ಅಸಿಡಿಟಿಯಿಂದ ಬಳಲುತ್ತಿರುವವರಿಗೆ ಸಿದ್ದಔಷಧ ಈ ಭಾವನಾಶುಂಠಿ. ಹೇಗೆ ಮಾಡೋದು ಅನ್ನೋದು ನಾವು ಹೇಳ್ತಿವಿ ಮುಂದೆ ಓದಿ..

0
1650
ತಯಾರಿಸಲು ಬೇಕಾಗುವ ಪದಾರ್ಥ:
 • ಹಸಿಶುಂಠಿ-1  ಭಾಗ
 • ನೀರು- 7 ಭಾಗ
 • ಉಪ್ಪು- 3 ಭಾಗ
 
ತಯಾರಿಸುವ ವಿಧಾನ:
 • ಹಸಿ ಶುಂಠಿಯನ್ನು ಚೆನ್ನಾಗಿ ಮಣ್ಣಾಗಿ ಹೋಗುವಂತೆ ತೊಳೆದು, ಹಾಳಾಗಿರುವ ಭಾಗವನ್ನು ಬೇರ್ಪಡಿಸಿ ನಂತರ ಸಣ್ಣ ಸಣ್ಣ ಬಿಲ್ಲೆಗಳಾಗಿ ಹೆಚ್ಚಿಕೊಳ್ಳಿರಿ.
 • ನಂತರ ಒಂದು ಭಾಗ ನೀರಿಗೆ ಕಾಲು ಭಾಗ ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ.
 • ಉಪ್ಪು ಸಂಪೂರ್ಣವಾಗಿ ಕರಗಿದ ನಂತರ ಪಾತ್ರೆಯನ್ನು ಇಳಿಸಿ ಆ ಉಪ್ಪು ನೀರಿಗೆ ಹೆಚ್ಚಿಟ್ಟುಕೊಂಡಂತಹ ಹಸಿಶುಂಠಿಯನ್ನು ಹಾಕಿರಿ.
 • ಇಪ್ಪತ್ತು ನಿಮಿಷಗಳು ಕಳೆದ ನಂತರ ಆ ಶುಂಠಿಯನ್ನು ತೆಗೆದು ಶುಭ್ರವಾದ ಬಟ್ಟೆಯ ಮೇಲೆ ಹರಡಿ ಬಿಸಿಲಿನಲ್ಲಿ ಒಣಗಿಸಿ.
 • ಅದು ಒಣಗಿದ ನಂತರ ಮತ್ತೊಮ್ಮೆ ಹೀಗೆ ಮೇಲೆ ಹೇಳಿದ ಕ್ರಮದಲ್ಲಿಯೇ ಏಳು ಬಾರಿ ನೆನೆಸುವುದು, ಒಣಗಿಸುವುದನ್ನು ಮಾಡಬೇಕು.
 • ಹೀಗೆ ಏಳು ಬಾರಿ ನೆನೆಸಿ ಚೆನ್ನಾಗಿ ಒಣಗಿಸಿದ ಶುಂಠಿ ತುಂಡುಗಳನ್ನು ಡಬ್ಬದಲ್ಲಿ ಮುಚ್ಚಿಡಿ. ಇಲ್ಲಿಗೆ ಭಾವನಾ ಶುಂಠಿ ತಯಾರು.

 

 
ಉಪಯೋಗ:
 • ಭಾವನಾ ಶುಂಠಿಯನ್ನು ಊಟಕ್ಕೆ ಮೊದಲು ಅಡಿಕೆಯಂತೆ ಜಗಿಯುವುದರಿಂದ ಬಾಯಿ ರುಚಿ ಹೆಚ್ಚಿ, ತೆಗೆದುಕೊಳ್ಳುವ ಆಹಾರವು ರೋಚಕವಾಗುವುದರಲ್ಲಿ ಸಂಶಯವಿಲ್ಲ.
 • ಕೆಮ್ಮು, ಗಂಟಲು ಕಟ್ಟಿ ಸ್ವರ ಹಾನಿಯಾಗಿರುವಾಗ, ವಿಪರೀತ ವಾಂತಿಯಾಗುತ್ತಿದ್ದಲ್ಲಿ ಇದನ್ನು ಬಾಯಲ್ಲಿ ಇಟ್ಟುಕೊಂಡು ಅಡಿಕೆಯಂತೆ ಜಗಿದು ರಸ ಹೀರುತ್ತಿದ್ದರೆ ಕಫ ಕರಗಿ ಸ್ವರ ಸರಿಯಾಗುವುದರಲ್ಲಿ ಸಂಶಯವೇ ಇಲ್ಲ.
 • ಅಜೀರ್ಣ, ಹೊಟ್ಟೆಯುಬ್ಬರ, ಮಲಪ್ರವೃತ್ತಿ ಸರಿಯಾಗಿಲ್ಲದವರಿಗೆ ಇದು ಸಿದ್ದ್ಔಷಧ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840