ಒಬ್ಬಂಟಿಯಾಗಿ ಹನಿಮೂನ್ ಗೆ ತೆರಳಿದ ಪತಿ: dont worry ಪತ್ನಿನ ಕಳುಸ್ತೀವಿ ಅಂದ್ರು ಸುಷ್ಮಾ

0
1168

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸುಷ್ಮಾ ಸ್ವರಾಜ್ ಅವರು ಅವಶ್ಯಕತೆಯಿರುವವರಿಗೆ ಸಹಾಯ ಮಾಡಿ ಪ್ರಧಾನಿ ಮೋದಿ ಅವರ ಸಂಪುಟದ ಕ್ರಿಯಾಶೀಲ ಸಚಿವೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಜೊತೆಗೆ ಭಾರತೀಯರಿಗೆ ಎಲ್ಲಾ ಕಾಲದಲ್ಲೂ ನೆರವು ಒದಗಿಸುವ ಭರವಸೆ ನೀಡಿದ್ದಾರೆ.

ಪೈಜಾನ್ ಪಟೇಲ್ ಎಂಬಾತ ಪತ್ನಿಯೊಂದಿಗೆ ಹನಿಮೂನ್ಗೆ ತೆರಳುವುದಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದ. ಆದರೆ ಕೊನೆಕ್ಷಣದಲ್ಲಿ ಪತ್ನಿ ಸನಾ ಪಾಸ್ಪೋರ್ಟ್ ಕಳೆದು ಹೋಗಿತ್ತು. ಆದರೆ ಫೈಜಲ್ ಮಾತ್ರ ಪತ್ನಿಯನ್ನು ಬಿಟ್ಟು ಒಬ್ಬನೇ ಯುರೋಪ್ಗೆ ಹನಿಮೂನ್ಗೆ ತೆರಳಿದ್ದಾನೆ.

ಹನಿಮೂನ್ ಗೆ ಹೊರಟ ಪೈಜಾನ್ ವಿಮಾನ ಪ್ರಯಾಣದ ವೇಳೆ ಪಕ್ಕದ ಖಾಲಿ ಸೀಟಿನಲ್ಲಿ ಪತ್ನಿಯ ಫೋಟೋ ಇಟ್ಟು ‘ನೋಡಿ ನಾನೀಗ ಪತ್ನಿಯೊಂದಿಗೆ ಪ್ರಯಾಣ ಮಾಡುತ್ತಿದ್ದೇನೆ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದಾನೆ.

ಟ್ವೀಟ್ ನೋಡುತ್ತಿದ್ದಂತೆ ಸುಷ್ಮಾ ಸ್ವರಾಜ್ ಅವರು ಸ್ಪಂದಿಸಿದ್ದು ಪತ್ನಿಗೆ ಡ್ಯುಪ್ಲಿಕೇಟ್ ಪಾಸ್ಪೋರ್ಟ್ ನೀಡಿ ವಿದೇಶಕ್ಕೆ ಕಳುಹಿಸುವ ಭರವಸೆ ನೀಡಿದ್ದಾರೆ.