ಯುವ ಜನತೆಯಲ್ಲಿ ಹೆಚ್ಚಾಗಿ ಕಾಡುವ ಬೆನ್ನು ನೋವಿನ ಸಮಸ್ಯೆಗೆ ಸಿಂಪಲ್ ಪರಿಹಾರ.. ತಪ್ಪದೇ ಪಾಲಿಸಿ

0
2001

Kannada News | Health tips in kannada

ಆಧುನಿಕ ಯುಗದಲ್ಲಿ ವಯಸ್ಸಾದವರಿಗಿರಲಿ.. ಯುವ ಜನತೆಯಲ್ಲೇ ಹತ್ತಾರು ರೋಗಗಳು ಕಾಣಿಸಿಕೊಳ್ಳುತ್ತವೆ.. ಅದರಲ್ಲೂ ಬೆನ್ನು ನೋವು ಎಂಬುದು..‌ಅಬ್ಬಾ ಅನುಭವಿಸಿದವರಿಗಷ್ಟೇ ಗೊತ್ತು.. ಅದರಲ್ಲು ಆಫೀಸಿನಲ್ಲಿ ಕೂತು ಕೆಲಸ ಮಾಡುವವರ ಕಷ್ಟ ಹೇಳತೀರದು.. ಚಿಕ್ಕ ಮಕ್ಕಳಿಂದ ಇಡಿದು ವಯಸ್ಸಾದವರ ವರೆಗೆ ಕಾಡುವ ಈ ಬೆನ್ನು ನೋವಿಗೆ ನಮ್ಮ ಕೆಲವೊಂದು ಅಭ್ಯಾಸದಿಂದ ಕಡಿಮೆ ಮಾಡಿಕೊಳ್ಳಬಹುದು.. ಇಲ್ಲಿದೆ ನೋಡಿ ಬೆನ್ನು ನೋವನ್ನು ಸುಲಭವಾಗೆ ಹೋಗಲಾಡಿಸುವ ಅಭ್ಯಾಸಗಳು..

1.ಕೂತಲ್ಲೇ ಕೂರಬೇಡಿ..

ಇದು ನಾವು ಅಳವಡಿಸಿಕೊಳ್ಳಬೇಕಾದ ಅತಿ ಮುಖ್ಯವಾದ ಅಭ್ಯಾಸ.. ನಾವು ಕೆಲಸ ಮಾಡುವ ಜಾಗದಲ್ಲಾಗಲಿ.. ಅಥವಾ ಮನೆಯಲ್ಲಾಗಲಿ.. ಕೂತ ಜಾಗದಲ್ಲಿ ಒಂದೇ ಪೊಸಿಷನ್ ನಲ್ಲಿ ಹೆಚ್ಚು ಹೊತ್ತು ಕೂರಬೇಡಿ.. ಆಗಿಂದಾಗ್ಗೆ ಸ್ವಲ್ಪ ಎದ್ದು ಓಡಾಡಿ ನಂತರ ನಿಮ್ಮ ಕೆಲಸ ಮುಂದುವರೆಸಬಹುದು..

2.ಸೋಫಾ ಮೇಲೆ ಮಲಗಬೇಡಿ..

ಇದು ನಾವುಗಳು ಸಾಮಾನ್ಯವಾಗಿ ಮಾಡುವ ತಪ್ಪು.. ಟಿ ವಿ ನೋಡುವ ಸಲುವಾಗಿ ಎದುರುಗಿರಿವ ಸೋಫಾ ದಲ್ಲಿ ಹಾಗೆ ಮಲಗಿಬಿಡುತ್ತೇವೆ.. ಇದನ್ನು ಅವಾಯ್ಡ್ ಮಾಡಿ…

3.ಸಮತಟ್ಟಲ್ಲಿ ನಿದ್ರಿಸಿ..

ಹಾಸಿಗೆ ಏರುಪೇರಿದ್ದ ಸಂಧರ್ಭದಲ್ಲಿಯೂ ಕೂಡ ಬೆನ್ನು ನೋವು ಹೆಚ್ಚಾಗುತ್ತದೆ.. ಸಾಧ್ಯವಾದಷ್ಟು‌ ಸಮತಟ್ಟಲ್ಲಿ ಮಲಗಿ..

4‌.ಯೋಗಾಸನ ಮಾಡಿ

ಬೆನ್ನು ನೋವು ಅತಿಯಾಗಿರಲಿ ಅಥವಾ.. ಬರಬಾರದು ಎಂಬುದಿರಲಿ.. ಯೋಗಾಸನ ಮಾಡಿ.. ಅತಿ ಕಡಿಮೆ ದಿನದಲ್ಲಿ ನಿಮ್ಮ ಬೆನ್ನು ನೋವನ್ನು ಕಡಿಮೆ ಮಾಡಲು ಇದು ಒಂದು ಒಳ್ಳೆಯ ಅಭ್ಯಾಸ.. ಇದನ್ನು ರೂಡಿಸಿಕೊಂಡರೆ ಕೇವಲ ಬೆನ್ನು ನೋವಷ್ಟೇ ಅಲ್ಲಾ ಅನೇಕ ನೋವು ಗಳಿಂದ ಮುಕ್ತಿ ಹೊಂದಬಹುದು..

5.ನೇರವಾಗಿ ಕೂಳಿತುಕೊಳ್ಳಿ..

ನಾವು ಕುಳಿತುಕೊಳ್ಳುವ ಭಂಗಿ.. ಬೆನ್ನು ನೋವಿಗೆ ಪ್ರಮುಖ ಕಾರಣವೂ ಹೌದು.. ಎಲ್ಲೇ ಕುಳಿತುಕೊಂಡರೂ‌.. ಬೆನ್ನು ನೇರವಾಗಿರುವಂತೆ ಕುಳಿತುಕೊಳ್ಳಿ.. ಇದರಿಂದ ಬೆನ್ನು ಬಾಗು.. ಬೆನ್ನು ನೋವು.. ಮುಂತಾದ ರೋಗಗಳು ಕಾಣಿಸಿಕೊಳ್ಳುವುದಿಲ್ಲ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಸೌತ್ ಬೆಂಗಳೂರಿನಲ್ಲೊಂದು ತವರು ಮನೆ…ಅಜ್ಜಿಮನೆಯ ಅಭ್ಯಂಗ ಮಿಸ್ ಮಾಡ್ಕೊಳ್ತಾ ಇದ್ರೆ ಹನುಮಂತನಗರದ ಈ ಪ್ರಕೃತಿ ಚಿಕಿತ್ಸಾಲಯಕ್ಕೆ ಖಂಡಿತ ಭೇಟಿ ನೀಡಲೇಬೇಕು..