ಮಳೆಗಾಲದಲ್ಲಿ ಜಿಡ್ಡು ಮುಕ್ತ ತ್ವಚೆ ಪಡೆಯಬೇಕು ಎಂದರೆ ಈ ಟಿಪ್ಸ್ ನ ಫಾಲೋ ಮಾಡಿ…

0
1120
home-remedies-for-oily-skin

ಎಣ್ಣೆ ತ್ವಜೆಗೆ

ಮಳೆಗಾಲದಲ್ಲಿ ಚರ್ಮದಲ್ಲಿ ಎಣ್ಣೆ ಅಂಶ ಹೆಚ್ಚಾಗಿ, ಬೆವರು ಹಾಗೂ ಧೂಳಿನೊಂದಿಗೆ ಬೆರತು ಮೊಡವೆ ಉಂಟು ಮಾಡುತ್ತದೆ. ಜೊತೆಗೆ ಬ್ಲಾಕ್‍ಹೆಡ್ಸ್, ವೈಟ್‍ಹೆಡ್ಸ್ ಕೂಡ ಹೆಚ್ಚುತ್ತದೆ.

source: uf.cari.com.my

* ಎಣ್ಣೆ ಅಂಶವನ್ನು ತಡೆಗಟ್ಟುವಂತಹ ಕ್ಲೆನ್ಸರ್ ಅಂಶವಿರುವ ಫೇಸ್‍ವಾಶ್ ಬಳಸಿ.
* ಅಲ್ಕೋಹಾಲ್ ಇಲ್ಲದ ಸ್ಕಿನ್ ಟೋನರ್ ಬಳಸಿ ಇದರಿಂದ ಚರ್ಮದ ಪಿಹೆಚ್ ಸಮತೋಲನವಾಗುತ್ತದೆ.
* ಮನೆಯಿಂದ ಹೊರಗಡೆ ಹೋಗುವ ಮುನ್ನ ಜೆಲ್ ಬೆಸ್ಡ್ ಸನ್‍ಸ್ಕ್ರೀನ್ ಲೋಷನ್ ಅನ್ನುಎಸ್‍ಪಿಎಫ್ 30 ಸನ್‍ಸ್ಕ್ರೀನ್ ಲೋಷನ್ ಜೊತೆಗೆ ಬೆರೆಸಿ ಚರ್ಮಕ್ಕೆ ಹಚ್ಚಿ. ಇದರಿಂದ ಮುಖದಲ್ಲಿ ಎಣ್ಣೆ ಅಂಶ ಕಾಣುವುದಿಲ್ಲ.

ಫೇಸ್ ಪ್ಯಾಕ್

ಎರಡು ಚಮಚ ಪಪ್ಪಾಯ ಹಣ್ಣು, ಒಂದು ಚಮಚ ಮೊಸರು ಹಾಗೂ ಸ್ವಲ್ಪ ಅಲೋವಿರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ಹನಿ ಲ್ಯಾವೆಂಡರ್ ಎಣ್ಣೆ ಹಾಕಿ ಮುಖಕ್ಕೆ ಪ್ಯಾಕ್ ಹಾಕಿಕೊಂಡು 20 ನಿಮಿಷ ಬಿಟ್ಟು ತಣ್ಣಿರಿನಲ್ಲಿ ತೊಳೆದುಕೊಳ್ಳಿ. ಪಪ್ಪಾಯ ಚರ್ಮದ ಮೇಲಿನ ಟ್ಯಾನ್ ತೆಗೆದರೆ ಮೊಸರು ಚರ್ಮವನ್ನು ಸ್ವಚ್ಛಗೊಳಿಸುತ್ತದೆ ಜೊತೆಗೆ ಅಲೋವಿರಾ ಮತ್ತು ಲ್ಯಾವೆಂಡರ್ ಆಯಿಲ್ ಚರ್ಮವನ್ನು ಮೃದುವಾಗಿಸುತ್ತದೆ.

source: stylesatlife.com

ಎಣ್ಣೆ ಹಾಗೂ ಶುಷ್ಕ ಮಿಶ್ರ ತ್ವಜೆ

ಇಂತಹ ತ್ವಜೆ ಇರುವವರಲ್ಲಿ ಗಲ್ಲ ಹಾಗೂ ಹಣೆ ಭಾಗ ಶುಷ್ಕವಾಗಿದ್ದರೆ ಉಳಿದ ಭಾಗಗಳು ಎಣ್ಣೆಯುಕ್ತವಾಗಿರುತ್ತವೆ. ಮಳೆಗಾಲದಲ್ಲಿ ಆದ್ರ್ರತೆಯಿಂದಾಗಿ ಮೂಗಿನ ಬಳಿ ಹೆಚ್ಚು ಎಣ್ಣೆ ಅಂಶ ಕಂಡುಬರುತ್ತದೆ.

* ಈ ರೀತಿಯ ತ್ವಜೆ ಉಳ್ಳವರು ಆ್ಯಂಟಿ ಬ್ಯಾಕ್ಟೀರಿಯಲ್ ಕ್ಲೆನ್ಸರ್ ಬಳಸುವುದು ಉತ್ತಮ.
* ಎರಡು ಚಮಚ ನಿಂಬೆ ರಸವನ್ನು ನೀರಿನಲ್ಲಿ ಬೆರೆಸಿ ಮುಖ ತೊಳೆದುಕೊಳ್ಳಿ ಇದು ಒಳ್ಳೆಯ ಟೊನಿಂಗ್ ಕೆಲಸ ಮಾಡುತ್ತದೆ. ನಿಂಬೆ ರಸ ತ್ವಜೆಗೆ ಉಲ್ಲಾಸ ನೀಡುವುದರ ಜೊತೆಗೆ ಅತ್ಯುತ್ತಮ ಕ್ಲೆನ್ಸರ್ ಆಗಿದೆ.
* ಮನೆಯಿಂದ ಹೊರಗಡೆ ಹೋಗಬೇಕಾದರೆ ಹೈಡ್ರೇಟಿಂಗ್ ಸನ್‍ಸ್ಕ್ರೀನ್ ಜೊತೆಗೆ ಎಸ್‍ಪಿಎಫ್ 30 ಬೆರೆಸಿ ಹಚ್ಚಿಕೊಳ್ಳಿ. ಬೇವರಿನಿಂದ ತ್ವಜೆ ಶುಷ್ಕವಾಗುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
* ಮಳೆಗಾಲದಲ್ಲಿ ತಲೆಹೊಟ್ಟಿನ ಸಮಸ್ಯೆ ಕೂಡ ಹೆಚ್ಚಾಗುವುದರಿಂದ ಮುಖದ ಮೇಲೆ ಮೊಡವೆಯಾಗುತ್ತವೆ ಆದ್ದರಿಂದ ಕೂದಲ ಬಗ್ಗೆ ಕಾಳಜಿವಹಿಸಬೇಕು.
* ಹೊರಗಡೆ ಇದ್ದಾಗ ವೆಟ್ ಟಿಶ್ಯೂಗಳನ್ನು ಬಳಸಿ ಹಾಗೂ ರಾತ್ರಿ ಮಲಗುವ ಮುನ್ನ ಐಸ್‍ಕ್ಯೂಬ್‍ನಿಂದ ಮುಖವನ್ನು ಮಸಾಜ್ ಮಾಡಿಕೊಳ್ಳಿ.