ರಿಯೋ ಒಲಿಂಪಿಕ್ಸ್ ಗೆ ಹಾಕಿ ತಂಡದಲ್ಲಿ ಕನ್ನಡಿಗರದ್ದೇ ಕಾರುಬಾರು…

0
589

ಪುರುಷರ ರಿಯೋ ಒಲಿಂಪಿಕ್ಸ್ ಹಾಕಿ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ ಪ್ರಕಟಿಸಲಾಗಿದ್ದು, ತಂಡದಲ್ಲಿ ಕರ್ನಾಟಕ ಮೂಲದ ನಾಲ್ವರು ಆಟಗಾರರು ಆಯ್ಕೆಯಾಗಿದ್ದಾರೆ.

ಪುರುಷರ ತಂಡಕ್ಕೆ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರು ನಾಯಕರಾಗಿದ್ದರೆ, ಸುಶೀಲ ಚಾನು ಅವರು ಮಹಿಳೆಯರ ತಂಡಕ್ಕೆ ನಾಯಕಿಯಾಗಿದ್ದಾರೆ.ಒಲಿಂಪಿಕ್ಸ್ ನಲ್ಲಿ ಇಲ್ಲಿ ತನಕ 8 ಚಿನ್ನದ ಪದಕ ಗೆದ್ದಿರುವ ಹಾಕಿ ಇಂಡಿತಾ ತಂಡ, 1984ರ ನಂತರ ಉತ್ತಮ ಪ್ರದರ್ಶನ ನೀಡಿಲ್ಲ, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ 12ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತ ತಂಡ ಬಿ ಗುಂಪಿನಲ್ಲಿದ್ದು, ಅರ್ಜೆಂಟೀನಾ, ಕೆನಡಾ, ಜರ್ಮನಿ, ಐರ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಗುಂಪಿನಲ್ಲಿರುವ ಇತರೆ ತಂಡಗಳಾಗಿವೆ.ಮಹಿಳೆಯರ ತಂಡ ಕೂಡಾ ಬಿ ಗುಂಪಿನಲ್ಲಿದ್ದು, ಅರ್ಜೆಂಟೀನಾ,ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್, ಜಪಾನ್ ಹಾಗೂ ಯುನೈಟೆಡ್ ಸ್ಟೇಟ್ಸ್ ಇತರೆ ತಂಡಗಳಾಗಿವೆ.

ರಿತು ಆಯ್ಕೆ ಇಲ್ಲ: ಹಾಕಿ ಇಂಡಿಯಾ ಮಹಿಳೆಯರ ತಂಡದ ನಾಯಕಿಯಾಗಿದ್ದ ರಿತು ರಾಣಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ಬೆಂಗಳೂರಿನ ತರಬೇತಿ ಶಿಬಿರದಿಂದ ರಿತು ಹೊರ ನಡೆದಿದ್ದಾರೆ. ಕಳಪೆ ಫಾರ್ಮ್ ಹಾಗೂ ಅವರ ನಡವಳಿಕೆ ಕಾರಣದಿಂದ ಆಯ್ಕೆಗೆ ಪರಿಗಣಿಸಿಲ್ಲ ಎಂದು ಆಯ್ಕೆದಾರರು ಸ್ಪಷ್ಟವಾಗಿ ಹೇಳಿದ್ದಾರೆ.
ಪುರುಷರ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರಿದ್ದಾರೆ. ನಿಕ್ಕಿನ್ ತಿಮ್ಮಯ್ಯ, ಎಸ್ ಕೆ ಉತ್ತಪ್ಪ, ಎಸ್ ವಿ ಸುನೀಲ್ ಹಾಗೂ ವಿಆರ್ ರಘುನಾಥ್.