ಕೂದಲು ಉದುರುತ್ತಿದೆಯೇ ಹಾಗಾದ್ರೆ ಈ ಮನೆಮದ್ದು ಪಾಲಿಸಿ 100 ರಷ್ಟು ಲಾಭ ಪಡೆಯರಿ..

0
2188

ಮಹಿಳೆ ಅಥವಾ ಪುರುಷ ಯಾರಿಗೆ ಆಗಲಿ ತಲೆಯಲ್ಲಿ ಕೂದಲು ಇದ್ರೇನೆ ಚಂದ. ಕೂದಲುಗಳು ವ್ಯಕ್ತಿಯ ಸೌದರ್ಯವನ್ನು ಹೆಚ್ಚಿಸುತ್ತೆವೆ ಅಷ್ಟೇ ಅಲ್ಲದೆ ತಲೆಯಲ್ಲಿ ಕೂದಲು ಉದರುತ್ತಿದರೆ ಇಲ್ಲ ಕೂದಲು ಉದಿರಿ ಬೊಕ್ಕತಲೆ ಇದ್ದರೆ ಜನರು ಸಾಮಾನ್ಯವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಅವರ ಬಗ್ಗೆ ಅವರಿಗೆನೆ ಸರಿಯಾದ ನಂಬಿಕೆಯಿರುವುದಿಲ್ಲ ಮತ್ತು ಬೇರೆಯವರ ಹತ್ತಿರ ಡೈರೆಕ್ಟ್ ಆಗಿ ಮುಖ ತೋರಿಸಿ ಮಾತನಾಡಲು ಹಿಂಜರಿಕೆ ಇರುತ್ತದೆ. ಇದೆಲ್ಲ ಹುಟ್ಟುವುದು ತಲೆ ಕೂದಲು ಇಲ್ಲದ ಕಾರಣದಿಂದ ಇದಕ್ಕೆ ಸರಿಯಾದ ಕಾರಣಗಳು ಆಹಾರ ಕ್ರಮಗಳು ಮತ್ತು ವಾತಾವರಣ ಬದಲಾವಣೆಯಿಂದ ಕೂದಲು ಉದುರುವುದು ಸಾಮಾನ್ಯವಾಗಿದೆ.

Also read: ಸುಂದರವಾದ ಹಾಗು ಶೈನಿ ಕೂದಲು ನಿಮ್ಮದಾಗಬೇಕೆ ಹಾಗಾದರೆ ಈ ಆಹಾರವನ್ನು ಇಂದಿನಿಂದಲೇ ಸೇವಿಸಿ…

20 ವರ್ಷವಾದರೆ ಸಾಕು ಶೇಕಡ 70% ಜನರಿಗೆ ಕೂದಲು ಉದುರಲು ಶುರುವಾಗುತ್ತೆ. ಇದಕ್ಕೆ ಪರಿಹಾರವಾಗಿ ಸಾವಿರಾರು ರುಪಾಯಿ ಹಣ ಕರ್ಚುಮಾಡಿ ಔಷಧಿಗಳನ್ನು ಮತ್ತು ಮಾತ್ರೆ, ಆಯಿಲ್ ಹೀಗೆ ಎಲ್ಲ ತರಹದ ಚಿಕ್ಸಿತೆ ಪಡೆದರು ಯಾವುದೇ ಫಲವಿರುವುದಿಲ್ಲ. ಇದೆಲ್ಲ ಮಾಡುವುದಕ್ಕಿಂತ ನೀವೇ ಮನೆಯಲ್ಲಿ ನಾವು ಹೇಳುವ ಕ್ರಮಗಳನ್ನು ಪಾಲಿಸಿ ನೋಡಿ ಎಷ್ಟೊಂದು ಬದಲಾವಣೆ ಕಾಣುತ್ತೆ ಉದುರುವ ಕೂದಲು ನಿಂತು ಮರು ಬೆಳವಣಿಗೆಯಾಗುತ್ತೆ.

ಇರುಳಿ ಮತ್ತು ಕರಿಬೇವು:

ಹಸಿಯಾದ ರಸವಿರುವ 4 ಇರುಳಿಯನ್ನು ಕತ್ತರಿಸಿ ನಂತರ ಒಂದು ಪಾತ್ರೆ 500 ಗ್ರಾಂ ತೆಂಗಿನೆಣ್ಣೆ ಹಾಕಿ ಎರಡು ಬೊಗಸೆಯಷ್ಟು ಕರಿಬೇವಿನ ಎಲೆಗಳನ್ನು ಹಾಕಿ ಇರುಳಿ ಕರಿಬೇವುವನ್ನು ಒಟ್ಟಿಗೆ ಕರಿಯರಿ. ಇರುಳಿ ಕರಿಬೇವು ಸಂಪೂರ್ಣವಾಗಿ ಕಂಡು ಬಣ್ಣ ಬಂದಮೇಲೆ 2 ತಾಸು ಆರಲು ಬಿಟ್ಟು ಕೈಯಿಂದ ಪುಡಿಮಾಡಿ ಇಲ್ಲ ಮಿಕ್ಸರ್- ನಲ್ಲಿ ಪುಡಿ ಮಾಡಿದರು ಒಳ್ಳೆಯದು ನಂತರ ಒಂದು ಬಾಟಲಿಯಲ್ಲಿ ಹಾಕಿಡಿ ಎರಡು ದಿನಕೊಮ್ಮೆ ರಾತ್ರಿ ಮಲಗುವಾಗೆ ಹಚ್ಚಿಕೊಂಡು ಮಲಗಿ ಇದರಿಂದ ಉತ್ತಮವಾದ ದಟ್ಟ ಕೂದಲು ಬರುತ್ತೆ.

ತೆಂಗಿನ ಹಾಲು ಮತ್ತು ಎಣ್ಣೆ:

ತೆಂಗಿನ ಹಾಲನ್ನು ಎಣ್ಣೆಯ ಜೊತೆಗೆ ಬೆರೆಸಿಕೊಳ್ಳಿ. ಈ ಎರಡು ಪದಾರ್ಥಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ ಮತ್ತು ಅದನ್ನು ಬೊಕ್ಕ ತಲೆಗೆ ಲೇಪಿಸಿ ಮಸಾಜ್ ಮಾಡಿ. ಈ ಚಿಕಿತ್ಸೆಯನ್ನು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಿ. ಬೊಕ್ಕ ತಲೆಯ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಹರಳೆಣ್ಣೆ:

ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಒಂದು ಅಥವಾ ಎರಡು ಟೇಬಲ್ ಚಮಚ ಹರಳೆಣ್ಣೆಯನ್ನು ಅಂಗೈನಲ್ಲಿ ತೆಗೆದುಕೊಂಡು ಬೊಕ್ಕತಲೆಯ ಭಾಗದಲ್ಲಿ ಲೇಪಿಸಿಕೊಳ್ಳಿ. ಇದರಿಂದ ಸ್ವಾಭಾವಿಕವಾಗಿ ನಿಮ್ಮ ಕೂದಲು ಆ ಭಾಗದಲ್ಲಿ ಬೆಳೆಯುತ್ತದೆ.

ನೆಲ್ಲಿಕಾಯಿ:

ಕೂದಲಿನ ವೃದ್ಧಿಸಲು ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡುವಲ್ಲಿ ನೆಲ್ಲಿಕಾಯಿಯ ಪಾತ್ರ ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ವಿಟಮಿನ್ ಸಿ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೆಲ್ಲಿಕಾಯಿ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಕೂದಲು ಉದುರಿರುವ ಜಾಗಕ್ಕೆ ಹಚ್ಚಿ, ಅಲ್ಲದೆ ಒಂದು ದಿನ ಹಾಗೆಯೇ ಬಿಡಿ ಹಾಗೂ ಮರುದಿನ ಸ್ನಾನ ಮಾಡುವಾಗ ನೈಸರ್ಗಿಕ ಶಾಂಪೂ ಬಳಸಿ ಸ್ನಾನ ಮಾಡಿ.

ಅಲೋವಿರಾ ಜೆಲ್:

ಅಲೋವಿರಾ ಅಥವಾ ಲೋಳೆಯ ಜೆಲ್ ಅನ್ನು ತಾಜಾ ಆಗಿ ಗಿಡದಿಂದ ಕತ್ತರಿಸಿ ತೆಗೆದುಕೊಳ್ಳಿ. ಇದನ್ನು ಬೊಕ್ಕತಲೆಯ ಭಾಗದಲ್ಲಿ ನೇರವಾಗಿ ಲೇಪಿಸಿ. ತದನಂತರ ಸ್ವಲ್ಪ ಹೊತ್ತು ಇದನ್ನು ಹಾಗೆಯೇ ಒಣಗಲು ಬಿಡಿ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಎಲ್ಲಾ ಮುಗಿದ ಮೇಲೆ ಬೆಚ್ಚಗಿನ ನೀರಿನಿಂದ ತಲೆ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಮೆಂತೆ ಕಾಳು:

ಮೆಂತೆ ಕಾಳುಗಳೂ ಕೂಡ ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಾಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಹಾಗಾಗಿ ಮೆಂತೆ ಕಾಳುಗಳು ನೆನೆದು ಮೆತ್ತಗಾಗುತ್ತಲೇ ಅವುಗಳನ್ನು ಮಿಕ್ಸರ್ ಗ್ರೈ೦ಡರ್ ನಲ್ಲಿ ತಿರುವಿ ಪೇಸ್ಟ್‌ನ ರೂಪಕ್ಕೆ ತ೦ದುಕೊಳ್ಳಿರಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ನೇರವಾಗಿ ಹಚ್ಚಿಕೊಳ್ಳಿರಿ ಹಾಗೂ ಅದು ನೆತ್ತಿಯ ಮೇಲೆ ಹಾಗೆಯೇ ಒಣಗಲು ಅವಕಾಶ ನೀಡಿರಿ. ಬಳಿಕ ಮ೦ದವಾದ ಶ್ಯಾ೦ಪೂವಿನಿ೦ದ ಅದನ್ನು ತೊಳೆದುಕೊಳ್ಳುವುದರ ಮೂಲಕ ಕೋಮಲವಾದ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಿರಿ.

ಜೇನು ತುಪ್ಪದ ಮಸಾಜ್:

ಎರಡು ಟೇಬಲ್ ಚಮಚ ಜೇನು ತುಪ್ಪದ ಜೊತೆಗೆ ಒಂದು ಟೇಬಲ್ ಚಮಚ ಚಕ್ಕೆಯ ಪುಡಿಯನ್ನು ಬೆರೆಸಿಕೊಳ್ಳಿ. ತದನಂತರ ಈ ಮಿಶ್ರಣವನ್ನು ಬೊಕ್ಕ ತಲೆಯ ಮೇಲೆ ಲೇಪಿಸಿಕೊಂಡು, 20 ನಿಮಿಷ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ.

ಸೀಬೆ ಹಣ್ಣಿನ ಎಲೆಗಳು:

ಒಂದಿಷ್ಟು ಸೀಬೆ ಹಣ್ಣಿನ ಎಲೆಗಳ ಜೊತೆಗೆ ಎರಡು ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದರ ಮೂಲಕ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಬೇಗೆ ಬೆಳೆಯಲು ಸಾಧ್ಯವಾಗುತ್ತದೆ. ನಿಮಗೆ ಬೇಕಾದಲ್ಲಿ ಒಂದು ಟೇಬಲ್ ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು.