ಕೂ ಸರಳತೆಯಿಂದ ಕೂಡಿದೆಯಾ ಎಂಬ ಚರ್ಚೆಗಳು ಶುರುವಾಗಿವೆ.

ರಾತ್ರೋರಾತ್ರಿ ಹೈಟೆಕ್ ಬಾತ್ ರೂಂ?

@Public tv

Also read: ರಾಜ್ಯದಲ್ಲಿ ಮುಂದುವರೆದ ಸೋತ ಜೆಡಿಎಸ್ ಪಕ್ಷದ ನಾಯಕರ ದರ್ಪ; ವೋಟ್ ಬಿಜೆಪಿಗೆ ಹಾಕ್ತಾನೆ, ನನ್ನತ್ರ ಬಂದು ಚೀಟಿ ಕೊಟ್ಟಿದ್ದಾನೆ, ಮತದಾರನಿಗೆ ರೇವಣ್ಣ ಕ್ಲಾಸ್..

ಸಿಎಂ ಈ ಬಾರಿ ನಾನು ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಕನ್ನಡ ಶಾಲೆಗಳ ಮತ್ತು ಗ್ರಾಮಗಳ ಅಭಿವೃದ್ಧಿ ಮಾಡುತ್ತೆನೆಂದು ಹೇಳಿದ್ದರು. ಅಲ್ಲದೆ ಯಾವ ದುಂದು ವೆಚ್ಚವಿಲ್ಲದೆ ಸರಳವಾಗಿ ಈ ಬಾರಿಯ ಗ್ರಾಮ ವಾಸ್ತವ್ಯ ಇರಲಿದೆ ಎಂದು ಕೂಡ ತಿಳಿಸಿದ್ದರು. ಆದರೆ ಸಿಎಂ ಅವರ ಗ್ರಾಮ ವಾಸ್ತವ್ಯದ ಸರಳತೆ ಬಗ್ಗೆ ಅನುಮಾನ ಮೂಡಿಸಿದೆ. ಇದಕ್ಕೆ ಕಾರಣವಾಗಿರೋದು ಬಾತ್ ರೂಮ್. ಮೊನ್ನೆ ತನಕ ಇಲ್ಲಿ ಯಾವುದೇ ಬಾತ್ ರೂಮ್ ಇರಲಿಲ್ಲ. ಆದರೆ ಗುರುವಾರ ರಾತ್ರೋರಾತ್ರಿ ಸದ್ದಿಲ್ಲದೆ ಹೈಟೆಕ್ ಬಾತ್‍ರೂಂ ತಲೆ ಎತ್ತಿದೆ. ಈ ಬಾತ್‍ರೂಮ್ ಶಾಲೆಯ ಮಕ್ಕಳು ದಿನಾಲೂ ಬಳಸುವ ಶೌಚಾಲಯ ಅಲ್ಲ. ಸಿಎಂ ಬರ್ತಿರೋ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ನಿರ್ಮಾಣವಾಗಿದೆ. ಸರಕಾರಿ ಶಾಲೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ವಾಸ್ತವ್ಯ ಮಾಡುತ್ತೆನೆಂದು ಹೇಳುವ ಸಿಎಂಗೆ ಕೇವಲ ಒಂದು ದಿನಕ್ಕಾಗಿ ಸುಮಾರು 3 ಲಕ್ಷ ವೆಚ್ಚದಲ್ಲಿ ಹೈಟೆಕ್ ಬಾತ್ ರೂಮ್ ನಿರ್ಮಾಣವಾಗಿದೆ.

ಹೇಗಿದೆ ಹೈಟೆಕ್ ಬಾತ್ ರೂಮ್ ?

@Public tv

Also read: ಕಾವೇರಿ ವಿಚಾರಕ್ಕೆ ಸಂಸದೆ ಸುಮಲತಾ ಅವರ ಈ ಮಾತು ಮಂಡ್ಯಕ್ಕೆ ಅನ್ಯಾಯ ಮಾಡುತ್ತಾ? ಎನ್ನುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸುಮಲತಾ..

ಒಂದೇ ರಾತ್ರಿಯಲ್ಲಿ ನಿರ್ಮಾಣವಾದ ಸ್ನಾನ ಮತ್ತು ಶೌಚಾಲಯದಲ್ಲಿ ದುಬಾರಿ ಬೆಲೆಯ ಪಿಂಗಾಣಿ ಸಿಂಕ್, ಟೈಲ್ಸ್, ಮತ್ತು ಗ್ಲಾಸ್ ಬಾಗಿಲುಗಳಿವೆ. ಶಾಲೆಯಲ್ಲಿ ಸರಳವಾಗಿ ವಾಸ್ತವ್ಯ ಮಾಡುತ್ತೆನೆಂದು ಹೇಳುವ ಸಿಎಂಗೆ ಈ ದುಬಾರಿ ಬಾತ್ ರೂಮ್ ಬೇಕಿತ್ತಾ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ. ಗ್ರಾಮದ ಕೆಲ ಪ್ರಜ್ಞಾವಂತರ ಆಕ್ರೋಶಕ್ಕೆ ಸಹ ಈ ಬಾತ್ ರೂಮ್ ಕಾರಣವಾಗಿದೆ. ಈ ಒಂದು ದಿನಕ್ಕೆ ಬಳಸುವ ಬಾತ್ ರೂಮ್ ವೆಚ್ಚದಲ್ಲಿ ನಮ್ಮ ಗ್ರಾಮದಲ್ಲಿ 30 ಶೌಚಾಲಯ ಕಟ್ಟಿಸಬಹುದಿತ್ತು ಎಂಬ ಅಸಮಾಧಾನದ ಮಾತುಗಳು ಜನರಿಂದ ಕೇಳಿಬರುತ್ತಿದೆ. ಆದರೆ ಊರ ಉದ್ದಾರಕ್ಕೆ ಬರುತ್ತಿರುವ ಅವರು ತಮಗೆ ಬೇಕಾದ ದುಬಾರಿ ಬಾತ್ ರೂಮ್ ಕಟ್ಟಿಸಿದ್ದು ಅಲ್ಲಿನ ಶಾಲೆಗೆ ಬಿಟ್ಟು ಕೊಡುತ್ತಾರೋ ಇಲ್ಲ ಅದನ್ನು ಕಿತ್ತುಕೊಂಡು ಹೋಗುತ್ತಾರೋ ಎನ್ನುವುದು ಗುರುಮಿಠಕಲ್​​​ ಕ್ಷೇತ್ರದ ಚಂಡರಕಿ ಗ್ರಾಮ ಜನರ ಅನುಮಾನವಾಗಿದೆ.

ಮಾಹಿತಿ ಕೃಪೆ: Public tv