ಮಳೆಗಾಲ ಚಳಿಗಾಲ ಬಂದ್ರೆ ಸಾಕು ಅಸ್ತಮಾ ರೋಗಿಗಳಿಗೆ ಉಬ್ಬಸದಿಂದ ಹೇಗಪ್ಪಾ ಪಾರಾಗೋದು ಅನ್ನೋದೇ ದೊಡ್ಡ ಸಮಸ್ಯೆ.. ಯೋಚ್ನೆ ಮಾಡ್ಬೇಡಿ ಅದಕ್ಕಿಲ್ಲಿದೆ ಮನೆಮದ್ದು..

0
1248

ದಮ್ಮು, ಉಬ್ಬಸ, ಗೂರಲು ಈ ಮೂರು ಒಂದೇ ಆಗಿದೆ. ಉಸಿರಾಟದ ವಿವಿಧ ಅಂಗಗಳು ಸಂಕುಚಿತಗೊಂಡಿದ್ದು ಕಫ ಸಂಗ್ರಹವಾಗಿ ಉಸಿರಾಟದ ತೊಂದರೆಯುಂಟಾಗುವುದೇ ಅಸ್ತಮಾವೆಂದು ಕರೆಯುತ್ತಾರೆ. ಅಲರ್ಜಿ, ವಿರುದ್ಧ ಆಹಾರ ವಿಹಾರ, ಮಲಬದ್ಧತೆ, ಚಿಂತೆ, ಋತುಮಾನ ಬದಲಾವಣೆ, ವಾಯುಮಾಲಿನ್ಯ, ಧೂಳು, ಹೋಗೆ, ತೇವವಿರುವ ಸ್ಥಳಗಳಲ್ಲಿ ವಾಸ, ಅತಿ ವ್ಯಾಯಾಮ, ಅನುವಂಶಿಕ ಕಾರಣಗಳು ಅಸ್ತಮಾ ರೋಗ ಬರಲು ಕಾರಣವಾಗಿವೆ. ಕೆಮ್ಮು, ಒಮ್ಮೆಮ್ಮೆ ಸಣ್ಣ ಜ್ವರ, ಉಸಿರಿನ ತಡೆ, ಕಫ ಹೆಚ್ಚಾಗುವುದು, ರಾತ್ರಿ ಅತಿ ಬೆವರು, ಎದೆಯಲ್ಲಿ ಒತ್ತಿದ ಹಾಗೆ ಆಗುವುದು ಇತ್ಯಾದಿ ಅಸ್ತಮಾ ರೋಗದ ಲಕ್ಷಣಗಳಾಗಿವೆ.

ಈ ಸಮಸ್ಯೆಯು ಶೀತಕಾಲದಲ್ಲಿ, ಮೋಡ ಮುಸುಕಿದ ವಾತಾವರಣದಲ್ಲಿ ಹೆಚ್ಚಾಗುತ್ತದೆ.

 

-ಶುಂಠಿ, ಮೆಣಸು, ಹಿಪ್ಪಲಿ ಸಮ ಪ್ರಮಾಣದ ಚೂರ್ಣವನ್ನು ಅಷ್ಟೇ ಪ್ರಮಾಣದ ಜೇನುತುಪ್ಪದಲ್ಲಿ ದಿನಕ್ಕೆ ಎರಡು ಬಾರಿಯಂತೆ ನಾಲ್ಕು ವಾರ ಸೇವಿಸುವುದು.

-ಹಸಿ ಶುಂಠಿಯ ಒಂದು ಚಮಚ ರಸಕ್ಕೆ, ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆರಡು ಬಾರಿಯಂತೆ ೪ ವಾರ ಸೇವಿಸುವುದು.

-ಆಡುಮುಟ್ಟದ ಬಳ್ಳಿಯ ಐದು ಎಲೆಗಳನ್ನು ಐದು ಚಮಚ ಜೀರಿಗೆ ಸೇರಿಸಿ ಅರೆದು ಬೆಟ್ಟದ ನೆಲ್ಲಿಕಾಯಿ ಗಾತ್ರದಷ್ಟು ಗುಳಿಗೆಯನ್ನು ಮಾಡಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ೭ /೨೧/೪೧ ದಿವಸ ಉಪಯೋಗಿಸಬೇಕು.

– ಈಶ್ವರಿ ಬಳ್ಳಿಯ ಒಣಗಿದ ಅಥವಾ ತಾಜಾ ಎಲೆಯನ್ನು ಬಾಯಲ್ಲಿಟ್ಟುಕೊಂಡು ನಿಧಾನವಾಗಿ ಚೀಪುತ್ತ ರಸವನ್ನು ನುಂಗಬೇಕು. ತಿಂಡಿ ತಿಂದ ಒಂದು ಗಂಟೆಯ ನಂತರ ಈ ಚಿಕಿತ್ಸೆಯನ್ನು ಆರು ದಿವಸ ಸತತವಾಗಿ ಮಾಡ್ಬೇಕು. ಔಷಧಿ ತೆಗೆದುಕೊಂಡ ಮೂರು ಗಂಟೆಗಳ ಕಾಲ ಏನನ್ನು ತಿನ್ನುವುದಾಗಲಿ ಕುಡಿಯುವುದಾಗಲಿ ಮಾಡಬಾರದು.

-ಒಂದು ವಿಲ್ಯೆದೆಲೆಯಲ್ಲಿ ಐದು ತುಳಸಿ ಎಲೆ, ಒಂದು ಲವಂಗ, ಸ್ವಲ್ಪ ಸೈನದವ ಲವಣ ಮಡಿಸಿ ನಿತ್ಯ ಮೂರು ವೇಳೆ ೧ ರಿಂದ ೨ ವಾರ ಸೇವಿಸಬೇಕು.

-ಆಡುಸೋಗೆ ಎಲೆಯ ರಸ ಎರಡು ಚಮಚ ಮತ್ತು ಎರಡು ಚಮಚ ಜೇನುತುಪ್ಪದ ಜೊತೆ ಅಥವಾ ಶುಂಠಿ ಪುಡಿಯ ಜೊತೆ ದಿನಕ್ಕೆರಡು ಬಾರಿ ಸೇವಿಸಬೇಕು.

-ಈರುಳ್ಳಿಯ ರಸ, ಬೆಳ್ಳುಳ್ಳಿಯ ರಸ, ಒಂದು ಪಾವು ಲೋಳೆ ರಸ, ಜೇನುತುಪ್ಪ ಪ್ರತಿಯೊಂದನ್ನು ಒಂದು ಜಾಡಿಯಲ್ಲಿ ಹಾಕಿ ಭದ್ರವಾಗಿ ಮುಚ್ಚಬೇಕು. ಒಂದು ವಾರದ ಅನಂತರ ತೆಗೆದು ಪ್ರತಿದಿನ ಈ ಔಷಧಿಯನ್ನು ೧ ಚಮದಷ್ಟು ಒಂದು ತಿಂಗಳುಗಳ ಕಾಲ ಸೇವಿಸಬೇಕು.

-ನಾಲ್ಕು ಚಮಚ ಆಡುಸೋಗೆ ರಸಕ್ಕೆ,ಅರ್ಧ ಚಮಚ ತ್ರಿಫಲಾ ಚೂರ್ಣ ಸೇರಿಸಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಎರಡು ಹೊತ್ತು ೩ ರಿಂದ ೪ ವಾರ ಕೊಡುವುದು.

-ಅಸ್ತಮಾ ರೋಗಿಗಳು ತೀವ್ರ ಉಸಿರಾಟದ ತೊಂದರೆಯಾದಾಗ ಸಾಸಿವೆ ಎಣ್ಣೆಯಲ್ಲಿ ಸೈನ್ದವ ಲವಣ ಸೇರಿಸಿ ಎದೆಗೆ ತಿಕ್ಕಿಕೊಳ್ಳಬೇಕು.

 

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840