ಯಮ ಯಾತನೆ ಅಪೆಂಡಿಸಿಟಿಸ್-ಅನ್ನು ತಡೆಗಟ್ಟಲು ಹಾಗೂ ಅದರ ನೋವು ನಿವಾರಿಸಿಕೊಳ್ಳಲು ಈ ಮನೆಮದ್ದುಗಳನ್ನು ಪಾಲಿಸಿ..

0
1753

Kannada News | Health tips in kannada

ಅಪೆಂಡಿಸಿಟಿಸ್ ಅಥವಾ ಹೊಟ್ಟೆನೋವು, ಈ ಕಾಯಿಲೆ ಯಾವ ಶತ್ರುವಿಗೂ ಬರಕೂಡದು ಎನ್ನುವಷ್ಟು ಬಾಧಿಸುತ್ತದೆ. ಕೆಲವು ಇದರ ನೋವು ತಾಳಲಾರದೆ ಆಸ್ಪತ್ರೆಯಲ್ಲಿಯೇ ಇದ್ದುಕೊಂಡೇ ಪೂರ್ತಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಈಗ ಇದರ ಬಗ್ಗೆ ಟೆನ್ಷನ್ ಬೇಡ. ಈ ಸುಲಭ ಸಲಹೆಗಳನ್ನು ಪಾಲಿಸಿದರೆ ಅಪೆಂಡಿಸಿಟಿಸ್ ಅಥವಾ ಹೊಟ್ಟೆನೋವು ಬರುವುದಿಲ್ಲ.

ಅಪೆಂಡಿಸಿಟಿಸ್ ಅಥವಾ ಹೊಟ್ಟೆನೋವು ಸಾಮಾನ್ಯವಾಗಿ ಈ ಕೆಳಗಿನ ಕಾರದಿಂದ ಕಾಣಿಸಿಕೊಳ್ಳುತ್ತದೆ:
೧. ಅನುವಂಶಿಕ ಅಂಶಗಳು ಅಥವಾ ಆಹಾರದಿಂದ ಉಂಟಾಗುವ ಅಡೆತಡೆಗಳು ಅನುಬಂಧದಲ್ಲಿ ಅಂಟಿಕೊಂಡಿದ್ದರೆ.

೨. ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕಿನ ಪರಿಣಾಮವಾಗಿ ಕರುಳಿನ ಗೋಡೆಗಳಲ್ಲಿ ಊದಿಕೊಂಡ ದುಗ್ಧರಸ ಗ್ರಂಥಿಯ ಕಾರಣದಿಂದ.

೩. ಉರಿಯೂತದ ಕರುಳಿನ ಕಾಯಿಲೆಯಿಂದ.

೪. ಜೀರ್ಣಾಂಗವ್ಯೂಹದ ಸೋಂಕಿನಿಂದ.

೫. ಕಿಬ್ಬೊಟ್ಟೆಯ ಗಾಯದಿಂದ.

ಇನ್ನು ಈ ಅಪೆಂಡಿಸಿಟಿಸ್ ಅಥವಾ ಹೊಟ್ಟೆ ನೋವನ್ನು ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ನಿವಾರಿಸಿಕೊಳ್ಳಬಹುದು.

1. ಅಕ್ಯುಪಂಕ್ಚರ್:

acupressure point_5
acupressure point_5

ಆಕ್ಯುಪ್ರೆಶರ್ ಚಿಕಿತ್ಸೆ ತುಂಬಾ ಪ್ರಾಚೀನ ವೈದ್ಯ ಪದ್ಧತಿಗಳಲ್ಲಿ ಒಂದಾಗಿದೆ. ನಿಮ್ಮ ದೇಹದಲ್ಲಿ ಕೆಲವು ಶಕ್ತಿಯ ಮೆರಿಡಿಯನ್ ಅಂಶಗಳನ್ನು ಒತ್ತುವ ಮೂಲಕ, ನೀವು ದೇಹದಲ್ಲಿ ಮತ್ತೊಮ್ಮೆ ಶಕ್ತಿಯ ಹರಿವನ್ನು ಮಾಡಬಹುದು ಮತ್ತು ನಿಮ್ಮ ದೇಹವು ಉತ್ತಮ ಕೆಲಸಕ್ಕೆ ಸಹಾಯ ಮಾಡಬಹುದು. ಈ ಚಿಕಿತ್ಸೆಯಿಂದ ಅದ್ಭುತ ಫಲಿತಾಂಶ ಸಿಗುತ್ತದೆ.

2. ಧ್ಯಾನ:

ಧ್ಯಾನ ಕರುಳುವಾಳ ಮತ್ತು ನೋವಿನಿಂದ ಮುಕ್ತಿಹೊಂದಲು ಮತ್ತು ನೋವನ್ನು ಹತ್ತಿಕ್ಕಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಪಡುವ ವ್ಯಕ್ತಿಗಳು ಧ್ಯಾನ ಮತ್ತು ದವಡೆಯ ವಿಶ್ರಾಂತಿ ತಂತ್ರಗಳನ್ನು ಅಭ್ಯಾಸ ಮಾಡಿದರೆ ಒಳ್ಳೆಯದು ಎಂದು ಅಧ್ಯಯನವೊಂದು ಸೂಚಿಸಿದೆ.

3. ಅರಿಶಿನ:

ಪ್ರಾಚೀನ ಕಾಲದಿಂದಲೂ ಅರಿಶಿನವನ್ನು ಬಳಸಲಾಗುತ್ತಿದೆ. ಆಯುರ್ವೇದದಲ್ಲಿ ಇದು ಬಹುಮುಖ್ಯ ಔಷದಿಯ ವಸ್ತು. ಇದರಲ್ಲಿರುವ ಆಂಟಿ ಇನ್ ಫ್ಲೇಮ್ಎಟರಿ ಗುಣದಿಂದ ಉರಿಊತವನ್ನು, ಗ್ಯಾಸ್ಟ್ರಿಕ್ ತೊಂದರೆಯನ್ನು ಮತ್ತು ಕರುಳಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಅರಿಶಿನ ಬಹುಮುಖ್ಯ ಪಾತ್ರವಹಿಸುತ್ತದೆ

4. ಫೈಬರ್-ಯುಕ್ತ ಆಹಾರ ತಿನ್ನುವುದು:

ಫೈಬರ್-ಯುಕ್ತ ಆಹಾರಗಳಾದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಕರುಳಿಗೆ ತುಂಬಾ ಸಹಾಯವಾಗುತ್ತದೆ. ಆಹಾರದ ಫೈಬರ್ನಲ್ಲಿ ಕಡಿಮೆ ಮಾಡಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಹೆಚ್ಚಿನ ಪ್ರಮಾಣದಲ್ಲಿ ಇರುವ ಆಹಾರವನ್ನು ಸೇವಿಸುವುದರಿಂದ ಕರುಳಿನ ಬೆಳವಣಿಗೆಗೆ ಮಾರಕವಾಗುತ್ತದೆ.

5. ನೀರು:

ಹೌದು, ಈ ಜೀವ ಜಾಲವನ್ನು ಅಪ್ಪಿ ತಪ್ಪಿಯೂ ಕುಡಿಯಲು ಮರಿಬೇಡಿ. ನಿತ್ಯ ನೀರನ್ನು ನಿಗದಿತ ಪ್ರಮಾಣದಲ್ಲಿ ಕುಡಿಯುವುದರಿಂದ ಕರುಳಿನ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ, ಅದರ ಆರೋಗ್ಯ ವೃದ್ಧಿಯಾಗುತ್ತದೆ.

6. ಪೋಷಕಾ೦ಶ ಉಳ್ಳ ಆಹಾರ:

ಪೋಷಕಾ೦ಶ ಅಥವಾ ವಿಟಮಿನ್ಸ್ ಉಳ್ಳ ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳು ದೊರಕಿ ಕಾಯಿಲೆ ಮತ್ತು ನೋವಿನ ವಿರುದ್ಧ ಹೋರಾಡಲು ಶಕ್ತಿ ಸಿಗುತ್ತದೆ. ಜಂಕ್ ಫುಡ್ ಅನ್ನು ಅವಾಯ್ಡ್ ಮಾಡಿ.

7. ಮೊಸರು:

ನಿತ್ಯ ಊಟದಲ್ಲಿ ಮೊಸರನ್ನು ತಪ್ಪದೆ ಸೇವಿಸಿ, ಕ್ಯಾಲ್ಸಿಯಂ- ಪ್ರೋಟೀನ್-ಸಮೃದ್ಧ ಮೊಸರು ಕೂಡಾ ಪ್ರೋಬಯಾಟಿಕ್ ಆಗಿದೆ. ಇದು ಅಪೆಂಡಿಸಿಟಿಸ್ ಅಥವಾ ಹೊಟ್ಟೆನೋವು ಇರುವವರಿಗೆ ಉತ್ತಮ ಆಹಾರವಾಗಿದೆ.

8. ಮೆಂತ್ಯೆ:

ಮೆಂತ್ಯದ ಬೀಜಗಳನ್ನು ಬೇಯಿಸಿದ ನೀರಿನಲ್ಲಿ ಹಾಕಿ ಕುಡಿಯಿರಿ. ಇದು ಒಂದು ಆಯುರ್ವೇದದ ಪರಿಹಾರವಾಗಿದೆ. ಉರಿಯೂತದ ಕರುಳಿನ ಕಾಯಿಲೆಯ ಸಂದರ್ಭದಲ್ಲಿ ಮೆಂತ್ಯೆ ಬೀಜಗಳನ್ನು ಈ ರೀತಿ ಸೇವಿಸಿಯುವುದರಿಂದ ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ.

Also Read: ಬೇಸಿಗೆ ಶುರುವಾಗುತ್ತಿದೆ, ಈ ಕಾಲದಲ್ಲಿ ಅನಗತ್ಯವಾದುದನ್ನು ತಿನ್ನುವುದಕ್ಕಿಂತ ಅಗತ್ಯವಿರುವ ಆಹಾರ ತಿಂದರೆ ಬಾಯಿಗೆ ರುಚಿ, ದೇಹಕ್ಕೆ ಹಿತಕರ…!

WATCH