ರಾಜ್ಯದಲ್ಲಿ ರಂಗೇರಿದ ಉಪಚುನಾವಣಾ ಅಖಾಡ; ಎಲ್ಲ ಪಕ್ಷಗಳಿಗೆ ಸಂಕಷ್ಟ ತಂದ ಹನಿಟ್ರ್ಯಾಪ್​ ಪ್ರಕರಣ, ವಿಡಿಯೋ ಡಿಲೀಟ್​ ಮಾಡಿಸಲು ಸಿಸಿಬಿ ಕಚೇರಿ ಸುತ್ತುತ್ತಿರುವ ಶಾಸಕರು.!

0
164

ರಾಜ್ಯದಲ್ಲಿ ಉಪಚುನಾವಣೆ ಸದ್ದು ಜೋರಾಗಿದ್ದು , ಅನರ್ಹ ಶಾಸಕರ ಕುರಿತು ಟೀಕೆಗಳು ಹೆಚ್ಚಾಗಿ ಕೇಳಿಬರುತ್ತಿದ್ದರೆ. ಈಗ ಹನಿಟ್ರ್ಯಾಪ್​ ಪ್ರಕರಣ ರಾಜಕೀಯ ವಲಯದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದೆ, ಅದರಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪರಸ್ಪರ ವಾಕ್ಸಮರದಲ್ಲಿ ತೊಡಗಿಕೊಂಡಿದ್ದು ಕುಮಾರಸ್ವಾಮಿ ಕಣ್ಣೀರು, ಸದಾನಂದ ಗೌಡರ ನಗು ಸೇರಿದಂತೆ ಸಚಿವ ವಿ.ಸೋಮಣ್ಣ ಕಳ್ಳತನದ ಜೊತೆಗೆ ಹನಿಟ್ರ್ಯಾಪ್ ಆರೋಪ ಕೂಡಾ ಸದ್ದು ಮಾಡುತ್ತಿದೆ.ಈ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಕೋರಿ, ಸಿಸಿಬಿ ಕಚೇರಿಗೆ ಶಾಸಕರು ಹಾಗೂ ಅಧಿಕಾರಿಗಳು ಆಗಮಿಸುತ್ತಿದ್ದಾರೆ.

Also read: SSLC ಪರೀಕ್ಷೆಯ ಅಂತಿಮ ವೇಳಾಪಟ್ಟಿ ಮಾ.27ರಿಂದ ಏ.9ರವರೆಗೆ ನಡೆಯಲಿವೆ ಪರೀಕ್ಷೆಗಳು.!

ಹೌದು ಮಂಡ್ಯದ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ಬಿಜೆಪಿ ಮುಖಂಡರು ವ್ಯಂಗ್ಯವಾಡಿದ್ದರು. ಕೇಂದ್ರ ಸಚಿವ ಸದಾನಂದ ಗೌಡರು ಕುಮಾರಸ್ವಾಮಿ ಕಣ್ಣೀರನ್ನು ವಿಕ್ಸ್ ಕಣ್ಣೀರು ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ ದೇವೇಗೌಡರ ಕುಟುಂಬಕ್ಕೆ ಕಣ್ಣೀರು ಹಾಕೋದು ಹಾಗೂ ಭವಿಷ್ಯ ಹೇಳುವುದೇ ಕೆಲಸ ಎಂದು ಟೀಕೆ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಾತನಾಡಿದ ಎಚ್‌.ಡಿ ಕುಮಾರಸ್ವಾಮಿ, ನಮಗೆ ಬಡವರನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಸದಾನಂದ ಗೌಡರು ಸತ್ತಮನೆಯಲ್ಲೂ ನಗುತ್ತಾರೆ. ಈ ಕಾರಣಕ್ಕಾಗಿ ಸಾವಿನ ಮನೆಗೆ ಡಿವಿಎಸ್ ಅವರನ್ನು ಕರೆದುಕೊಂಡು ಹೋಗಬೇಡಿ ಎಂದಿದ್ದಾರೆ.

Also read: ಗೂಂಡಾಗಿರಿ ಮಾಡಿದವರ ಹುಟ್ಟಡಗಿಸುತ್ತೇವೆ; ಹೊಸಕೋಟೆ ಜನರಿಗೆ ಎಚ್ಚರಿಕೆ ನೀಡಿದ್ರಾ ಬಿಎಸ್​ವೈ??

ಕೆಆರ್ ಪೇಟೆ ಕದನ ಕಣದಲ್ಲಿ ಮುಂಬೈ ವಿಚಾರ ಸಖತ್ ಸದ್ದು ಮಾಡುತ್ತಿದೆ. ನಾನು ಕೂಲಿ ಮಾಡಿದ್ದೇನೆ. ಹೊಟೇಲ್‍ನಲ್ಲಿಯೂ ಕೆಲಸ ಮಾಡಿದ್ದೇನೆ. ಈಗಲೂ ನಾನು ಲೋಟ ತೊಳೆಯುತ್ತೇನೆ. ನನ್ನ ಹೊಟೇಲಿನಲ್ಲಿ ತಟ್ಟೆ, ಗ್ಲಾಸು ತೊಳೆದ್ರೆ ಏನು ತಪ್ಪು ಅಂತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪ್ರಶ್ನಿಸಿದ್ದಾರೆ. ಕೆಆರ್ ಪೇಟೆಯ ವಡ್ಡರಹಳ್ಳಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು. ಈಗ ಅವರು ನಮ್ಮ ದೇಶದ ಪ್ರಧಾನಿ ಆಗಿದ್ದಾರೆ. ತಟ್ಟೆ ಗ್ಲಾಸು ತೊಳೆದ್ರೆ ಏನು ತಪ್ಪು ಅನ್ನೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ಗುದ್ದು ನೀಡಿದ್ದಾರೆ. ಜೊತೆಗೆ ಇದೇ ವಿಚಾರವನ್ನೇ ಪ್ರಚಾರದಲ್ಲಿ ಪ್ರಸ್ತಾಪಿಸಿ ಅನುಕಂಪ ಗಿಟ್ಟಿಸಲು ನಾರಾಯಣಗೌಡ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಚುನಾವಣೆಗೆ ಕಪ್ಪು ಚುಕ್ಕೆಯಾದ ಶಾಸಕರ ಕಾಮ ಪುರಾಣ?

Also read: ವಾಹನ ಸವಾರರಿಗೆ ಪೊಲೀಸ್ ಪೇದೆಗಳು ದಂಡ ಹಾಕುವಂತಿಲ್ಲ; ಬೈಕ್ ಸವಾರರನ್ನು ಬಲವಂತವಾಗಿ ನಿಲ್ಲಿಸುವಂತಿಲ್ಲ! ಹೈಕೋರ್ಟ್ ಮಹತ್ವದ ಆದೇಶ.!

ಹನಿಟ್ರ್ಯಾಪ್ ಆರೋಪಿಗಳನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಡುಗೋಡಿಯ ಟೆಕ್ನಿಕಲ್​ ಸೆಲ್​​ನಲ್ಲಿ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಈ ಮೂಲಕ ಯಾವುದೇ ಗುಟ್ಟು ಹೊರ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಇಬ್ಬರು ಅನರ್ಹ ಶಾಸಕರು ಸೇರಿ 10 ಶಾಸಕರನ್ನು ಹನಿಟ್ರ್ಯಾಪ್​ ಮಾಡಲಾಗಿದೆ. ಇವರ ಖಾಸಗಿ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದೊಮ್ಮೆ ಈ ವಿಡಿಯೋಗಳು ಹೊರ ಬಂದರೆ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಭಾರೀ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಆರೋಪಿಗಳು ಇಲ್ಲಿಯವರೆಗೆ 10ಕ್ಕೂ ಹೆಚ್ಚು ಶಾಸಕರನ್ನು ಹನಿಟ್ರ್ಯಾಪ್ ಮಾಡಿರುವ ಸಂಗತಿ ಪತ್ತೆಯಾಗಿದೆ. ಆದರೆ, ಈ ಬಗ್ಗೆ ದೂರು ನೀಡಲು ಯಾವೊಬ್ಬ ಶಾಸಕರೂ ಮುಂದೆ ಬರುತ್ತಿಲ್ಲ. ತಮ್ಮ ವಿಷಯ ಬಹಿರಂಗವಾಗುತ್ತದೆ ಎಂಬ ಭಯದಿಂದ ಹನಿಟ್ರ್ಯಾಪಿಂಗ್​ಗೆ ಒಳಗಾಗಿರುವ ಶಾಸಕರು ದೂರು ನೀಡಲು ಒಪ್ಪುತ್ತಿಲ್ಲ ಎನ್ನಲಾಗಿದೆ.