ದೇಹದ ಕೊಬ್ಬು ಕರಗಿಸಲು ಸರಳವಾದ ಈ ಮನೆಮದ್ದು ಪಾಲಿಸಿ. ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತೆ..

0
1606

ಪ್ರತಿಯೊಬ್ಬರಿಗೂ ತೆಳ್ಳಗೆ ಬೆಳ್ಳಗೆ ಕಾಣುವ ಹೆಬ್ಬಯಕೆ ಇದೆ ಇರುತ್ತೆ, ಆದ್ರೆನ್ ಮಾಡೋದು ಬ್ಯುಸಿ ಜೀವನದಲ್ಲಿ ಯಾವುದನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಜಿಮ್ ಹೋಗಬೇಕು ಅಂತ ಹೋದೆ ಆದರೆ ಫೀಜ್ ಕಟ್ಟಿ ನಾಲ್ಕು ದಿನಗಳು ಅಷ್ಟೇ ಹೋದೆ ಆಕಡಿಗೆ ಹೋಗಲು ಆಗಲೇ ಇಲ್ಲ. ಆದರೆ ಬಾಡಿ ತೂಕ ಮಾತ್ರ ಏರುತಲೇ ಇದೆ ಇದಕ್ಕೆ ಏನಾದ್ರೂ ಟ್ಯಾಬ್ಲೆಟ್ ಸಿಗುತ್ತಾ ಅಂತ ಎಲ್ಲರ ಯೋಚನೆಯಾಗಿದೆ. ಇದಕ್ಕೆ ಸ್ನೇಹಿತರು, ಸಂಬಂಧಿಕರು ಹೇಳಿದ ಹಾಗೆ ಕೆಲವೊಂದು ಕ್ರಮಗಳನ್ನು ಮಾಡಿ ನೋಡಿದೆ. ಆದರು ಯಾವುದೇ ಪ್ರಯೋಜನ ಆಗಲಿಲ್ಲ ಅಂತ ಚಿಂತೆ ಮಾಡುವವರು ನಾವು ಹೇಳುವ ರೀತಿ ಮನೆಯಲ್ಲಿ ಸಿಗುವ ವಸ್ತುಗಳಿಂದ ತಯಾರಿಸಿದ ಮನೆಮದ್ದು ಮಾಡಿ ನೋಡಿ. ದೇಹದ ಕೊಬ್ಬು ಕರಗಿ ನಿಮಗೆ ಬೇಕ್ಕಾದ ರೀತಿಯಲ್ಲಿ ನಿಮ್ಮ ದೇಹದ ತೋಕ ಕಡಿಮೆಯಾಗುತ್ತೆ.

Also read: ಒಂದು ವಾರದಲ್ಲಿ ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು ಕರಗಿಸೋ ವಿಧಾನ

ನಮ್ಮ ಮನೆಯಲ್ಲೇ ಇರುವ ಅಡಿಗೆ ಮನೆಯ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದು ಹೇಗೆ ಸಾದ್ಯ ಅಂತ ಅನಿಸಿದರು ಈ ಕೆಳಗಿನ ವಿಧಾನಗಳನ್ನು ಅನುಸರಿಸಿದರೆ ಸಾಕು. ದೇಹದ ಅಧಿಕ ತೂಕವನ್ನು ಕಡಿಮೆ ಮಾಡಲು ಬೇಕಾಗಿರುವ ಅಡುಗೆ ಮನೆಯಲ್ಲಿರುವ ಪದಾರ್ಥಗಳು ಹೀಗಿವೆ.

1. ಮೆಂತ್ಯೆ 200 ಗ್ರಾಂ,
2. ಓಂ ಕಾಳು 100 ಗ್ರಾಂ,
3. ಚಕ್ಕೆ 25 ಗ್ರಾಂ,
4. ಕಪ್ಪು ಜೀರಿಗೆ 50 ಗ್ರಾಂ.

ಈ ಪದಾರ್ಥಗಳಲ್ಲಿರುವ ಶಕ್ತಿ ಎಂತಹದು?

ಮೆಂತ್ಯೆ : ಇದು ನಮ್ಮ ದೇಹದಲ್ಲಿರುವ ರಕ್ತದ ಹರಿತವನ್ನು ಉತ್ತಮಗೊಳಿಸಿ ಮೆಟಬೋಲಿಸಂ ಪ್ರಮಾಣದ ಶೇಕಡವನ್ನು ಹೆಚ್ಚಿಸುತ್ತದೆ. ಮತ್ತು ಇದರಿಂದ ದೇಹದ ಆಯಾಸವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮವಾದ ಗುಣಗಳನ್ನು ಹೊಂದಿದೆ.

ಓಂ ಕಾಳು : ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರ ಜೊತೆಗೆ ನರದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಸಹ ಕರಗಿಸುತ್ತದೆ. ಮತ್ತು ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳನ್ನು ಹೋಗಲಾಡಿಸುತ್ತೆ. ರಕ್ತದ ಸುದ್ದತೆಯನ್ನು ಕಾಪಾಡುತ್ತೆ.

ಚಕ್ಕೆ : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಅದನ್ನು ಸುಲಭವಾಗಿ ಕರಗಲು ಸಹ ಸಹಾಯ ಮಾಡುತ್ತದೆ. ಇದರಲ್ಲಿ ಕಾರದ ಅಂಶದ ಜೊತೆಗೆ ಸಿಹಿ ಅಂಶ ವಿರುವುದರಿಂದ ದೇಹದಲ್ಲಿರುವ ಕೊಳಕನ್ನು ಹೊರಹಾಕುತ್ತೆ.

ಕಪ್ಪು ಜೀರಿಗೆ : ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

ತಯಾರಿಸುವ ವಿಧಾನ:

ಮೊದಲಿಗೆ ಮೆಂತ್ಯೆ, ಓಂ ಕಾಳು, ಚಕ್ಕೆ, ಕಪ್ಪು ಜೀರಿಗೆಯನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಬೇಕು. ಇದು ತಣ್ಣಗಾದ ನಂತರ ಇದನ್ನು ಮಿಕ್ಸಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಗಾಜಿನ ಡಬ್ಬ ಅಥವಾ ವಾಯು ಬಿಗಿತ ಡಬ್ಬದಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು.

ರಾತ್ರಿ ಊಟ ಆದ ಅರ್ಧ ಗಂಟೆಯ ನಂತರ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ಸ್ಪೂನ್ ಈ ಪುಡಿಯನ್ನು ಬೆರೆಸಿ ತೆಗೆದುಕೊಳ್ಳಿ. ಹೀಗೆ ಕ್ರಮಬದ್ದವಾಗಿ ತೆಗೆದುಕೊಳ್ಳುವುದರಿಂದ ಒಂದು ತಿಂಗಳಿನಲ್ಲಿಯೇ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಇದು ಕೊಬ್ಬನ್ನು ಕರಗಿಸುವುದಲ್ಲದೆ, ಆರೋಗ್ಯವನ್ನು ಸಹ ವೃದ್ಧಿಸುತ್ತದೆ.

Also read: ಬೊಜ್ಜು ಹೊಟ್ಟೆ ಕರಗಿಸುವ ಗಿಡಮೂಲಿಕೆಗಳು