ಮಲಬದ್ಧತೆಗೆ ಕಾರಣ ಏನು, ಅದರ ನಿವಾರಣೋಪಾಯಗಳು ಹೇಗೆ ಅಂತ ನೋಡಿ!

0
9171

ಇತ್ತೀಚೆಗಿನ ದಿನಗಳಲ್ಲಿ ಮನುಷ್ಯ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಒಂದು. ತಿನ್ನುವ ಆಹಾರದಲ್ಲಿ ಕೊಬ್ಬು ಅಧಿಕವಾಗಿ ಇರುವುದರಿಂದಲೋ, ಹೆಚ್ಚು ನೀರು ಕುಡಿಯದೆ ಇರುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ಹೊರಬೀಳಬೇಕಾದರೆ ತಿನ್ನುವ ಆಹಾರದಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿರಬೇಕು. ಸಹಜವಾದ ಕಾಲಕೃತ್ಯಗಳಲ್ಲಿ ಮಲವಿಸರ್ಜನೆ ಸಹ ಒಂದು. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲಿ ಒಂದು ಪದ್ಧತಿಯ ಪ್ರಕಾರ ಮಲ ವಿಸರ್ಜನೆ ನಡೆಯುತ್ತದೆ. ಕೆಲವರಲ್ಲಿ ದಿನಕ್ಕೆ ಎರಡು ಸಲ ನಡೆದರೆ, ಕೆಲವರಲ್ಲಿ ಎರಡು-ಮೂರು ದಿನಗಳಿಗೊಮ್ಮೆ ಆಗುತ್ತದೆ. ಕ್ರಮವಾಗಿ ನಿತ್ಯ ಮಲವಿಸರ್ಜನೆ ನಡೆಯಬೇಕು. ಆ ರೀತಿ ನಡೆಯದಿದ್ದರೆ ಮಲಬದ್ಧತೆ ಎಂದು ಭಾವಿಸಬೇಕು. ಮಲಬದ್ಧತೆಗೆ ಕಾರಣಗಳು ಅನೇಕ ಇವೆ. ಅವು ಏನು ಎಂದು ಈಗ ನೋಡೋಣ.

ಆಹಾರದಲ್ಲಿ ಕಾರ್ಬೊಹೈಡ್ರೇಟ್ ಹೆಚ್ಚಾಗಿ ಇರುವುದು. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುವುದರಿಂದ ಮಲಬದ್ಧತೆ ಬರುತ್ತದೆ. ಮಲ ಗಟ್ಟಿಯಾಗಿ ಬದಲಾಗಿ ಗಡುಸಾಗುತ್ತದೆ. ಇದರಿಂದ ಮಲದ್ವಾರದ ಬಳಿ ಬಿರಿತ ಉಂಟಾಗುತ್ತದೆ. ದೇಹಕ್ಕೆ ಸೂಕ್ತ ವ್ಯಾಯಾಮ ಇಲ್ಲದಿದ್ದರೂ ಮಲಬದ್ಧತೆ ಉಂಟಾಗುತ್ತದೆ. ಹೆಚ್ಚಿನ ಕೊಬ್ಬಿನ ಪದಾರ್ಥ ತೆಗೆದುಕೊಂಡಾಗ ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ಇಂದು ಉದ್ಯೋಗಗಳೆಲ್ಲಾ ಒತ್ತಡ ತರುವಂತಹವು. ಈ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಸಹ ಮಲಬದ್ಧತೆ ಉಂಟಾಗುತ್ತವೆ. ಇನ್ನೂ ಕೆಲವರು ಮಲವಿಸರ್ಜನೆಯನ್ನು ಮುಂದೂಡುತ್ತಿರುತ್ತಾರೆ. ಇದು ಸಹ ತೊಂದರೆ ಉಂಟು ಮಾಡುವ ಅಂಶ.

ಕಬ್ಬಿಣಾಂಶ ಹೆಚ್ಚಾಗಿ ಇರುವ ಔಷಧಿಗಳನ್ನು ಬಳಸುವುದು ಸಹ ಮಲಬದ್ಧತೆಗೆ ಒಂದು ಕಾರಣ. ಕೆಲವರು ಪೆಯಿನ್ ಕಿಲ್ಲರ್ ಔಷಧಿಗಳನ್ನು ಬಳಸುತ್ತಿರುತ್ತಾರೆ. ಅದೇ ರೀತಿ ಆಂಟಿ ಡಿಪ್ರೆಸೆಂಟ್ ನಂತಹ ಔಷಧಿಗಳು ಬಳಸುವುದು ಇದಕ್ಕೆ ಕಾರಣವಾಗಿರಬಹುದು. ಥೈರಾಯಿಡ್ ಸಮಸ್ಯೆ ಇದ್ದಾಗ, ಲಿವರ್ ಸಮಸ್ಯೆಗಳು, ಪಾರ್ಶ್ವವಾಯು ಅಥವಾ ನರಗಳ ಸಮಸ್ಯೆ ಇದ್ದಾಗ, ಜೀರ್ಣಕ್ರಿಯೆಯಲ್ಲಿ ಲೋಪಗಳು ತಲೆಯೆತ್ತಿದಾಗ, ಗರ್ಭಿಣಿಯರಾಗಿದ್ದಾಗ, ವಯಸ್ಸು ಹೆಚ್ಚಾದಂತೆ ಅಥವಾ ಪ್ರಯಾಣಿಸುವ ಸಮಯಗಳಲ್ಲಿ ಸಹ ಮಲಬದ್ಧತೆ ಸಮಸ್ಯೆ ಬರುತ್ತದೆ. ಇದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಈಗ ನೋಡೋಣ್ನ

ನಿತ್ಯ ಆಹಾರದಲ್ಲಿ ಸಾಕಷ್ಟು ಹಣ್ಣು, ತರಕಾರಿ, ಧಾನ್ಯಗಳು ಇರುವಂತೆ ನೋಡಿಕೊಳ್ಳಬೇಕು. ಅದೇ ರೀತಿ ತಕ್ಕಷ್ಟು ನೀರು ಕುಡಿಯಬೇಕು. ನಿತ್ಯ ಕನಿಷ್ಠ 5 ಲೀಟರ್ ನೀರು ಕುಡಿಯಬೇಕು. ಈ ರೀತಿ ತಪ್ಪದೆ ಸಾಕಷ್ಟು ನೀರು ಕುಡಿದರೆ ಕರುಳಿನಲ್ಲಿ ಸಂಗ್ರಹವಾಗಿರುವ ಮಲ ಮೃದುವಾಗಿ ಬದಲಾಗಿ, ಸುಲಭವಾಗಿ ಹೊರಹೋಗುತ್ತದೆ. ಬೆಳಗ್ಗೆ ನೀರು ಕುಡಿದ ಬಳಿಕ ಸ್ವಲ್ಪ ಹೊತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡಬೇಕು. ಆ ರೀತಿ ನಡೆದಾಡುವುದರಿಂದ ಹೊಟ್ಟೆ ಭಾಗಕ್ಕೆ ವ್ಯಾಯಾಮವಾಗುತ್ತೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ನೀರು ಹೆಚ್ಚಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಆರೋಗ್ಯವಾಗಿರುತ್ತದೆ. ಜೀರ್ಣವಾಗದ ಫೈಬರ್ ಪದಾರ್ಥಗಳು ಹೆಚ್ಚು ನೀರನ್ನು ಸಂಗ್ರಹಿಸಿ ಜೀರ್ಣ ಕ್ರಿಯೆ ಆರೋಗ್ಯಕರವಾಗಿ ಇರಲು ಉಪಯೋಗವಾಗುತ್ತದೆ. ಜೀರ್ಣಕ್ರಿಯೆಗೆ ಒಳಿತು ಮಾಡುವ ಸೂಕ್ಷ್ಮಾಣುಗಳು ಚುರುಕಾಗಿರುತ್ತವೆ. ತಣ್ಣಗಿನ ಮಡ್ ಪ್ಯಾಡ್, ತೊಟ್ಟಿಸ್ನಾನ, ಯೋಗಾಸನ, ಪ್ರಾಣಾಯಾಮ ಸೇರಿದಂತೆ ಪ್ರಕೃತಿ ವೈದ್ಯ ಚಿಕಿತ್ಸೆಗಳನ್ನು ಪಡೆಯುತ್ತಾರೆ. ಸಣ್ಣಪುಟ್ಟ ಯೋಗಾಸನಗಳನ್ನು ಮಾಡುವುದರಿಂದಲೂ ಸಹ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಪವನಮುಕ್ತಾಸನ, ವಜ್ರಾಸನದಂತಹವು ಮಲಬದ್ಧತೆಯನ್ನು ನಿವಾರಿಸುತ್ತವೆ. ಇನ್ನು ಒತ್ತಡವನ್ನು ದೂರ ಮಾಡುವ ಆಸನಗಳು, ತ್ರಿಫಲ ಚೂರ್ಣ ಬಳಸುವುದರಿಂದಲೂ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು.