ಬೆನ್ನಿನ ಮೇಲೆ ಮೊಡವೆ, ತಲೆ ಕೆಡಿಸ್ಕೊಬೇಡಿ.. !! ಈ ಸುಲಭ ಉಪಾಯಗಳನ್ನ ಪಾಲಿಸಿ..

0
4752

Kannada News | kannada Useful Tips

ಸೌಂದರ್ಯ ಎಂದರೆ ಕೇವಲ ಮುಖದಲ್ಲಿ ಮಾತ್ರ ಕಾಣಿಸುವುದು ಅಲ್ಲ, ಇಡೀ ದೇಹ ಸೌಂದರ್ಯ ಕೂಡ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಈ ಮೊಡವೆಗಳು ನಿಮ್ಮ ಸುಂದರವಾದ ದೇಹವನ್ನು ಹಾಳು ಮಾಡುತ್ತದೆ. ಇದು ಮುಖದಲ್ಲಿ ಮಾತ್ರವಲ್ಲ, ಬದಲಾಗಿ ಪೂರ್ತಿ ದೇಹದಲ್ಲಿ ಎಲ್ಲಿ ಬೇಕಾದರೂ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ನಿಮ್ಮ ಬೆನ್ನಿನ ಮೇಲೆ ಮೊಡವೆ ಕಾಣಿಸಿಕೊಂಡಿದ್ದರೆ ಆಗುವ ಯಾತನೇ ಹೇಳತೀರದು.

ಅಂತಹ ಸಮಸ್ಯೆ ಇದ್ದವರು ಈ ರೀತಿ ಸರಳ ಸಲಹೆಯನ್ನು ಪಾಲಿಸಿದರೆ ಅನುಕೂಲವಾಗಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ರೋಮಕೂಪಗಳು ತೆರೆದುಕೊಳ್ಳುತ್ತವೆ. ಆದರೆ ಸ್ಟೀಮ್ ಬಾತ್ ಮಾಡುವ ಮೊದಲು ಎಣ್ಣೆ ಹಚ್ಚಲು ಮರೆಯಬೇಡಿ.

ಕೇವಲ 10 -15 ನಿಮಿಷ ಮಾತ್ರ ಸ್ಟೀಮ್ ಚೇಂಬರ್‍ನಲ್ಲಿ ಕುಳಿತುಕೊಳ್ಳಿ. ಇದರಿಂದ ಬೆನ್ನಿನ ಮೇಲೆ ಶೇಖರವಾಗಿರುವ ಎಲ್ಲಾ ಕಲ್ಮಶಗಳು ಹೊರಬರುತ್ತವೆ. ಬೆನ್ನಿನ ಮೇಲೆ ಮೊಡವೆ ಇದ್ದರೆ ಅದಕ್ಕಾಗಿ ಬಾಡಿವಾಶ್ ಬಳಸಿ. ಇದರಿಂದ ಮೊಡವೆ ನಿವಾರಣೆಯಾಗುತ್ತದೆ.

ಮೊಡವೆ ಸಮಸ್ಯೆಗೆ ಅಲೋವೆರಾ ಉತ್ತಮ ಪರಿಹಾರ ನೀಡುತ್ತದೆ. ಸ್ನಾನದ ಬಳಿಕ ಅಲೋವೆರಾ ಜೆಲ್‍ನ್ನು ಬೆನ್ನಿಗೆ ಹಚ್ಚಿ , ಇದರಿಂದ ಬೆನ್ನಿನ ಮೇಲೆ ಇರುವ ಮೊಡವೆ, ಕಲೆ ಮಾಯವಾಗುತ್ತವೆ.

ಅರಿಶಿನದಲ್ಲಿ ರೋಗನಿರೋಧಕ ಗುಣ ಇದೆ. ಬೆನ್ನಿನ ಮೇಲೆ ಮೂಡಿರುವ ಮೊಡವೆ ನಿವಾರಣೆ ಮಾಡಲು ಅರಿಶಿನವನ್ನು ನೀರಿನಲ್ಲಿ ಮಿಶ್ರಣ ಮಾಡಿ ಬೆನ್ನಿಗೆ ಹಚ್ಚಿ.
ಬೆಳಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದನ್ನು ಒಂದು ವಾರಗಳ ಕಾಲ ಮುಂದುವರೆಸಿಕೊಂಡು ಹೋಗಿ ನಂತರ ಪರಿಣಾಮ ನೀವೇ ನೋಡಿ.

ಸೊಂಟದ ಮೇಲಿರುವ ಮೊಡವೆಯ ಕಲೆ ನಿವಾರಣೆ ಮಾಡಲು ಬೇಕಿಂಗ್ ಸೋಡಾ, ರೋಸ್ ವಾಟರ್ ಮತ್ತು ಜೇನುತುಪ್ಪ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ನಂತರ ಇದನ್ನು ಮೊಡವೆ ಕಲೆಯ ಮೇಲೆ ಹಚ್ಚಿ. ಇದನ್ನು 10 ರಿಂದ 12 ದಿನಗಳ ಕಾಲ ಮುಂದುವರೆಸಿಕೊಂಡು ಬಂದರೆ ಮೊಡವೆ ಕಲೆ ನಿವಾರಣೆಯಾಗುತ್ತದೆ.

pimples-on-your-back

Also Read: ಬಿ.ಪಿ. ಸಮಸ್ಯೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ, ಏರುಪೇರಾದರೆ ಸಾವೇ ಸಂಭವಿಸಬಹುದು; ಇದನ್ನು ಓದಿ ನಿಮ್ಮ ಬಿ.ಪಿ. ಎಷ್ಟು ಇರಬೇಕು ಅಂತ ತಿಳ್ಕೊಳ್ಳಿ..

Watch: