ಕಾಲಲ್ಲಿ ಕೈಯಲ್ಲಿ ಉಂಟಾಗುವ ಆಣಿಗೆ ಭಯ ಪಡ್ಬೇಡಿ.. ಈ ಮನೆಮದ್ದು ಪಾಲಿಸಿ ಅದರಿಂದ ಮುಕ್ತಿ ಹೊಂದಿ..

1
9566

👇PlayStore ನಲ್ಲಿ ನಮ್ಮ ಆಪ್ ಡೌನ್ಲೋಡ್ 👍 ಮಾಡಿ 👇👇

👆ನಮ್ಮ ಆಪ್ ಡೌನ್ಲೋಡ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಅಣಿಗಳು ಗಂಟುಗಳ ರೂಪದಲ್ಲಿ ಇದ್ದು ಒರಟಾಗಿ ಚರ್ಮದಿಂದ ಎದ್ದಂತೆ ಕಾಣಿಸಿಕೊಳ್ಳುತ್ತವೆ. ಇವುಗಳು ಕೈ, ಭುಜ, ಕಾಲುಗಳು, ಮುಖ ಮತ್ತು ನೆತ್ತಿಯ ಮೇಲೆ ಕೂಡ ಕಾಣಿಸಿಕೊಳ್ಳಬಹುದು. ಮೂಲತಃ ವೈರಸ್ ಸೋಕಿನಿಂದ ಉಂಟಾಗುವ ಈ ಸಮಸ್ಯೆಯು ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರಿಂದ, ಗಟ್ಟಿಯಾದ ಪಾದರಕ್ಷೆ ತೊಡುವುದು, ಒರಟು ನೆಲದ ಮೇಲೆ ಬರಿಗಾಲಿನಲ್ಲಿನಲ್ಲಿ ನಡೆಯುವುದು, ಚರ್ಮದ ಒಂದು ಭಾಗಕ್ಕೆ ರಕ್ತ ಸಂಚಾರವಾಗದೆ ಇರುವುದರಿಂದ ಅಧಿಕವಾಗುವುದು. ಕಾಲಿನ ಒಂದು ಭಾಗದ ಚರ್ಮ ಗಟ್ಟಿಯಾಗಿರುತ್ತವೆ. ಓಡಾಡಲು ಕಷ್ಟವಾಗುತ್ತವೆ. ಅಣಿಯಾದ ಚರ್ಮದ ಭಾಗ ಸ್ಪರ್ಶಜ್ಞಾನವನ್ನು ಕಳೆದುಕೊಳ್ಳುತ್ತದೆ. ಪ್ರಾಥಮಿಕವಾಗಿ ವೈರಸ್ ನಿಂದ ಹುಟ್ಟಿಕೊಳ್ಳುವ ಈ ಸಣ್ಣ ಗಂಟುಗಳು ಮನೆ ಮದ್ದಿನ ಮೂಲಕ ಗುಣಪಡಿಸಬಹುದು.

ಅವುಗಳಲ್ಲಿ ಕೆಲವು ಮನೆಮದ್ದನ್ನು ಇಲ್ಲಿ ನೀಡಿದ್ದೇವೆ ಓದಿ ನೋಡಿ.

-ಉತ್ತರಾಣಿ ಎಲೆ ಮತ್ತು ಕರಿ ಎಳ್ಳನ್ನು ಸೇರಿಸಿ ಅರೆದು ಆಣಿ ಮೇಲಿಟ್ಟು ಕಟ್ಟಬೇಕು. ದಿನಕ್ಕೆ ಒಂದು ಬಾರಿಯಂತೆ ಆಣಿ ಕರಗುವವರೆಗೂ ಕಟ್ಟುತ್ತಾ ಹೋಗಬೇಕು.

-ಆಣಿಯ ಲೋಳಕೆಯನ್ನು ಕತ್ತರಿಸಿ ಅತಿಬಲ ಸೊಪ್ಪನ್ನು ಪರಂಗಿ ಹಾಲಿನಲ್ಲಿ ಅರೆದು ಗಾಯವಿರುವ ಜಾಗಕ್ಕೆ ಹಚ್ಚಿದ್ದಲ್ಲಿ ಆಣಿ ಕಡಿಮೆಯಾಗುತ್ತದೆ.

-ಆಣಿಯನ್ನು ಸಾಬೂನಿನಿಂದ ತೊಳೆದು ಸ್ವಚ್ಛಗೊಳಿಸಿ ರಕ್ತ ಬರುವವರೆಗೂ ಬ್ಲೇಡಿನಿಂದ ಕೊಯ್ದು ಅಸಕ್ಕೆ ದತ್ತೂರಿ ಅಥವಾ ಎಕ್ಕದಹಾಲನ್ನು ಬೆಲ್ಲದೊಂದಿಗೆ ಮಿಶ್ರ ಮಾಡಿ ಹಚ್ಚಬೇಕು.

-ಹರಳೆಣ್ಣೆಯನ್ನು ಬಿಸಿ ಮಾಡಿ ಪಟ್ಟು ಹಾಕಿದ್ದಲ್ಲಿ ಆಣಿ ಕಡಿಮೆಯಾಗುವುದು.

-ಹಳೆ ಸುಣ್ಣವನ್ನು ಎಕ್ಕದ ಹಾಲಿನಲ್ಲಿ ಅದ್ದಿ ಅರಿಶಿನ ಬೆರೆಸಿ ರಾತ್ರಿ ನೆನಸಿಟ್ಟು ಬೆಳಿಗ್ಗೆ ಆಣಿಯಿರುವ ಜಾಗಕ್ಕೆ ಲೇಪಿಸಬೇಕು.

-ಚರ್ಮ ಸುಡದ ಹಾಗೆ ಬಿಸಿಯಾದ ಬೇವಿನ ಎಣ್ಣೆಯನ್ನು ಆಣಿಯಿರುವ ಜಾಗಕ್ಕೆ ಲೇಪಿಸಬೇಕು.

-ಈರುಳ್ಳಿಯನ್ನು ಒಂದು ರಾತ್ರಿಪೂರ್ತಿ ವಿನೆಗರ್ ನಲ್ಲಿ ನೆನೆಸಿಟ್ಟು ಬೆಳಗ್ಗೆ ನೆನೆಸಿಟ್ಟ ಈರುಳ್ಳಿ ಹೋಳನ್ನು ಗಂಟಿನ ಮೇಲಿಟ್ಟು ಬಟ್ಟೆ ಸುತ್ತಿ.

-ಬೆಳ್ಳುಳ್ಳಿಯನ್ನುಅರೆದು ಗಂಟು ಇರುವ ಜಾಗಕ್ಕೆ ಹಚ್ಚಿ ಬಿಳಿ ಬಟ್ಟೆಯಿಂದ ಕಟ್ಟಿ ಬಿಡಿ.

-ಅಗಸೇಪುಡಿಗೆ ಅಗಸೆ ಎಣ್ಣೆ ಮತ್ತು ಜೇನು ಸೇರಿಸಿ ಗಂಟು ಇರುವ ಜಾಗಕ್ಕೆ ಹಚ್ಚಿ ನಂತರ ಬಟ್ಟೆಯಲ್ಲಿ ಸುತ್ತಿ. ಪ್ರತಿದಿನ ಹೀಗೆ ಹೊಸದಾಗಿ ತಯಾರಿಸಿಕೊಂಡು ಹಚ್ಚಿದಲ್ಲಿ ಆಣಿ ನಿಯಂತ್ರಣಕ್ಕೆ ಬರುತ್ತದೆ.
👇PlayStore ನಲ್ಲಿ ನಮ್ಮ ಆಪ್ ಡೌನ್ಲೋಡ್ 👍 ಮಾಡಿ 👇👇

👆ನಮ್ಮ ಆಪ್ ಡೌನ್ಲೋಡ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆