ನಿಮ್ಮ ಚರ್ಮದಲ್ಲಿ Pigmentation ಉಂಟಾಗಿ ಸಮಸ್ಯೆ ಎದುರಿಸುತ್ತಿದ್ದರೆ, ದುಬಾರಿ ಕ್ರೀಮ್-ಗಳನ್ನು ಬಿಟ್ಟು ಈ ಸುಲಭ ಮನೆಮದ್ದನ್ನು ಪಾಲಿಸಿ, ಕೆಲವೇ ದಿನದಲ್ಲಿ ಪರಿಹಾರ ಸಿಗುತ್ತೆ!!

0
469

ಸಾಮಾನ್ಯವಾಗಿ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಬಂಗು ಕೂಡ ಒಂದು. ಅವುಗಳಲ್ಲಿ ಎರಡು ವಿಧಗಳು ಒಂದು ಕಪ್ಪು ಬಂಗಿಗಳು ಇನ್ನೊಂದು ಬಿಳಿ ಬಂಗಿಗಳು. ಅತಿಯಾದ ಧೂಳು, ಕೆಟ್ಟ ಹವಾಮಾನ, ಬಿಸಿಲಿನ ಹೆಚ್ಚಳದಿಂದ ಮುಖದಲ್ಲಿ ಕೆನ್ನೆ, ಮೂಗು ಮತ್ತು ಕಣ್ಣಿನ ಕೆಳಗೆ ಕಪ್ಪು ಅಥವಾ ಬಿಳಿ ಕಲೆಗಳು ಕಾಣುತ್ತವೆ. ಸಾಮಾನ್ಯವಾಗಿ ಈ ಕಲೆ ಬಂದಾಗ ಚರ್ಮದ ಬಣ್ಣದಲ್ಲಿ ಬದಲಾವಣೆ ಯಾಗುತ್ತದೆ. ಇಂತಹ ಕಲೆಗಳಿಗೆ ಮನೆಮದ್ದುಗಳಿವೆ ಇವುಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡು ಉಪಯೋಗಿಸಿ ನೋಡಿ. ಕೇವಲ ಒಂದೇ ಒಂದು ತಿಂಗಳು ಮಾಡಿದರೆ ಮುಖದ ಮೇಲಿರುವ ಬಂಗು ಗುಣವಾಗುತ್ತದೆ.

Also read: ಚರ್ಮದ ಮಚ್ಛೆಗಳು ಸರ್ವೇಸಾಮಾನ್ಯ, ಆದರೆ ಕೆಲವು ಮಚ್ಛೆಗಳ ಹಿಂದೆ ಕ್ಯಾನ್ಸರ್ ಕಾರಣವಿರಬಹುದು, ಈ ರೀತಿಯ ಮಚ್ಛೆಗಳು ಕಂಡಲ್ಲಿ ಕೂಡಲೇ ಡಾಕ್ಟರ್-ರನ್ನು ಕಾಣಿ!

ಮೊದಲೆಯದಾಗಿ ಬಿಳು ಬಂಗುಗಳಿಗೆ ಚಿಕತ್ಸೆ ತಿಳಿಯೋಣ:

ಲೋಳಸರದ ತಿರುಳು, ಅರಿಶಿನದ ಪುಡಿ, ಮತ್ತು ಹಾಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಕಲಸಿ ಹಚ್ಚಬೇಕು

ಈರುಳ್ಳಿ ರಸ, ವೀಳ್ಯದೆಲೆ ರಸ ಹಾಗೂ ಅರಿಶಿನ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಕಲಸಿ ಹಚ್ಚಬೇಕು

ಆಲೂಗಡ್ಡೆಯನ್ನು ಅರೆದು ಒಂದು ಚಮಚದಷ್ಟು ರಸವನ್ನು ತೆಗೆದು ಹಚ್ಚಬೇಕು.

ಕಿತ್ತಳೆ ಹಣ್ಣಿನ ರಸ ಒಂದೂವರೆ ಚಮಚ, ಒಣ ಬಟಾಣಿ ಹಿಟ್ಟು ಒಂದೂವರೆ ಚಮಚ ಮತ್ತು ಮುಲ್ತಾನಿ ಮಿಟ್ಟಿ ಅರ್ಧ ಚಮಚ ಈ ಮೂರು ರಸವನ್ನು ಬೆರೆಸಿ ಹಚ್ಚಬೇಕು.

ಸ್ವಲ್ಪ ಬಟಾಣಿ ಹಿಟ್ಟನ್ನು ಅಷ್ಟೇ ಪ್ರಮಾಣದಲ್ಲಿ ಹಾಲಿನ ಕೆನೆಯೊಂದಿಗೆ ಬೆರೆಸಿ ಹಚ್ಚಬೇಕು.

ಹೊಂಗೆ ಬಿಜ ಮತ್ತು ಮರದರಿಶಿನದ ಕೊಂಬನ್ನು ಹಸಿ ಹಾಲಿನ ಜೊತೆ ತೇಯ್ದು ಹಚ್ಚಬೇಕು.

ಸೂಚನೆ: ಮೇಲಿನ ಲೇಪನಗಳನ್ನು ಬಂಗಿನ ಮೇಲೆ ಮಾತ್ರ ಹಚ್ಚಬೇಕು.
ಮೇಲಿನ ಲೇಪನಗಳನ್ನು ದಿನಕ್ಕೆ 2 ಬಾರಿ 4 ರಿಂದ 6 ದಿನಗಳು ಹಚ್ಚಬೇಕು.

Also read: ಎಷ್ಟೇ ಕೊರೆಯಿವ ಚಳಿ ಇದ್ದರು ಈ ಮನೆಮದ್ದು ಪಾಲಿಸಿ; ಚರ್ಮದ ಬಿರುಕು ಯಾತನೆಯಿಂದ ನಿಮ್ಮ ಚರ್ಮವನ್ನು ರಕ್ಷಿಸಿ..

ಈಗ ಕಪ್ಪು ಬಂಗುಗಳಿಗೆ ಚಿಕತ್ಸೆ ತಿಳಿಯೋಣ:

ಒಂದೆರಡು ಬಾದಾಮಿ ಬೀಜವನ್ನು ಹಸಿ ಹಾಲಿನಲ್ಲಿ ತೇಯ್ದು ಬಂಗಿನ ಮೇಲೆ ದಿನಕ್ಕೆ 2 ಬಾರಿ 3 ತಿಂಗಳು ಹಚ್ಚಬೇಕು.

ಲೋಳಸರದ ತಿರುಳನ್ನು ಅರಿಶಿನದ ಪುಡಿಯೊಂದಿಗೆ ಕಲಸಿ ಹಚ್ಚಬೇಕು.

ಕ್ಯಾರೆಟ್ ತುರಿದು ಗೋಧಿ ಹಿಟ್ಟಿನಲ್ಲಿ ಕಲಸಿ ಮುಖಕ್ಕೆ ಹಚ್ಚಿ ಮೃದುವಾಗಿ ತಿಕ್ಕಬೇಕು. ದಿನಕ್ಕೆ 2 ಬಾರಿ 2 ತಿಂಗಳು ಹಚ್ಚಬೇಕು.

ಹೊಂಗೆ ಬೀಜವನ್ನು ಹಾಲಿನಲ್ಲಿ ತೇದು ದಿನಕ್ಕೆ 1 ಬಾರಿ 2 ತಿಂಗಳು ಹಚ್ಚಬೇಕು.

ಸೌತೆಕಾಯಿಯನ್ನು ರುಬ್ಬಿ, ಒಣ ಬಟಾಣಿಯ ಪುಡಿಯೊಂದಿಗೆ ಕಲಸಿ ದಿನಕ್ಕೆ ಒಂದು ಬಾರಿಯಂತೆ 2 ವಾರಗಳ ತನಕ ಲೇಪಿಸಬೇಕು.
ಹಾಲಿನಲ್ಲಿ ಶಂಖವನ್ನು ತೇಯ್ದು ದಿನಕ್ಕೆ ಒಂದು ಬಾರಿ 15 ದಿವಸ ಹಚ್ಚಬೇಕು.

Also read: ಕತ್ತಿನ ಸುತ್ತ ಚರ್ಮವು ಕಪ್ಪಾಗಿ ನಿಮ್ಮ ಸೌಂದರ್ಯವನ್ನು ಕುಂಠಿತಗೊಳಿಸುತ್ತಿದಿಯೇ? ವ್ಯಾಯಾಮದ ಜೊತೆಗೆ ಈ ಮನೆಮದ್ದುಗಳನ್ನ ಪಾಲಿಸಿ ಕಲೆಯಿಂದ ಮುಕ್ತಿ ಹೊಂದಿ..

ಸೂಚನೆ: ಮೇಲಿನ ಲೇಪನಗಳನ್ನು ಬಂಗಿನ ಮೇಲೆ ಮಾತ್ರ ಹಚ್ಚಬೇಕು.