ಎದೆಯುರಿ ಬಂದಾಗ ಗಾಬರಿಯಾಗಬೇಡಿ, ಬಹಳಷ್ಟು ಸಲ ಅದು ಹೊಟ್ಟೆಯಲ್ಲಿನ ಗ್ಯಾಸ್-ನಿಂದ ಆಗುತ್ತೆ, ಈ ಸಮಸ್ಯೆಗೆ ಸುಲಭ ಮನೆಮದ್ದುಗಳು ಇಲ್ಲಿವೆ ನೋಡಿ!!

0
4414

ಅಸಿಡಿಟಿ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹಾಗಂತ ಇದು ದೊಡ್ಡ ಕಾಯಿಲೆ ಏನೂ ಅಲ್ಲ, ಹಾಗೆ ಉತ್ತಮ ಆರೋಗ್ಯದ ಸಂಕೇತವೂ ಅಲ್ಲ. ಸಾಮಾನ್ಯವಾಗಿ ಹೊಟ್ಟೆಯಲ್ಲಿ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಅಸಿಡಿಟಿ ಎಂದು ಕರೆಯಲಾಗಿದೆ. ಅಸಿಡಿಟಿಯಿಂದ ಹೊಟ್ಟೆ ಉರಿ, ಹೊಟ್ಟೆ ನೋವು, ಕೆಟ್ಟ ಅನಿಲ ಬಿಡುಗಡೆ ಅಥವಾ ಗ್ಯಾಸ್ ಹುಳಿತೇಗು ಮತ್ತು ಇತರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಸಿಡಿಟಿಯಿಂದಾದ ಎದೆ ಉರಿ ನಿವಾರಿಸುವ ಕೆಲವು ವಿಧಾನಗಳು ಈ ಕೆಳಗಿನತಿವೆ.

1. ಲವ೦ಗವನ್ನು ನಿಧಾನವಾಗಿ ಚೀಪಿ ಅದರ ರಸ ಕುಡಿಯಬೇಕು.(Lavanga)

2. ಊಟದ ನ೦ತರ ವೆನಿಲ್ಲಾ ಐಸ್ ಕ್ರೀ೦ ತಿನ್ನುವುದರಿ೦ದ ಅಥವಾ ೧ ಲೋಟ ತ೦ಪಾದ ಹಾಲು ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Venila)

3. ಬಾಧಾಮಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ತಿನ್ನಬೇಕು.(Almonds)

4. ನಿ೦ಬೆ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಅದನ್ನು ಉಪ್ಪಿನ ಜೊತೆ ಊಟಕ್ಕೆ ಮು೦ಚೆ ತಿನ್ನಬೇಕು.(Lemon & Salt)

5. ಊಟದ ನ೦ತರ ಮಜ್ಜಿಗೆಯನ್ನು ಕುಡಿಯಬೇಕು.(Butter milk)

6. ಎಲೆಕೋಸಿನ ಪಾನೀಯ ಮಾಡಿ ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Cabbage juice)

7. ೧೦ ಗ್ರಾ೦ ಬೆಲ್ಲವನ್ನು ಊಟದ ನ೦ತರ ಚೀಪಿ ರಸ ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Jagree)

8. ೧-೨ ಚಮಚ ಬಿಳಿ ವಿನಿಗರ್ ಊಟದ ನ೦ತರ ಕುಡಿಯಬೇಕು.(White Vinegar)

9. ದಿನಕ್ಕೆ ೨-೩ ಎಳನೀರು ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.(Tender coconut)

10. ದಿನಕ್ಕೆ ಕನಿಷ್ಟ ೩-೪ ಲೀ. ನೀರು ಕುಡಿಯಬೇಕು ಮತ್ತು ದಿನಾ ೧ ತಾಸು ವ್ಯಾಯಾಮ (3-4 lts water 1 hr excercise)ಮಾಡುವುದು ಒಳ್ಳೆಯದು.

11. ಮಲಗುವ ೪ ಗ೦ಟೆ ಮು೦ಚೆ ಊಟ ಮಾಡಬೇಕು. (dinner 4hrs before sleep)

12. ದಿನಾ ೭-೮ ತಾಸು ನಿದ್ರೆ ಮಾಡಬೇಕು.(8 -9 hrs sleep)

13. ಲೋಟ ತ೦ಪಾದ ಹಾಲು ಕುಡಿಯುವುದರಿ೦ದ ಎದೆ ಉರಿಯನ್ನು ತಡೆಗಟ್ಟಬಹುದು.

ಎಲೆಕೋಸು, ಈರುಳ್ಳಿ, ಹಾಲು, ಬೀನ್ಸ್, ಕಡಲೆ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಕಡಿಮೆ ಮಾಡುವುದು ಒಳ್ಳೆಯದು.

ಶುಂಠಿ:

ಒಂದು ಚಿಕ್ಕ ತುಂಡು ಶುಂಠಿಯನ್ನು ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ನೀರು ತಣ್ಣಗಾದ ಮೇಲೆ ಕುಡಿದರೆ ಗ್ಯಾಸ್ ಸಮಸ್ಯೆ ಕಡಿಮೆಯಾಗುವುದು. ಟೀಗೆ ಶುಂಠಿ ಹಾಕಿ ಕುಡಿದರೂ ಈ ಸಮಸ್ಯೆ ಪರಿಹಾರವಾಗುವುದು.

ನೀರು ಕುಡಿಯುವುದು:

ನೀರು ಕುಡಿದರೆ ಈ ರೀತಿಯ ಗ್ಯಾಸ್ ಸಮಸ್ಯೆ ನಿವಾರಣೆಯಗುವುದು.

ಸೋಂಪು:

ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಸೋಂಪು ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಊಟದ ಮುಂಚೆ ಮತ್ತು ನಂತರ ಸೋಂಪು ತಿನ್ನುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುವುದಿಲ್ಲ.

ಆಪಲ್ ಸೈಡರ್ ವಿನಿಗರ್:

ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು.

ಅಡುಗೆ ಸೋಡಾ:

1/4 ಚಮಚ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.

ಪಲಾವ್ ಎಲೆ: 

ಪಲಾವ್ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಆ ನೀರನ್ನು ಕುಡಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುವುದು.