ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಆಗಿ ಟ್ರಬಲ್ ಆಗ್ತಿದ್ರೆ ಈ ಮನೆಮದ್ದುಗಳನ್ನು ಪಾಲಿಸಿ ತತ್ತಕ್ಷಣ ಪರಿಹಾರ ಹೊಂದಿ ..

0
2179

Kannada News | Health tips in kannada

ಹೊಟ್ಟೆನೋವು, ಉಬ್ಬರ, ಅಜೀರ್ಣ, ತಲೆಸುತ್ತು, ವಾಕರಿಯಂತಹ ತೊಂದರೆಗಳಿಗೆಲ್ಲಾ ಗ್ಯಾಸ್ ಟ್ರಬಲ್ ಎಂದು ಹೆಸರಿಟ್ಟುಕೊಂಡು ವೈದ್ಯರ ಸಲಹೆ ಇಲ್ಲದೆಯೇ ಅಂಟಾಸಿಡ್ ಗಳನ್ನೂ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೊತ್ತುಗೊತ್ತಿಲ್ಲದೆ ಆಹಾರ ಸೇವಿಸುವುದು ಅದರಲ್ಲೂ ಜಂಕ್ ಫುಡ್ ಸೇವನೆ, ಮಾನಸಿಕ ಒತ್ತಡ, ವ್ಯಾಯಾಮ ರಹಿತಗಳಿಂದ ಜಠರದಲ್ಲಿ ಅನಿಲ ಉತ್ಪತ್ತಿಯಾಗಿ ಮೇಲ್ಕಂಡ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಸಾಮಾನ್ಯವಾದ ಗ್ಯಾಸ್ ಟ್ರಬಲ್ ಗೆ ಇಲ್ಲಿದೆ ಮನೆಮದ್ದು.

  • ಬೆಳ್ಳುಳ್ಳಿಯಂಥ ದಿವ್ಯಔಷಧಿ ಜಠರಾಣಿಲಕ್ಕೆ ಮತ್ತೊಂದಿಲ್ಲ. ದಿನವೂ ಬೊಗಸೆಯಷ್ಟು ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಹೊಟ್ಟೆ ಉಬ್ಬರ ತಹಬದಿಗೆ  ಬರುತ್ತದೆ.
  • ಈರುಳ್ಳಿ ರಸದ ಸೇವನೆಯಿಂದಲೂ ಗ್ಯಾಸ್ ತೊಂದರೆ ಉಪಶಮನ ಸಿಗುತ್ತದೆ.
  • ತೆಂಗಿನ ಚಿಪ್ಪನ್ನು ಸುಟ್ಟು ಬೂದಿ ಮಾಡಿ, ಒಂದು ಟೀ ಸ್ಪೂನ್ ಬೂದಿಯನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.

  • ಒಣ ಶುಂಠಿ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸುವುದು.
  • ಹುರಿದ ಜೀರಿಗೆಯನ್ನು ಚೆನ್ನಾಗಿ ಜಗಿದು ತಿನ್ನುವುದು.
  • ದಾಲ್ಚಿನ್ನಿ ಚಕ್ಕೆಗಳಿಂದ ಕಷಾಯ ತಯಾರಿಸಿ ದಿನಕ್ಕೊಂದು ಕಪ್ ಕುಡಿಯುವುದು.

  • ಬಿಸಿ ಹಾಲಿಗೆ ಏಲಕ್ಕಿ ಪುಡಿ ಸೇರಿಸಿ ಕುಡಿದರೆ ಪದೇ ಪದೇ ತೇಗು ಬಾರದು.
  • ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಚೆನ್ನಾಗಿ ಕುಡಿಸಿ, ಕಷಾಯದ ರೂಪಕ್ಕೆ ಇಳಿಸಿಕೊಂಡು ದಿನಕ್ಕೆ ೨ ಸಲ ಹಾಲು ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುಡಿಯುವುದು.
  • ಕರಿ ಮೆಣಸಿನ ಚೂರ್ಣದೊಂದಿಗೆ ಸ್ವಲ್ಪ ಬೆರೆಸಿ ತಿನ್ನುವುದು.

Also Watch:

Also Read: ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವಿಕೆ ಮತ್ತು ಬಿರುಕಿಗೆ ಈ ಸರಳ ಉಪಾಯಗಳನ್ನು ಪಾಲಿಸಿದ್ರೆ ದುಬಾರಿ ಮೊಯಿಶ್ವರೈಸರ್ಸ್, ಬ್ಯೂಟಿ ಪಾರ್ಲರ್ ನ ಮೊರೆ ಹೋಗೋದು ತಪ್ಪುತ್ತೆ…