ತಲೆ ಹೊಟ್ಟಿಗೆ ದುಬಾರಿ ಔಷಧಿಗಳನ್ನು ಬಿಟ್ಟಾಕಿ ಈ ಸುಲಭ ಮನೆಮದ್ದುಗಳನ್ನು ಉಪಯೋಗಿಸಿ..

0
1245

ಚಳಿಗಾಲವು ಚಮಕ್ಕೆ ಮಾರಕವಾಗಿದೆ ಇದರಿಂದ ಕೈ ಕಾಲು- ಮೈ ಚರ್ಮ ಬಿರುಕು ಬಿಟ್ಟು ಹಾವಿನ ಪರಿಯಂತೆ ಆಗುತ್ತದೆ. ಇದು ಬರಿ ಕೈ ಕಾಲು ಚರ್ಮದಲ್ಲಿ ಆಗುವ ತೊಂದರೆಯಲ್ಲ ತಲೆಯಲ್ಲಿವು ವುಂಟಾಗುವ ಚರ್ಮದ ಬಿರಿಕಿನಿಂದ ಹೊಟ್ಟಿನ ಸಮಸ್ಯೆ ಕಂಡು ಬರುತ್ತದೆ. ಇದಕ್ಕೆ ಕೂಡಲೇ ಚಿಕ್ಸಿತೆ ಮಾಡಲಿಲ್ಲವಾದಲ್ಲಿ ಕೂದಲು ಉದರಲು ಶುರುವಾಗುತ್ತೆ. ಹಾಗೆಯೆ ಮುಖ/ಹಣೆಯ ಮೇಲೆ ಮಡವೆಗಳು ಕಂಡು ಬಂದು ಅತಿಯಾದ ನೋವು ಕಂಡು ಬರುತ್ತೆ ಇದರಿಂದ ಮುಖ ಬತ್ತಿ ಹೋಗುತ್ತೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತೇವೆ. ಇದಕೆಲ್ಲ ಆಸ್ಪತ್ರೆ ಔಷಧಿ ಅಂತ ಹಣ ಕರ್ಚು ಮಾಡುವ ತೊಂದರೆಗಳೇನಿಲ್ಲ. ನೀವೇ ನಾವು ಹೇಳುವ ಮನೆಮದ್ದುಗಳನ್ನು ಮಾಡಿ ನೋಡಿ ಎಲ್ಲ ಸಮಸ್ಯೆಗೂ ಏಷ್ಟೊಂದು ಪರಿಹಾರ ವಿದೆ.

ನಿಂಬೆಹಣ್ಣಿನ ರಸ ಕೊಬ್ಬರಿ ಎಣ್ಣೆ ಮಿಶ್ರಣ:

ನಿಂಬೆ ಹಣ್ಣು ತಲೆಯ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಕೊಬ್ಬರಿ ಎಣ್ಣೆಯಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿಕೊಂಡು, ಸಮ ಪ್ರಮಾಣದಲ್ಲಿ ನಿಂಬೆರಸ ಬೆರೆಸಿ. ಈ ಮಿಶ್ರಣದಿಂದ ತಲೆಗೆ ಮಸಾಜ್‌ ಮಾಡಿಕೊಳ್ಳಿ. ಇದರಿಂದ ನಿರ್ಜೀವ ಚರ್ಮದ ಕಣವನ್ನು ನಿರ್ಮೂಲನೆ ಮಾಡುತ್ತದೆ. ಈ ಲೇಪನ ಮಸಾಜ್‌ ಮಾಡಿದ ನಂತರ ಅರ್ಧಗಂಟೆಯ ಬಿಟ್ಟು ಶ್ಯಾಂಪೂ ಹಾಕಿ ತಲೆ ಸ್ನಾನ ಮಾಡಿ ಹೊಟ್ಟು ನಿವಾರಣೆಯಾಗುತ್ತೆ.

ಮೆಹೆಂದಿ: (ಮದರಂಗಿ) ಮೊಟ್ಟೆಯ ಬಿಳಿ:

ಮದರಂಗಿಗೆ ಮೊಟ್ಟೆಯ ಬಿಳಿಭಾಗ, ಲಿಂಬೆಹಣ್ಣಿನ ರಸ, ತಲೆಗೂದಲಿಗೆ ಕಂದು ಬಣ್ಣ ಬೇಕಿದ್ದರೆ ಬೀಟ್‌ರೂಟ್‌ ರಸ, ಟೀ ಅಥವಾ ಕಾಫಿ ಡಿಕಾಕ್ಷನ್‌ ಬೆರೆಸಿ, ಮೆಹೆಂದಿ ಕಲಿಸಿಡಿ. ಇದನ್ನು ತಲೆಗೆ ಹಚ್ಚಿಕೊಂಡು ಒಂದು ಒಂದೂವರೆ ಗಂಟೆಯ ನಂತರ ತಲೆ ಸ್ನಾನ ಮಾಡಿ. ಕೂದಲಿಗೆ ಪೋಷಣೆ ಸಿಗುತ್ತದೆ.
ಮೆಂತ್ಯ ಪೇಸ್ಟ್‌: ರಾತ್ರಿ ಮಲಗುವ ಮುಂಚೆ ಮೆಂತ್ಯಕಾಳನ್ನು ನೆನೆಸಿಡಿ. ಬೆಳಗ್ಗೆ ನೀರನ್ನೆಲ್ಲ ತೆಗೆದು, ಮೆಂತ್ಯಕಾಳನ್ನು ಮಿಕ್ಸರ್‌ನಲ್ಲಿ ಅರೆಯಿರಿ. ನುಣ್ಣನೆಯ ಪೇಸ್ಟ್‌ ಅನ್ನು ತಲೆಗೆ ಅಂಟಿಕೊಳ್ಳುವಂತೆ, ತಲೆಗೂದಲಿನ ಬುಡಕ್ಕೆಲ್ಲ ಈ ಲೇಪನ ಹಚ್ಚಿ. ಅರ್ಧಗಂಟೆಯ ನಂತರ ಶ್ಯಾಂಪೂ ಬಳಸಿ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ ಕೂದಲಿಗೆ ಸೈನಿಂಗ್ ಜತೆಗೆ ಬೇರು ಗತ್ತಿಯಾಗುತ್ತೆ.

ಹುಳಿ ಮೊಸರು:

ಹುಳಿ ಮೊಸರಿನಿಂದ ತಲೆ ಚರ್ಮಕ್ಕೆ ತಾಕುವಂತೆ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ತಲೆಹೊಟ್ಟು ಕಡಿಮೆಯಾಗುವವರೆಗೂ ವಾರಕ್ಕೆ ಒಮ್ಮೆಯಾದರೂ ಹುಳಿಮೊಸರಿನ ಆರೈಕೆ ಮಾಡಿಕೊಂಡರೆ ಹೊಟ್ಟು ಶಾಶ್ವತವಾಗಿ ನಿವಾರಣೆಯಾಗುತ್ತೆ.

ಅಡುಗೆ ಸೋಡಾ:

ತಲೆಯನ್ನು ಒದ್ದೆ ಮಾಡಿಕೊಳ್ಳಿ. ಬೇಕಿಂಗ್‌ ಸೋಡಾದಿಂದ ಮಸಾಜ್‌ ಮಾಡಿ, ಮೂರು ನಿಮಿಷಗಳ ನಂತರ ಸ್ವಚ್ಛವಾಗಿ ತಲೆಯನ್ನು ತೊಳೆದುಕೊಳ್ಳಿ.

ಬೇವಿನೆಣ್ಣೆ:

ತಲೆಗೆ ಬೇವಿನೆಣ್ಣೆ ಅಥವಾ ಬೇವಿನ ಎಲೆ ಸಿಕ್ಕರೆ ಅದನ್ನು ಪೇಸ್ಟ್‌ ಮಾಡಿ, ತಲೆಗೆ ಹಚ್ಚಿಕೊಳ್ಳಬೇಕು. ಒಂದರ್ಧ ಗಂಟೆಯ ನಂತರ ತಲೆಸ್ನಾನ ಮಾಡಬೇಕು. ಸ್ನಾನ ಮಾಡುವಾಗ ಕಹಿಯ ಅನುಭವವಾಗುತ್ತದೆ. ಆದರೆ ಅದು ಚರ್ಮಕ್ಕೂ ತಲೆಹೊಟ್ಟಿನ ಸಮಸ್ಯೆಗೂ ರಾಮಬಾಣವಾಗಿದೆ.