ಬೊಕ್ಕತಲೆ ಕೂದಲುದುರುವಿಕೆಗೆ ಹೋಮಿಯೋಪಥಿ!!!

0
1218

ಅಸಂಖ್ಯಾತ ಜನರು ಕೂದಲುದುರುವಿಕೆಯ ತೊಂದರೆಗೆ ಒಳಗಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಕೂದಲುದುರುವಿಕೆಯು ವಯಸ್ಸು, ಗಂಡಸು, ಹೆಂಗಸು ಎಂಬ ಭೇದವಿಲ್ಲದೆ ಭಾದಿಸುತ್ತದೆ. ಅತಿಯಾದ ಮಾನಸಿಕ ಒತ್ತಡ, ರಾಸಾಯನಿಕಯುಕ್ತ ಆಹಾರ ಸೇವನೆ, ಅಪೌಷ್ಠಿಕತೆ, ರಕ್ತಹೀನತೆ, ದೀರ್ಘ ಕಾಲೀನ ರೋಗಗಳು, ಜೀವನ ಶೈಲಿಯಲ್ಲಾಗುವ ಏರುಪೇರುಗಳಿಂದ ಕೂದಲುದುರುವಿಕೆಯಾಗಿ ಬೊಕ್ಕ ತಲೆಯಾಗಲು ಕಾರಣವಾಗುತ್ತದೆ. ಅನುವಂಶಿಕವಾಗಿ ಮತ್ತು ಪಾರಂಪರಿಕವಾಗಿಯೂ ಕೂದಲುದುರುವಿಕೆ ಸಾಧ್ಯ.

ಅಂಶಿಕ ಬೊಕ್ಕತಲೆ, ಅಲೋಪೇಷಿಯಾ ಏರಿಯೋಟಾ ಸಾಮಾನ್ಯವಾಗಿ ನೆತ್ತಿಯಲ್ಲೆ ಕಂಡುಬಂದರೂ ದೇಹದ ಮೇಲಿರುವ ಇತರ ಕೂದಲಿಗೂ ಹರಡಬಹುದು. ಚರ್ಮಕ್ಕೆ ರಕ್ತ ಸಾಗಿಸುವ ರಕ್ತನಾಳಗಳಲ್ಲಿ ಅಡಚಣೆಯುಂಟಾಗಿ ಕೂದಲುದುರುವುದಕ್ಕೆ ಪ್ರೇರಣೆಯಾಗುತ್ತದೆ. ಆದುದರಿಂದ ಉತ್ತಮ ಪೌಷ್ಠಿಕ ಆಹಾರ ಸೇವನೆ, ವ್ಯಾಯಾಮ, ಮಾನಸಿಕ ಒತ್ತಡ ತಗ್ಗಿಸುವುದರಿಂದ ಕೂದಲುದುರುವಿಕೆಯನ್ನು ತಡೆಗಟ್ಟಬಹುದು.

ಕೂದಲು ಉದುರುವಿಕೆಗೆ ಶಾಶ್ವತ ಮತ್ತು ಪರಿಣಾಮಕಾರಿ ಚಿಕಿತ್ಸೆ ಹೋಮಿಯೋಪಥಿಯಿಂದ ಮಾತ್ರ ಸಾಧ್ಯ. ಹೋಮಿಯೋಪಥಿ ಚಿಕಿತ್ಸೆಯು ರೋಗವನ್ನು ತಡೆದು, ಗುಣಪಡಿಸಿ ರೋಗಿಯ ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಹೋಮಿಯೋಪಥಿ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ದೀರ್ಘಕಾಲೀಕ ರೋಗಗಳಿಗೆ ಹೋಮಿಯೋಪಥಿಯೊಂದೇ ರಾಮಬಾಣ. ಕೂದಲು ಉದುರುವಿಕೆಯನ್ನು ತಡೆಯುವುದರ ಜೊತೆಗೆ ಕೂದಲಿಗೆ ಬೇರುಗಳನ್ನು ಹೋಮಿಯೋಪಥಿ ಔಷಧ ಅತ್ಯಂತ ಭಲಶಾಲಿಯನ್ನಾಗಿಸಿ ಬುಡದಿಂದಲೇ ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಇದರ ಜೊತೆಗೆ ಹೊಟ್ಟು ಮತ್ತು ಇತರ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಕೂದಲುದುರುವಿಕೆ ತಡೆಯಲು ಅನುಸರಿಸಬೇಕಾದ ಮಾರ್ಗ

  • ಕೂದಲನ್ನು ಚೆನ್ನಾಗಿ ಒಣಗಲು ಬಿಡಿ.
  • ತುಂಬಾ ಎಣ್ಣೆಯುಕ್ತ ಆಹಾರ ಸೇವನೆ ಬೇಡ.
  • ಸ್ಟೈಲಿಂಗ್ ಬೇಡ.
  • ಅಂಟಿರದ ಎಣ್ಣೆಯಿಂದ ಮಸಾಜ್ ಮಾಡಿ.
  • ಮೃದುವಾದ ಪೋಷಣೆ.
  • ಬೆರಳನ್ನೇ ಬಾಚಣಿಕೆ ಮಾಡಿಕೊಳ್ಳಿ.
  • ಕೂದಲಿನ ಉತ್ಪನ್ನಗಳನ್ನು ತ್ಯಜಿಸಿ (ಒಂದೇ ರೀತಿ ಶಾಂಪು ಬಳಸಿ).
  • ಎಣ್ಣೆ ಎಂಬ ನೈಸರ್ಗಿಕ ಮದ್ದು.

ಕೂದಲಿನ ಸಮಸ್ಯೆಗಳಿಗೆ ರಾಸಾಯನಿಕಯುಕ್ತ ಔಷಧಿಗಳಿಂದ ಉಪಯೋಗಕ್ಕಿಂತ ಹಾನಿಕಾರವೇ ಹೆಚ್ಚು ಆದುದರಿಂದ ನೈಸರ್ಗಿಕವಾದ ಹೋಮಿಯೋಪಥಿ. ಚಿಕಿತ್ಸೆ ತೆಗೆದುಕೊಂಡು ಕೂದಲಿನ ಆರೋಗ್ಯವನ್ನು ವೃದ್ಧಿಸಿ ನೆಮ್ಮದಿ ಜೀವನ ನಡೆಸಬಹುದು.