ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವಿಕೆ ಮತ್ತು ಬಿರುಕಿಗೆ ಈ ಸರಳ ಉಪಾಯಗಳನ್ನು ಪಾಲಿಸಿದ್ರೆ ದುಬಾರಿ ಮೊಯಿಶ್ವರೈಸರ್ಸ್, ಬ್ಯೂಟಿ ಪಾರ್ಲರ್ ನ ಮೊರೆ ಹೋಗೋದು ತಪ್ಪುತ್ತೆ…

0
1477

Kannada News | Health tips in kannada

ಚಳಿಗಾಲ ಬಂದ್ರೆ ಸಾಕು ಅಂಗಾಲು, ಹಿಮ್ಮಡಿ , ಚರ್ಮಗಳಲ್ಲಿ ಬಿರುಕು ಕಾಣಿಸಿಕೊಂಡು ನೋವನ್ನುಂಟುಮಾಡುತ್ತದೆ. ಇದಕ್ಕಾಗಿಯೇ ಹಲವಾರು ಮುಲಾಮುಗಳು ಮಾರುಕಟ್ಟೆಯಲ್ಲಿ ದೊರೆತರೂ ದುಬಾರಿಯಾಗಿರುತ್ತವೆ. ಮನೆಯಲ್ಲಿ ಈ ವಿಧಾನಗಳನ್ನು ಪಾಲೊಸಿದ್ದಲ್ಲಿ ಹಣವು ಉಳಿಯುತ್ತದೆ ಮತ್ತು ಯಾವುದೇ ಸೈಡ್ ಎಫೆಕ್ಟ್ಸ್ ಕೂಡ ಇರುವುದಿಲ್ಲ..

ಮೂರು ಭಾಗ ಮೇಣಕ್ಕೆ ಒಂದು ಭಾಗ ಶುದ್ಧ ಎಣ್ಣೆ, ಒಂದು ಭಾಗ ತುಪ್ಪ, ೧೦ ಬಿಲ್ಲೆ ಕರ್ಪೂರ ಇವುಗಳ ಮಿಶ್ರಣ ಮಾಡಿ ದ್ರವರೂಪಕ್ಕೆ ಬರುವಷ್ಟೇ ಕಾಯಿಸಿ ತಣ್ಣಗಾದ ಬಳಿಕ ಗಾಜಿನ ಭರಣಿಯಲ್ಲಿ ಸಂಗ್ರಹಿಸಬೇಕು. ಒಡೆದಿರುವ ಹಿಮ್ಮಡಿಯನ್ನು ಕಲ್ಲಿನ ಮೇಲೆ ತಿಕ್ಕಿ ನಂತರ ಈ ಮೂಲಮನ್ನು ಹಚ್ಚಿದ್ದಲ್ಲಿ ಪಾದ ಮೃದುವಾಗುವುದು ಗ್ಯಾರಂಟೀ..

 • ಈರುಳ್ಳಿಯನ್ನು ಜಜ್ಜಿ ಬಿರುಕು ಬಿಟ್ಟಿರುವ ಅಂಗಾಲಿಗೆ ಕಟ್ಟುವುದು.
 • ಶುದ್ಧವಾದ ಕುದಿಸಿದ ಹಾಲಿಗೆ ನಿಂಬೆರಸ ಮತ್ತು ಗ್ಲಿಸರಿನ್ ಸೇರಿಸಿ ತುಸು ಹೊತ್ತಿನ ಬಳಿಕ ಒಡೆದ ಹಿಮ್ಮಡಿಗೆ, ಅಂಗಾಲಿಗೆ ಅಂಗೈಗಳಿಗೆ ಹಚ್ಚಬೇಕು.
 • ಕಡಲೆಹಿಟ್ಟು ಹಾಲಿಗೆ ಗ್ಲಿಸರಿನ್ ಸೇರಿಸಿ ಮುಖ, ಅಂಗೈ ಮತ್ತು ಅಂಗಾಲುಗಳಿಗೆ ಹಚ್ಚುವುದು.
 • ಕೊಬ್ಬರಿ ಎಣ್ಣೆಗೆ ಸುಣ್ಣದ ತಿಳಿ ಬೆರೆಸಿ ಒಡೆದಿರುವ ಭಾಗಕ್ಕೆ ಹಚ್ಚುವುದು.

 • ಅಗಲವಾದ ಪಾತ್ರೆಗೆ ಬಿಸಿ ನೀರನ್ನು ತುಂಬಿ ಅದಕ್ಕೆ ಅಡುಗೆ ಸೋಡಾ ಬೆರೆಸಿ ಅದರಲ್ಲಿ ೧೦ ನಿಮಿಷಗಳ ಕಾಲ ಪಾದವನ್ನಿಟ್ಟುಕೊಳ್ಳಬೇಕು.
 • ಹಾಲಿನ ಕೆನೆಗೆ ನಿಂಬೆರಸ ಸೇರಿಸಿ ಮುಖಕ್ಕೆ ಲೇಪಿಸುವುದು.
 • ಬಿರುಕು ಬಿಟ್ಟ ತುಟಿಗೆ ಜೇನನ್ನು ಹಚ್ಚುವುದರಿಂದ ತುಟಿ ಮೃದುವಾಗುತ್ತದೆ.

 • ಅಂಗೈ ಚರ್ಮ ಮೃದುವಾಗಬೇಕಾದರೆ ಅಂಗೈಗೆ ಬೆಣ್ಣೆ ಬೆಣ್ಣೆ ಸವರಿಕೊಂಡು ಚೆನ್ನಾಗಿ ಮಾಲೀಶು ಮಾಡುತ್ತಿರಬೇಕು.
 • ಕಾಯಿಸಿ ಆರಿಸಿದ ಹಾಲಿಗೆ ನಿಂಬೆರಸ, ಗ್ಲಿಸರಿನ್ ಬೆರೆಸಿ ಅಂಗೈಗಳಿಗೆ ತಿಕ್ಕಬೇಕು.

 • ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರಗೊಳಿಸಿ ಹಚ್ಚುವುದು.
 • ಪರಂಗಿ ಹಣ್ಣಿನ ಹೋಳಿನಿಂದ ಚರ್ಮವನ್ನು ತಿಕ್ಕುವುದು.
 • ಕಿತ್ತಳೆ ಸಿಪ್ಪೆಯಿಂದ ಒಸರುವ ದ್ರವವನ್ನು ಚರ್ಮದ ಮೇಲೆ ಹಚ್ಚಿ.
 • ಬಟಾಣಿ ಹಿಟ್ಟನ್ನು ಹಾಲಿನಲ್ಲಿ ಕಲಸಿ ಮುಖಕ್ಕೆ ಹಚ್ಚುವುದು.
 • ನಿಂಬೆ, ಮಾವಿನ ಚಿಗುರು,ಬೇವಿನ ಸೊಪ್ಪು,ತುಳಸಿ, ಬಿಲ್ವಪತ್ರೆಗಳನ್ನು ಬೇಯಿಸಿ ಕಷಾಯ ಇಳಿಸಿಕೊಂಡು ಅದನ್ನು ಸ್ವಲ್ಪ ಬಿಸಿ ನೀರಿಗೆ ಬೆರೆಸಿ ಸ್ನಾನ ಮಾಡಿದಲ್ಲಿ ಮೈಕೈ ತುರಿಕೆ ಗುಣವಾಗುವುದು

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Watch:

Also Read: ಸೈನಸೈಟಿಸ್ ಮತ್ತು ನಿರಂತರ ಕಾಡುವ ನೆಗಡಿಗೆ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ…