ರುಚಿಯಾದ ಶೇಂಗಾ ಹೋಳಿಗೆ ಮಾಡುವ ವಿಧಾನ

0
3582

Kannada News | Recipe tips in Kannada

ಶೇಂಗಾ (ನೆಲಗಡಲೆ) ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಲ್ಲೊಂದು. ಇಲ್ಲಿನ ಆಹಾರ ಕ್ರಮದಲ್ಲೂ ಶೇಂಗಾಕ್ಕೆ ಪ್ರಮುಖ ಪಾತ್ರ. ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್‌ನಲ್ಲಿ ಶೇಂಗಾ ಸೇರಿಸಿದರೆ ಅದರ ರುಚಿಯೇ ಬೇರೆ. ಮತ್ತು ಎಲ್ಲಾ ಹೊಗ್ಗರಣೆ ಹಾಕುವಾಗಲು ಕಡಲೆಕಾಯಿಯನ್ನು ಅತಿಹೆಚ್ಚು ಬಳಸುತ್ತಾರೆ. ಹೊಟ್ಟೆ ಹಸಿವಾದಗ ಮನೆಯಲ್ಲಿ ಬೇಗನೆ ತಿನ್ನಲು ಸಿಗುವುದು ಈ ಶೇಂಗಾ ಬೀಜ, ಶೇಂಗಾ ಹೋಳಿಗೆಗೆ ಸಾಟಿಯಾದ ಸಿಹಿ ತಿನಿಸು ಮತ್ತೊಂದಿಲ್ಲ…

shenga-holige

ಬೇಕಾಗುವ ಪದಾರ್ಥಗಳು:

  • ಶೇಂಗಾ 1 ಬಟ್ಟಲು
  • ಬೆಲ್ಲ 1 ಬಟ್ಟಲು
  • ಗೋಧಿಹಿಟ್ಟು 1 ಬಟ್ಟಲು
  • ಏಲಕ್ಕಿ ಪುಡಿ 1 ಚಮಚ
  • ಎಣ್ಣೆ

ಮಾಡುವ ವಿಧಾನ:

ಶೇಂಗಾ ಅಥವಾ ಕಡಲೆಕಾಯಿ ಬೀಜಗಳನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದು ಒಂದು ಬೋಗುಣಿಯಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಉಂಡೆ ಬೆಲ್ಲವನ್ನು ಹೆರೆದಿಟ್ಟುಕೊಂಡು ಅದಕ್ಕೆ ಪುಡಿ ಮಾಡಿ ಶೇಂಗಾವನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು. ನಂತರದ ಕೆಲಸ ಗೋಧಿಹಿಟ್ಟಿನ ಕಣಕವನ್ನು ತಯಾರಿಸುವುದು. ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ. ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿರಿ. ನೆನಪಿಡಿ, ಈ ಶೇಂಗಾ ಹೋಳಿಗೆಯನ್ನು ಬಿಸಿಬಿಸಿಯಾಗಿರುವಾಗಲೇ ಹೊಟ್ಟೆಗಿಳಿಸಬೇಕು. ಒಂದು ಚಮಚ ತುಪ್ಪದೊಡನೆ ತಿಂದರೆ ರುಚಿಯಾಗಿರುತ್ತದೆ.

Watch:

Also Read: ಮಂಜುಗಡ್ಡೆಯನ್ನು ಕತ್ತಿನ ಹಿಂಭಾಗದಲ್ಲಿ ಇಟ್ಟರೆ ಏನೆಲ್ಲಾ ಲಾಭಗಳು ಇವೆ ಅಂತ ಗೊತ್ತಾದ್ರೆ, ನೀವು ಬೆರಗಾಗೋದ್ರಲ್ಲಿ ಸಂಶಯವೇ ಇಲ್ಲ!!!