ನಾಯಿ ನಿಯತ್ತು ಅಂದ್ರೆ ಇದೆ ಕಣ್ರೀ ತನ್ನ ಮಾಲೀಕನ ಪ್ರಾಣ ಉಳಿಸಿದ ನಾಯಿ. ಈ ನಿಯತ್ತು ಮನುಷ್ಯನಿಗೆ ಯಾಕೆ ಇಲ್ಲ …!

0
1245

ಒಂದು ಮನೆ ಆ ಮನೆನಲ್ಲಿ ಮನೆ ಮಾಲಿಕನಿಗೆ ನಾಯಿ ಅಂದ್ರೆ ತುಂಬಾ ಪ್ರೀತಿ ಮಾಡುವ ಮನುಷ್ಯ. ತಾನು ಜೀವನದಲ್ಲಿ ನಾಯಿಗಿಂತ ಹೆಚ್ಚಾಗಿ ಏನನ್ನು ಇಷ್ಟಪಡದ ವ್ಯಕ್ತಿ. ಈ ಮನುಷ್ಯ ತನ್ನ ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದ ಆ ನಾಯಿ ಮನೆ ತುಂಬಾ ಓಡಾಡಿಕೊಂಡು ಮತ್ತು ಈ ಮನುಷ್ಯ ಆಫೀಸ್ ಗೆ ಹೋದ್ರೆ ಅಲ್ಲಿಗೂ ಹೋಗುವಂತ ನಾಯಿ ಇದು.

honest-story-1
source;shutterstock.com

ಆದ್ರೆ ಒಂದು ದಿನ ಈ ಮನುಷ್ಯನ ಮಗ ನಾಯಿಗೆ ಏನೋ ತೊಂದ್ರೆ ಕೊಟ್ಟಿದ್ದಾಕೆ ಆ ನಾಯಿ ಆ ಹುಡುಗನನ್ನು ಕಚ್ಚಿತ್ತು.
ಇದರಿಂದ ಆ ಹುಡುಗ ತನ್ನ ಪ್ರಾಣವನ್ನೇ ಕಳೆದುಕೊಂಡ. ಅದರಿಂದ ರೊಚ್ಚಿಗೆದ್ದ ಆ ಮನುಷ್ಯ ತನ್ನ ನಾಯಿಯನ್ನು ಕರೆದುಕೊಂಡು ಹೋಗಿ ಯಾವುದು ಒಂದು ದೊಡ್ಡ ಕಾಡಿನಲ್ಲಿ ಬಿಟ್ಟು ಬರುತ್ತಾನೆ.

honest-story-2
source:forestandfield.blogspot.com

ಆದ್ರೆ ಮಾರನೇ ದಿನ ಅದೇ ನಾಯಿ ಮತ್ತೆ ಆ ಮನುಷ್ಯನ ಮನೆ ಮುಂದೆ ಬಂದು ನಿಂತಿರುತ್ತೆ. ಇದನ್ನು ನೋಡಿದ ಆ ಮಾಲೀಕ ಮತ್ತೆ ಸಿಟ್ಟಾಗಿ ಅದನ್ನು ಕರೆದುಕೊಂಡು ಹೋಗಿ ಮತ್ತೆ ಯಾವುದು ಒಂದು ದೊಡ್ಡ ಕಾಡಿಗೆ ಬಿದ್ದು ಬರುತ್ತಾನೆ. ಬಂದು ಮನೆಯಲ್ಲಿ ಇದ್ದ ಆ ಮನುಷ್ಯ ಮಾರನೇ ದಿನ ಎದ್ದು ನೋಡುತ್ತಾನೆ ನಾಯಿ ಬಂದಿರುವುದಿಲ್ಲ ಆಗ ಆ ಮನುಷ್ಯ ಅಂತೂ ಆ ನಾಯಿ ತೊಲಗುತ್ತು ಅಂತ ಹೇಳಿ ಆರಾಮಾಗಿ ಇದ್ದ.

honest-story-3
source:ebay.com

ಹೀಗೆ ದಿನಕಳೆದಂತೆ ಒಂದು ದಿನ ಆ ಮನುಷ್ಯನಿಗೆ ಮನೆಯಲ್ಲಿ ಮಲಗಿರುವ ಹೃದಯಾಘಾತವಾಗುತ್ತದೆ. ಆದ್ರೆ ಆ ಮನುಷ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯಾರು ಇರುವುದಿಲ್ಲ. ಅಲ್ಲೇ ನರಳಾಡುತಿದ್ದಾ ಆಗ ಹೇಗೂ ಆ ನಾಯಿ ಆ ಕಾಡಿನಿಂದ ಬಂದು ಅದೇ ಮನೆ ಹತ್ತಿರ ಬರುತ್ತೆ ಮನೆ ಬಾಗಿಲು ಓಪನ್ ಆಗಿರುತ್ತೆ ಆಗ ಆ ನಾಯಿ ಸಿದ ಮನೆಯೊಳಗೇ ಹೋಗುತ್ತೆ.

ಅಲ್ಲಿ ಆ ಮನುಷ್ಯನ ನರಳಾಟ ನೋಡಿ ಆ ನಾಯಿ ಅಲ್ಲಿಂದ ಹೊರಗೆ ಬಂದು ಪಕ್ಕದ ಮನೆಯ ಹತ್ತಿರ ಹೋಗಿ ಜೋರಾಗಿ ಬೊಗಳಲು ಶುರು ಮಾಡುತ್ತೆ. ಆಗ ಆ ಮನೆಯ ಮಾಲೀಕ ಹೊರಗಡೆ ಬಂದು ಆ ನಾಯಿಯನ್ನು ಒಡೆಯಲು ಹೋಗುತ್ತಾನೆ ಆಗ ಆ ನಾಯಿ ಆ ಮಾಲಿಕಾನಿಗೆ ಹೇಗೋ ಸನ್ನೆ ಮಾಡಿ ತನ್ನ ಮನೆ ಮಾಲೀಕ ಹತ್ತಿರ ಕರೆದುಕೊಂಡು ಬಿಡುತ್ತೆ.

honest-story-4
source: aplaceforpitbulls.com

ಆಗ ಆ ಮುನಷ್ಯನ್ನನು ಆಸ್ಪತ್ರೆಗೆ ಸಾಗಿಸಲಾಗುತ್ತೆ. ಆಸ್ಪತ್ರೆಯಲ್ಲಿ ಪಕ್ಕದ ಮನೆಯ ಮನುಷ್ಯ ಹೇಳುತ್ತಾನೆ ನೀವು ನಿಜವಾಗಲೂ ನಂಗೆ ಯಾವುದೇ ಧನ್ಯವಾದಗಳು ಹೇಳವುದಾದರೆ ಖಂಡಿತ ನಂಗೆ ಹೇಳಬೇಡಿ ನಿಮ್ಮ ಮನೆಯಲ್ಲಿ ಇದ್ದ ನಿಮ್ಮ ನಾಯಿಗೆ ಹೇಳಿ ಅದೇ ಇವತ್ತು ನಿಮ್ಮ ಜೀವ ಉಳಿಸಿದ್ದು ಅಂತ ಹೇಳುತ್ತಾನೆ.

honest-story-5
source:petcloud.com

ಆದ್ರೆ ಆ ನಾಯಿ ಅಲ್ಲಿ ಇರುವುದಿಲ್ಲ ರೂಮಿನ ಹೊರಗಡೆ ನಿಂತಿರುತ್ತೆ . ಆಗ ಆ ಮನುಷ್ಯ ಆ ನಾಯಿ ಹತ್ತಿರ ಹೋಗಿ ಧನ್ಯವಾದ ಜೊತೆ ಸಾರಿ ಕೊಡು ಕೇಳುತ್ತಾನೆ. ದಯವಿಟ್ಟು ನನ್ನ ಕ್ಷಮಿಸು ಅಂತ ನಾಯಿಯನ್ನು ಕೇಳಿ ಮತ್ತೆ ಆ ನಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ.
ಇದಕ್ಕೆ ನೋಡಿ ಹೇಳೋದು ಮನುಷ್ಯನಿಗೆ ಇರೋ ನಿಯತ್ತು ಕಡಿಮೆ ಆದ್ರೂ ನಾಯಿಗೆ ಇರೋ ನಿಯತ್ತು ಯಾವತ್ತೂ ಕಡಿಮೆ ಆಗಲ್ಲ..