ವಾಯು ಮಾಲಿನ್ಯದಿಂದ ಉಂಟಾಗುವ ಕೆಮ್ಮು ಕಫ ಸಮಸ್ಯೆಗಳಿಗೆ ಕೆಲವು ಸರಳವಾದ ಮನೆಮದ್ದುಗಳು ಇಲ್ಲಿವೆ ನೋಡಿ..

0
1832

ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಇದರಿಂದ ವಾಯು ಮಾಲಿನ್ಯ ಹೆಚ್ಚಾಗಿ ಉಸಿರಾಡುವುದು ಕೂಡ ವಿಚಾರ ಮಾಡುವ ಕಾಲ ಬಂದಿದೆ. ಈ ವಾಯು ಮಾಲಿನ್ಯದಿಂದ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳು ಬಿರುತ್ತಿದು ಅದರಲ್ಲಿ ಹೆಚ್ಚು ಕಿರಿಕಿರಿ ತರುವ ಕೆಮ್ಮು ಕಫ, ಇವುಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದು ಜನರಿಗೆ ಅಲ್ಲಿನ ಮಾಲಿನ್ಯದಿಂದ ಈ ಸಮಸ್ಯೆಗಳು ಕಂಡು ಬರುತ್ತಿವೆ. ಈ ಕೆಮ್ಮು ಕಫ ಬಂದರೆ ಅಷ್ಟು ಸುಲಭವಾಗಿ ವಾಸಿಯಾಗುವುದೇ ಇಲ್ಲ ಇಂತಹ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಇಲ್ಲಿವೆ ನೋಡಿ.

ಶುಂಠಿ:

Also read: ಅಜೀರ್ಣಕ್ಕೆ, ಪಿತ್ತದೋಷಕ್ಕೆ ಶುಂಠಿಗಿಂತ ಔಷಧಿ ಬೇಕಾ??

ಒಣ ಕೆಮ್ಮ ಮತ್ತು ಕಫ ಕಾಣಿಸಿಕೊಂಡಿದ್ದರೆ ಕರಿಮೆಣಸು, ಜೇನುತುಪ್ಪ ಮತ್ತು ಶುಂಠಿಯನ್ನು ಮಿಶ್ರಣ ಮಾಡಿ ತಿನ್ನಿರಿ. ಇದರಿಂದ ಮಾಲಿನ್ಯದಿಂದ ಉಂಟಾಗುವ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ಶುಂಠಿಯ ಚಹಾವನ್ನು ಮಾಡಿ ಕುಡಿದರೆ ಕಫವನ್ನು ನಿವಾರಿಸುತ್ತದೆ. ಶುಂಠಿ, ಲವಂಗ ಮತ್ತು ಉಪ್ಪನ್ನು ಸೇರಿಸಿಕೊಂಡು ಅಗಿದರೆ ಕಫ ಮತ್ತು ಗಂಟಲ ಕೆರೆತದ ನಿವಾರಣೆಯಾಗುತ್ತದೆ.

ತುಳಸಿ:

Also read: ಮನೆಯ ಮುಂದೆ ತುಳಸಿ ಕಟ್ಟೆ ಕಟ್ಟುವ ಹಿಂದಿನ ವೈಜ್ಞಾನಿಕ ಸತ್ಯ!!!

ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳು ಅಡಗಿದೆ. ಸಾಮಾನ್ಯವಾಗಿ ನಾವು ನಗರಗಳಲ್ಲಿ ಕಂಡು ಬರುವಂತಹ ವಾಯು ಮಾಲಿನ್ಯದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಎರಡು ಎಲೆಗಳನ್ನು ತಿಂದರೆ ಒಳ್ಳೆಯದು.

ಬೆಲ್ಲ:

Also read: ಬೆಲ್ಲ ತಿನ್ನೋದ್ರಿಂದ ಇಷ್ಟೊದೆಲ್ಲ ಲಾಭ ಇದೆ ಅಂತ ಗೊತ್ತಾದ್ರೆ, ಇವತ್ತಿಂದಾನೆ ಸಕ್ಕರೆ ಬಿಟ್ಟು ಬೆಲ್ಲ ಉಪಯೋಗಿಸೋಕ್ಕೆ ಶುರು ಮಾಡ್ತೀರ!!

ನೀವು ತುಂಬಾ ಹೊಗೆಯಲ್ಲಿ ಓಡಾಡಿದ್ದರೆ, ಊಟದ ಬಳಿಕ ಸ್ವಲ್ಪ ಬೆಲ್ಲವನ್ನು ತಿನ್ನಿರಿ. ಇದರಿಂದ ನಿಮ್ಮ ರಕ್ತವನ್ನು ಸ್ವಚ್ಛಗೊಳಿಸುವುದಲ್ಲದೆ, ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಿಕೊಂಡು ಬಿಸಿ ಬಿಸಿಯಾಗಿ ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ:

Also read: ಬೆಳ್ಳುಳ್ಳಿಯ ಉಪಯೋಗಗಳು ಗೊತ್ತಾದ್ರೆ ಎದ್ದ ತಕ್ಷಣ ಒಂದು ಎಸಳು ಬಾಯಿಗೆ ಹಾಕ್ಕೊತೀರಾ…

ಮಾಲಿನ್ಯದಿಂದ ಕೆಮ್ಮಿನ ಸಮಸ್ಯೆಗೆ ತುತ್ತಾಗಿದ್ದರೆ ಬೆಳ್ಳುಳ್ಳಿಯನ್ನು ಸೇವಿಸಿ. ಒಂದು ಚಮಚ ಬೆಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಮಿಶ್ರ ಮಾಡಿ ತಿನ್ನುವುದು ಉತ್ತಮ. ಇದನ್ನು ಸೇವಿಸಿದ ಬಳಿಕ ಅರ್ಧ ಗಂಟೆವರೆಗೆ ನೀರು ಕುಡಿಯಬೇಡಿ. ಹೀಗೆ ದಿನನಿತ್ಯ ಮಾಡುವುದರಿಂದ ಕೆಮ್ಮಿನ ಸಮಸ್ಯೆಗಳು ದೂರವಾಗುತ್ತದೆ.

ಕರಿಮೆಣಸು:

ಮಾಲಿನ್ಯದಿಂದ ಕಫ ಮತ್ತು ಕೆಮ್ಮು ಹೆಚ್ಚಾಗಿದ್ದರೆ ಕರಿಮೆಣಸನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿ. ಇದರಿಂದ ಕೆಮ್ಮು ಕಡಿಮೆಯಾಗುವುದಲ್ಲದೆ ದೇಹದಲ್ಲಿರುವ ವಿಷಕಾರಿ ಮಾಲಿನ್ಯ ಕಡಿಮೆಯಾಗುತ್ತದೆ.

ದಾಲ್ಚಿನಿ, ಜೇನು:

ದಾಲ್ಚಿನಿ, ಜೇನು ಮತ್ತು ನಿಂಬೆರಸವನ್ನು ಸೇರಿಸಿ ಸೇವಿಸಿದರೆ ಕಫದ ನಿವಾರಣೆಯಾಗುತ್ತದೆ. ಮತ್ತು ನೆಗಡಿ ಅಥವಾ ಜ್ವರವಿರುವಾಗ ಬೆಚ್ಚಗಿನ ನೀರನ್ನು ಕುಡಿದರೆ ಅದು ಗಂಟಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮತ್ತು 1 ಚಮಚ ಜೇನಿಗೆ 1/4 ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿಕೊಂಡು ತಿಂದರೆ ಕಫ ಕಡಿಮೆಯಾಗುತ್ತದೆ.

ಅರಿಶಿಣ ಮತ್ತು ಕಲ್ಲುಸಕ್ಕರೆ:

ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿದರೆ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ. ಅರಿಶಿಣ ಆ್ಯಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ.