ಸಿಎಂ ಸಮಾವೇಶಕ್ಕೆ ಬರ್ತಾರೆ ಅಂತ ೫೦ಕ್ಕೂ ಹೆಚ್ಚು ಶಾಲೆಗಳಿಗೆ ರಜೆ ಘೋಷಣೆ, ಇದೆಂತ ಸರ್ಕಾರ ರಜೆ ಭಾಗ್ಯನ ಇದು..!

0
660

ಸಿಎಂ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ ಎಂದು 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಇವತ್ತು ರಜೆ ಘೋಷಣೆ ಮಾಡಿದೆ.

ಇಂದು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶಕ್ಕಾಗಿ ಸಿಎಂ ಬರ್ತಿರೋದ್ರಿಂದ ಬಳ್ಳಾರಿ ನಗರ ವ್ಯಾಪ್ತಿಯ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಸಾರಿಗೆ ಹಾಗು ಸುರಕ್ಷತೆ ಹಿನ್ನೆಲೆಯಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಶನಿವಾರದಂದು ಸಂಜೆವರೆಗೆ ಶಾಲೆ ಕಾರ್ಯ ನಿರ್ವಹಿಸಲಿದೆ ಎಂದು ಡಿಡಿಪಿಐ ಶ್ರೀಧರ್ ತಿಳಿಸಿದ್ದಾರೆ.

ನೋಡಿ ಸರ್ಕಾರದ ಮತ್ತು ರಾಜಕೀಯದ ಸಮಾವೇಶಗಳಿಗೆ ಮಕ್ಕಳಿಗೆ ರಜೆ ಘೋಷಣೆ ಮಾಡುವುದು ಎಷ್ಟು ಸರಿ.
ಇವರ ಸಮಾವೇಶಗಳಿಗೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಮತ್ತು ಇಂದಿನ ರಾಜವನ್ನು ಶನಿವಾರ ಪೂರ್ತಿ ಶಾಲೆ ನಡೆಸಬೇಕಂತೆ ಇದೆಂತ ಸರ್ಕಾರ ಅನ್ನೋದು ಜನರ ಆಕ್ರೋಶವಾಗಿದೆ.