ಅಧಿಕ ರಕ್ತದೊತ್ತಡ ಹೃದಯಾಘಾತಕ್ಕೆ ಕಾರಣವಾಗಬಹುದು, ಈ ಮನೆಮದ್ದುಗಳನ್ನು ಪಾಲಿಸಿ ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ!!

0
1775

ಈ ಬ್ಯುಸಿ ಜೀವದಲ್ಲಿ ಎದುರಾಗುವ ಒತ್ತಡಗಳು ಮತ್ತು ಕೆಲವೊಂದು ಆಹಾರ ಕ್ರಮಗಳು ಅನೇಕ ಆರೋಗ್ಯದ ತೊಂದರೆಗಳನ್ನು ತರುತ್ತಿವೆ. ಅದರಲ್ಲಿ ಬಿಪಿ, ಶುಗರ್ ಕೂಡ ಒಂದಾಗಿದ್ದು ಇವೆಲ್ಲವೂ ಅಧಿಕ ರಕ್ತದೊತ್ತಡ ಅಥವಾ ಅಧಿಕ ಬಿಪಿಯು ಅತಿಯಾದ ಉದ್ವೇಗ, ಒತ್ತಡದಿಂದಾಗಿ ಮುಜುಗರ, ಅಧಿಕ ರಕ್ತದೊತ್ತಡ ಉಂಟಾಗಬಹುದು ಮತ್ತು ಕೆಲವೊಂದು ಸಂದರ್ಭಗಳಲ್ಲಿ ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಅಂತು ಹೈಪರ್‌ಟೆನ್ಷನ್‌ ಅಥವಾ ರಕ್ತದೊತ್ತಡ ಸಾಮಾನ್ಯ ಕಾಯಿಲೆಯಾಗಿದೆ. ಇದರಿಂದ ಹೃದಯದ ಸಮಸ್ಯೆಗಳು ಉಂಟಾಗುತ್ತವೆ. ಹೃದಯದ ರಕ್ತನಾಳಗಳಲ್ಲಿ ರಕ್ತ ಪಂಪ್‌ ಆಗುವ ವೇಳೆ ಒತ್ತಡ ಹಾಗೂ ರಕ್ತ ಹರಿಯುವ ವೇಳೆ ಉಂಟು ಮಾಡುವ ಪ್ರತಿರೋಧದವನ್ನು ಅಳತೆ ಮಾಡಲಾಗುತ್ತದೆ. ಇಷ್ಟೊಂದು ಅಪಾಯ ತರುವ ರಕ್ತದೊತ್ತಡಕ್ಕೆ ಈ ಮನೆ ಮನೆ ಮದ್ದು ಇಲ್ಲಿವೆ ನೋಡಿ.

1. ಒಣದ್ರಾಕ್ಷಿ

Also read: ಹೈ ಬಿಪಿಯಿಂದ ಬಳಲುತ್ತಿದ್ದೀರ? ಕೇವಲ 30 ನಿಮಿಷದಲ್ಲಿ ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಈ ವಿಧಾನ…!

ಒಂದು ಲೋಟ ಹಸುವಿನ ಹಾಲಿನಲ್ಲಿ ಒಂದು ಬೆಳ್ಳುಳ್ಳಿ ಗಡ್ಡೆಯನ್ನು ಒಂದು ತೊಲೆ ಒಣದ್ರಾಕ್ಷಿಯನ್ನು ಹಾಕಿ ಇಡಬೇಕು. ರಾತ್ರಿ ಮಲಗುವಾಗ ಬೆಳ್ಳುಳ್ಳಿಯನ್ನು ತೆಗೆದು ದ್ರಾಕ್ಷಿಯನ್ನು ತಿಂದು ಹಾಲನ್ನು ಕುಡಿದು ಮಲಗಬೇಕು. ಈ ರೀತಿ ಎರಡು ತಿಂಗಳು ಮಾಡಿದರೆ ರಕ್ತದೊತ್ತಡ ಹತೋಟಿಗೆ ಬರುತ್ತದೆ.

2. ಬೆಳ್ಳುಳ್ಳಿ ಸೇವನೆ

ದೇಹ ಹಾಗೂ ರಕ್ತನಾಳಗಳಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕರಗಿಸಲು ಬೆಳ್ಳುಳ್ಳಿ ಬಳಸುವುದು ಅತ್ಯಂತ ಸೂಕ್ತ. ನೈಸರ್ಗಿಕವಾಗಿ ಇವುಗಳು ರಕ್ತದ ಒತ್ತಡವನ್ನೂ ತಗ್ಗಿಸುತ್ತದೆ.

3. ಈರುಳ್ಳಿ ಮತ್ತು ಜೇನು ಬಳಸಿ

ಒಂದು ಚಮಚದಷ್ಟು ಈರುಳ್ಳಿ ರಸ ಹಾಗೂ ಜೇನನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ತೆಗೆದುಕೊಂಡರೆ, ರಕ್ತದ ಒತ್ತಡ ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗುತ್ತದೆ. ಪ್ರತಿದಿನ ಇದನ್ನು ಸೇವಿಸಬಹುದು

4. ಕರಿಬೇವು

ದಕ್ಷಿಣ ಭಾರತದ ಅನೇಕ ಕಡೆ ಕರಿಬೇವು ಎಲೆಯನ್ನು ಔಷಧಿಗಾಗಿಯೇ ಬಳಸಲಾಗುತ್ತದೆ. ರಕ್ತದ ಒತ್ತಡ ಮಾತ್ರ ಅಲ್ಲ, ಅನೇಕ ಬೇರೆ ಆರೋಗ್ಯ ಸಮಸ್ಯೆಗೆ ಕರಿಬೇವು ರಾಮಬಾಣ ಎಂದೇ ನಂಬಿಕೆ ಇದೆ. ಒಂದು ಲೋಟ ನೀರಿಗೆ ನಾಲ್ಕೈದು ಕರಿಬೇವಿನ ಎಲೆ ಹಾಕಿ, ದಿನ ನಿತ್ಯ ಕುಡಿಯುವುದು ಬ್ಲಡ್‌ ಪ್ರಶರ್‌ ನಿಯಂತ್ರಣಕ್ಕೆ ಉತ್ತಮ!

5. ಕ್ಯಾರೆಟ್‌-ಬೀಟ್‌ರೂಟ್‌ ಜ್ಯೂಸ್‌ ಕುಡಿಯಿರಿ

Also read: ಅಧಿಕ ರಕ್ತದೊತ್ತಡಕ್ಕೆ ಬೀಟ್ರೂಟ್ ರಸ ಸೇವಿಸಿ

ಕ್ಯಾರೆಟ್‌ನನ್ನು ಚೆನ್ನಾಗಿ ತುರಿದು, ರಸ ತೆಗೆಯಿರಿ. ಈ ಕ್ಯಾರೆಟ್‌ ರಸವನ್ನು ದಿನ ನಿತ್ಯ ಕುಡಿಯಬಹುದು. ಅಲ್ಲದೆ ಬೀಟ್‌ರೂಟ್ ಜ್ಯೂಸ್‌ ಕುಡಿಯುವುದು ರಕ್ತದ ಒತ್ತಡ ಕಡಿಮೆ ಮಾಡುತ್ತದೆ. ಅಂತೆಯೇ ದಿನ ನಿತ್ಯದ ಊಟದಲ್ಲಿ ಉಪ್ಪಿನಂಶವನ್ನು ಕಡಿಮೆ ಬಳಸುವುದು ಹೆಚ್ಚು ಸೂಕ್ತ.

6.ಫಿಶ್‌ ಮತ್ತು ಚಿಕನ್‌

ಹೇಳಿದರೆ ನೀವು ನಂಬುವುದು ಕಷ್ಟಕರ. ಆದರೆ ಇದು ಸತ್ಯ. ಚಿಕನ್‌ ಹಾಗೂ ಮೀನು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಆದರೆ ಇವನ್ನು ತರಕಾರಿ ಜತೆಗೆ ತೆಗೆದುಕೊಳ್ಳಬೇಕು ಅಷ್ಟೇ!

7. ಕೆಟ್ಟ ಅಭ್ಯಾಸಗಳನ್ನು ಬಿಡುವುದು

ಸಿಗರೇಟ್, ತಂಬಾಕು ಮತ್ತು ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಆಲ್ಕೋಹಾಲ್ ನಲ್ಲಿರುವ ಕೆಲವೊಂದು ಅಂಶಗಳು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಆದರೆ ನಿಯಮಿತವಾಗಿ ಅಧಿಕ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅತಿಯಾದ ಆಲ್ಕೋಹಾಲ್ ಸೇವನೆಯಿಂದ ರಕ್ತದೊತ್ತಡವು 5-10 ಎಂಎಂನಷ್ಟು ಹೆಚ್ಚಾಗುತ್ತದೆ. ಅದೇ ರೀತಿ ತಂಬಾಕು ಮತ್ತು ಸಿಗರೇಟ್ ನಿಂದ ಕೂಡ. ರಕ್ತದೊತ್ತಡಕ್ಕೆ ದೇಹದಲ್ಲಿನ ಕೆಫಿನ್ ಮಟ್ಟವು ಕಾರಣವಾಗಬಹುದು.

8. ನಿಯಮಿತ ವ್ಯಾಯಾಮ ಮಾಡಿ

ವ್ಯಾಯಾಮವು ನಿಮ್ಮ ದೇಹದಲ್ಲಿನ ಒತ್ತಡ ಮತ್ತು ಉದ್ವೇಗ ಕಡಿಮೆ ಮಾಡುತ್ತದೆ. ವ್ಯಾಯಾಮವು ನಿಮ್ಮ ದೇಹದಲ್ಲಿ ಒಳ್ಳೆಯ ಭಾವನೆ ಮೂಡಿಸುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಇದು ಉದ್ವೇಗ ಕಡಿಮೆ ಮಾಡಿ ಅಧಿಕ ಒತ್ತಡ ತಗ್ಗಿಸುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದ ತೂಕವು ನಿಯಂತ್ರಣದಲ್ಲಿರುತ್ತದೆ.

9. ಬಾಳೆ ಹಣ್ಣು

Also read: ದಾಳಿಂಬೆಯಲ್ಲಿರುವ 7 ಅದ್ಭುತ ಆರೋಗ್ಯಕರ ಗುಣಗಳನ್ನು ತಿಳಿದರೆ ನಿತ್ಯವು ಸೇವಿಸುತ್ತೀರ…!

ಬಾಳೆ ಹಣ್ಣು ಹಾಗೂ ದ್ರಾಕ್ಷಿ ಹಣ್ಣು ಸೇವನೆಯಿಂದ ಹೃದಯ ರೋಗ ನಿಯಂತ್ರಿಸಲು ಸಹಕಾರಿ ಆಗುವ ಮ್ಯಾಗ್ನೆಸಿಯಂ ಲವಣಾಂಶ ಇದರಲ್ಲಿ ಹೇರಳವಾಗಿ ಇರುವುದರಿಂದ ಹೃದಯ ರೋಗ ಬಾರದ ಹಾಗೇ ತಡೆಗಟ್ಟುವ ಶಕ್ತಿ ಬಾಳೆಹಣ್ಣು ಹಾಗೂ ದ್ರಾಕ್ಷಿಗಿದೆ.

10. ಆರೋಗ್ಯಕರ ಆಹಾರ

ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರ ಮತ್ತು ಅಧಿಕ ಕೊಬ್ಬು ಇರುವ ಆಹಾರವು ವ್ಯಕ್ತಿಯೊಬ್ಬನಲ್ಲಿ ಬಿಪಿ ಉಂಟುಮಾಡಬಹುದು. ರಕ್ತದೊತ್ತಡ ಹೆಚ್ಚಿಸುವ ಆಹಾರಗಳನ್ನು ಕಡೆಗಣಿಸಿ. ಕೆಲವೊಂದು ಹಣ್ಣುಗಳು, ಧಾನ್ಯ ಮತ್ತು ತರಕಾರಿಗಳು ಒತ್ತಡವನ್ನು 2-5 ಎಂಎಂನಷ್ಟು ಕಡಿಮೆ ಮಾಡುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಸಲಾಡ್, ಧಾನ್ಯದ ಬ್ರೆಡ್, ಹಣ್ಣುಗಳು, ಸೂಪ್ ಇತ್ಯಾದಿಗಳಿರಲಿ ಮತ್ತು ಇದನ್ನು ನಿಯಮಿತವಾಗಿ ಸೇವಿಸಿ. ನೈಸರ್ಗಿಕವಾಗಿ ತಗ್ಗಿಸುತ್ತದೆ.