ಕೀವಿ ನೋವು ಜಾಸ್ತಿ ಆದ್ರೆ ಭಯ ಪಡ್ಬೇಡಿ ಈ ಮದ್ದನ್ನು ಉಪಯೋಗಿಸಿ ಕೀವಿ ನೋವು ಮಾಯವಾಗತ್ತೆ …!

0
3980

ದೇಹಕ್ಕೆ ಬರುವ ನೋವುಗಳಲ್ಲಿ ಕಿವಿ ನೋವು ಕೂಡ ಒಂದು. ಇದು ಬಂದರೆ ಸಾಕು ಸಹಿಸುವುದು ಅಸಾಧ್ಯ. ಕಿವಿಯಲ್ಲಿ ನೀರು ಹೋದಾಗ, ಶೀತ, ಕೆಲವರಿಗೆ ತುಂಬಾ ದೂರ ಪ್ರಯಾಣ ಮಾಡಿದಾಗ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಿವಿ ನೋವು ರಾತ್ರಿ ಹೊತ್ತು ಕಾಣಿಸಿಕೊಂಡರಂತೂ ಬೆಳಗ್ಗೆವರೆಗೆ ಸಹಿಸುವುದು ತುಂಬಾ ಕಷ್ಟ.

Also read: ಅರಳಿ ಮರದಲ್ಲಿ ಇಷ್ಟೆಲ್ಲ ಆರೋಗ್ಯಕರ ಗುಣಗಳು ಇರೋದಕ್ಕೆ ನಮ್ಮ ಹಿರಿಯರು ಅರಳಿ ಕಟ್ಟೆ ಸುತ್ತಕ್ಕೆ ಹೇಳ್ತಿದ್ರೇನೋ…

ಕಿವಿನೋವು ಬರುವ ಕಾರಣಗಳು

ಕಿವಿನೋವು ಬರಲು ಹಲವು ಕಾರಣಗಳಿವೆ, ಇದರಲ್ಲಿ ದೀರ್ಘ ಮತ್ತು ಅಲ್ಪ ಕಾಲದ ಕಿವಿ ಸೋಂಕಿನಿಂದಾಗಿ ನೋವು ಬಾಧಿಸುತ್ತದೆ, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯಲ್ಲಿ ಗಾಯ, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ.

ಕಿವಿ ನೋವಿನ ಲಕ್ಷಣಗಳು

ಹೊರಕಿವಿಯ ನಾಳದಲ್ಲಿ ತುರಿಕೆ, ಕಿವಿಯನ್ನು ಮುಟ್ಟಿದರೆ ನೋಯುವುದು ಆಥವಾ ಕಿವಿ ನಾಜೂಕಾಗುವುದು, ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ಕಿವಿಯಲ್ಲಿ ತುರಿಸುವಿಕೆ, ಕಿವಿಯಲ್ಲಿ ಝೇಂಕರಿಸುವ ಶಬ್ಧ, ಊದಿಕೊಂಡ ಕಿವಿ, ಕಿವಿಯಿಂದ ದ್ರವ ವಿಸರ್ಜನೆ ಇತ್ಯಾದಿ ಲಕ್ಷಣಗಳಾಗಿವೆ.

ಹಳ್ಳಿಯಲ್ಲಿ ಸಣ್ಣ ಪುಟ್ಟ ಕಿವಿನೋವಿಗೆ ಆಸ್ಪತ್ರೆ ಹೋಗುವ ಬದಲು ಮನೆ ಮದ್ದು ಮಾಡಿಕೊಳ್ಳುತ್ತಾರೆ. ಆ ಮದ್ದುಗಳು ತಕ್ಷಣವೆ ಕಿವಿನೋವನ್ನು ಹೋಗಲಾಡಿಸುತ್ತದೆ. ಆ ಮನೆ ಮದ್ದುಗಳ ಬಗ್ಗೆ ತಿಳಿಯೋಣ.

ಹಾಟ್ ಬ್ಯಾಗ್:

ಕಿವಿನೋವಾದಾಗ ಹಾಟ್ ಬ್ಯಾಗ್ ನಲ್ಲಿ ಬಿಸಿನೀರನ್ನು ತುಂಬಿಸಿ ಅದರಿಂದ ಕಿವಿ ಮೇಲೆ ಮೆಲ್ಲನೆ ಶಾಖ ಕೊಡಬೇಕು. ಈ ರೀತಿ ಸ್ವಲ್ಪ ಹೊತ್ತು ಮಾಡಿದರೆ ಕಿವಿನೋವು ಕಡಿಮೆಯಾಗುತ್ತದೆ. ಅಥವಾ ಕಿವಿ ನೋವನ್ನು ಕಡಿಮೆ ಮಾಡಲು ಸ್ವಚ್ಛವಾದ ಟವೆಲ್ ಅನ್ನು ಬಿಸಿ ನೀರಿಗೆ ಅದ್ದಿ ನಂತರ ಅದನ್ನು 20 ನಿಮಿಷಗಳ ಕಾಲ ನೋವಿರುವ ಕಿವಿಗೆ ಮೃದುವಾಗಿ ಒತ್ತಿ ಬೆಚ್ಚಗಿನ ಶಾಖ ಕೊಡಿ.

ಸಾಸಿವೆ ಮತ್ತು ಬೆಳ್ಳುಳ್ಳಿ:

1/2 ಎಸಳು ಬೆಳ್ಳುಳ್ಳಿ ಎಸಳನ್ನು ಒಂದು ಚಮಚ ಸಾಸಿವೆ ಎಣ್ಣೆಗೆ ಹಾಕಿ ಸ್ವಲ್ಪ ಬಿಸಿ ಮಾಡಬೇಕು. ಎಣ್ಣೆ ಸ್ವಲ್ಪ ಬಿಸಿಯಿರುವಾಗ ಕಿವಿ ನೋವು ಇರುವವರನ್ನು ಮಲಗಿಸಿ ಮೆಲ್ಲನೆ ಕಿವಿಗೆ ಎಣ್ಣೆ ಬಿಡಬೇಕು. 10 ನಿಮಿಷದ ನಂತರ ಮತ್ತೊಂದು ಕಿವಿಗೆ ಎಣ್ಣೆ ಬಿಡಬೇಕು.

ತುಳಸಿ ಎಲೆ:

ಇದೊಂದು ಅದ್ಭುತ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಅಂಶಗಳನ್ನು ಒಳಗೊಂಡಿದ್ದು ಕಿವಿ ನೋವಿಗೆ ಉತ್ತಮ ಪರಿಹಾರವನ್ನು ಒದಗಿಸುತ್ತದೆ. ತುಳಸಿಯ ಎಲೆಯಿಂದ ರಸವನ್ನು ಪಡೆದು 2 ಹನಿಗಳಷ್ಟು ನೋವಿರುವ ಕಿವಿಗೆ ಬಿಡಿ.

ಬಾಳೆಗಿಡದ ರಸ:

ಬಾಳೆ ಗಿಡವನ್ನು ಕತ್ತಿಯಿಂದ ಗೀರಿದಾಗ ರಸ ಬರುತ್ತದೆ. ಅದನ್ನು ಸಂಗ್ರಹಿಸಿ, ಕುದಿಸಿ ತಣ್ಣಗಾಗಲು ಇಡಬೇಕು. ಅದನ್ನು ರಾತ್ರಿ ಮಲುಗುವ ಮುಂಚೆ ಹಾಕಿದರೆ ಕಿವಿನೋವು ಶಾಶ್ವತವಾಗಿ ಗುಣಮುಖವಾಗುತ್ತದೆ.

ಈರುಳ್ಳಿ ರಸ:

ಈರುಳ್ಳಿ ಹಿಂಡಿ ಅದರ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಿವಿಯ ಮೇಲೆ ಒತ್ತಿ ಇಡಿ. ಇದು ನೋವನ್ನು ಕಡಿಮೆ ಮಾಡುತ್ತದೆ ಮತ್ತು ನೋವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ, ಅಂತೆಯೇ ಕೆಂಪಗಾದ ಕಿವಿ ಹಾಗೂ ತುರಿಕೆಯನ್ನು ದೂರಮಾಡುತ್ತದೆ.

ಬಾದಾಮಿ ಎಣ್ಣೆ:

ಚಮಚವನ್ನು ಬಿಸಿ ನೀರಿನಲ್ಲಿಟ್ಟು ಬಿಸಿ ಮಾಡಿ ಅದಕ್ಕೆ ಬಾದಾಮಿ ಎಣ್ಣೆಯನ್ನು ಹಾಕಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.

ವಿಟಮಿನ್ ಸಿ ಇರುವ ಆಹಾರಗಳು:

ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸಿ. ಲಿಂಬೆ, ಕಿತ್ತಳೆ, ಸೀಬೆಹಣ್ಣು, ಸ್ಟ್ರಾಬೆರ್ರಿ, ಪಪ್ಪಾಯ, ಗೋಡಂಬಿ, ಕಿವಿ ನೋವಿಗೆ ಕಾರಣವಾಗುವ ಸೂಕ್ಷ್ಮಾಣುಗಳನ್ನು ಕೊಂದು ನೋವು ನಿವಾರಿಸುತ್ತದೆ.

ಮಿನರಲ್ ಆಯಿಲ್:

ಈಜುವಾಗ, ಕಿವಿಯಲ್ಲಿ ನೋವು ಉಂಟಾಗುವ ಅನುಭವ ಜನರಿಗಾಗುತ್ತದೆ. ಇದನ್ನು ತಡೆಗಟ್ಟಲು, ಈಜುವ ಮುನ್ನ ಕಿವಿಗೆ ಮಿನರಲ್ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ನೋವು ಉಂಟಾಗುವುದಿಲ್ಲ.