ಶಾಕಿಂಗ್ ಸುದ್ದಿ: ಖಾಸಗಿ ಆಸ್ಪತ್ರೆಗಳು ಜನರಿಂದ 1700% ಅಧಿಕವಾಗಿ ಹಣ ಸ್ವೀಕರಿಸುತ್ತಿದ್ದಾರೆ ಎನುತ್ತೆ ಈ ಹೊಸ ವರದಿ..

0
959

ಈಗಿನ ಕಾಲದಲ್ಲಿ ಆಸ್ಪತ್ರೆಗಳು ಉದ್ಯಮವಾಗಿ ಬಿಟ್ಟಿವೆ. ಜನ ಸೇವೆಗೆಂದು ತೆರೆಯುವ ಆಸ್ಪತ್ರೆಗಳು ಈಗ ತೀರಾ ವಿರಳ. ಯಾವುದಾದರು ಕಾಯಿಲೆ ಎಂದು ಖಾಸಗಿ ಆಸ್ಪತ್ರೆಗೆ ಸೇರಿದರೆ ರೋಗಿಯು, ರೋಗದಿಂದಲ್ಲ, ಆಸ್ಪತೆರ್ಗಳು ನೀಡುವ ಬಿಲ್ಲಿನಿಂದ ಸಾಯುತ್ತಾನೆ. ಇನ್ನು ಆಸ್ಪತ್ರೆ ಯಾವ ರೀತಿ ವ್ಯವಹಾರ ಮಾಡುತ್ತಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ದೇಶದ ರಾಜಧಾನಿ ದೆಹಲಿಯ ಸುತ್ತ-ಮುತ್ತ ಇರುವ 4 ಬಹುದೊಡ್ಡ ಖಾಸಗಿ ಆಸ್ಪತ್ರೆಗಳ ನಿಜ ಸಂಗತಿಯನ್ನು ನಾವು ನಿಮಗೆ ತಿಳಿಸುತ್ತೇವೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ತನ್ನ ಜಾಲ ತಾಣದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಆಸ್ಪತೆರ್ಗಳು ಶೇ.1737 ರಷ್ಟು ಲಾಭ ಮಾಡುತ್ತಿವೆಯಂತೆ ಅದು ಹೇಗೆ ಸಾಧ್ಯ ಅಂತೀರ ಮುಂದೆ ಓದಿ.

ಹೌದು, ಈ ನಾಲ್ಕು ಆಸ್ಪತ್ರೆಗಳು ಶೇ.1737 ರಷ್ಟು ಲಾಭ ಮಾಡುತ್ತಿವೆಯಂತೆ. ಸಾಮಾನ್ಯವಾಗಿ ಆಸ್ಪತ್ರೆಗಳು ಶೇ.10, 15 ಅಥವಾ 20 ರಷ್ಟು ಲಾಭಗಳಿಸುತ್ತವೆ, ಅದರಲ್ಲಿ ಶೇ.25 ರಷ್ಟು ಲಾಭ ಗಳಿಸಿದರೆ ಅದು ಅತಿ ಆಸೆ ಎನ್ನುತ್ತಾರೆ. ಹಾಗಾದರೆ ಈ 4 ಆಸ್ಪತ್ರೆಗಳು ಮಾಡುತ್ತಿರುವ ಲಾಭಕ್ಕೆ ಏನೆನ್ನಬೇಕು.

ಈ ಆಸ್ಪತ್ರೆಗಳು ನೀಡುವ ಬಿಲ್ಲು ನಿಗದಿತಕ್ಕಿಂತ ಶೇ.1737 ರಷ್ಟು ಹೆಚ್ಚಾಗಿರುತ್ತದೆ. ಅದರಲ್ಲಿ, ಸ್ಕ್ಯಾನಿಂಗ್, MRI, X-RAY, ವೈದ್ಯರು ಶುಲ್ಕ, ಆಸ್ಪತ್ರೆ ಬೆಡ್, ಔಷದಿ, ರೂಮು, ಸಿರೆಂಜ್ ಮತ್ತು ಸರ್ಜರಿಯ ಶುಲ್ಕ ಒಳಗೊಂಡಿರುತ್ತದೆ. ಆಸ್ಪತ್ರೆಗಳು NPPA ಮಾನ್ಯತೆ ಪಡೆದ ಔಷದಿಯ ಬದಲು ಬೇರೆ ಔಷಧಿಯನ್ನು ರೋಗಿಗಳಿಗೆ ಶಿಫಾರಸ್ಸು ಮಾಡುತ್ತಾರೆ.

NPPA ಶಿಫಾರಸ್ಸು ಮಾಡಿದ ಔಷಧಿಗಳ ಮೇಲೆ ಅದರ ಸಂಪೂರ್ಣ ಹಿಡಿತವಿರುತ್ತದೆ. NPPA ಅಂತಹ ಔಷಧಿಗಳ ಗುಣಮಟ್ಟ ಮತ್ತು ಬೆಳೆಯ ಮೇಲೆ ನಿಗ್ರಹವಾಹಿಸಿರುತ್ತದೆ. ಇದನ್ನು ಬಿಟ್ಟು ಮಾನ್ಯತೆ ಇಲ್ಲದ ಔಷಧಿಗಳನ್ನು ತರಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ ಮತ್ತು ಅವುಗಳನ್ನು ತಮ್ಮ ಆಸ್ಪತ್ರೆಯಲ್ಲಿರುವ ಔಷದಿ ಅಂಗಡಿಯಲ್ಲಿಯೇ ತೆಗೆದುಕೊಂಡು ಬರಲು ಹೇಳುತ್ತಾರೆ, ಇಂತಹ ಔಷದಿಗಳಿದ ಅವರಿಗೆ ಹೆಚ್ಚು ಲಾಭ ಮತ್ತು ಔಷದಿ ಅಂಗಡಿಯಿಂದ ಕಾಮಿಷೆನ್ ಮತ್ತು ನೀಡಿದ ಅರ್ಧಕ್ಕಿಂತ ಹೆಚ್ಚು ಔಷದಿ ಮರಳಿಸಿ ಅದರ ಕಾಸು ಕೂಡ ತಾವೇ ಪಡೆಯುತ್ತಾರೆ.

ಆಸ್ಪತ್ರೆಗಳು ನೀಡುವ ಬಿಲ್ಲಿನಲ್ಲಿ ಶೇ.25 ರಷ್ಟು NPPA ಶಿಫಾರಸ್ಸು ಇಲ್ಲದ ಔಷಧಿಗಳಿಂದ, ಶೇ.16 ರಷ್ಟು ಚೆಕ್ ಅಪ್, ಸ್ಕ್ಯಾನಿಂಗ್ ಮತ್ತು ರಕ್ತ ಪರೀಕ್ಷೆಯಿಂದ, ಶೇ.12 ರಷ್ಟು ಕೊನೆಯ ಬಾಡಿಗೆ ಮತ್ತು ನಿಗಾ ವಹಿಸುವ ವೈದ್ಯ ಮತ್ತು ಸಿಬ್ಬಂದಿಯ ಶುಲ್ಕವೇ ಬಹು ಪಾಲು ಆಗಿರುತ್ತದೆ ಇದರಲ್ಲಿ ಕೇವಲ ಶೇ.1 ರಷ್ಟು ಮಾತ್ರ ಬೇಕಾಗಿರುವ ಔಷದಿ ಮತ್ತು ಶೇ.1 ಶಸ್ತ್ರಚಿಕಿತ್ಸೆಯ ಖರ್ಚು ಇರುತ್ತದೆ.

ಈ ತರಹದ ಬಿಲ್ಲು ತಯಾರಿಸಲು ಮತ್ತು NPPA ಮಾನ್ಯತೆ ಇಲ್ಲದ ಔಷಧಿಗಳನ್ನು ಆಸ್ಪತ್ರೆಗಳಿಗೆ ಯಾವುದೇ ಹಾಕಿಲ್ಲ, ಆದರೂ, ಅವರು ಇಲ್ಲದ ಶುಲ್ಕಗಳನ್ನು ಮತ್ತು ಬೇಕಾಗಿರದ ಔಷಧಿಗಳನ್ನು ತರಿಸಿ ರೋಗಿಯ ಜೊತೆ-ಜೊತೆಗೆ ಅವರ ಕುಟುಂಬ ಮತ್ತು ಬಂಧುಗಳು ಬಳಿಯೂ ಹಣ ಕೀಳುತ್ತಾರೆ. ಇಂತಹ ಆಸ್ಪತ್ರೆಗಳಲ್ಲಿ ಡೆಂಗಿ ನಿಂದ ಬರುವ ರೋಗಿಗಳು ಆಸ್ಪತ್ರೆಯ ಇಂತಹ ಔಷದಿಗಳ ಮತ್ತು ಹಣದ ಪರಿಣಾಮ ಸಾವನ್ನಪ್ಪುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಇತ್ತೀಚಿಗೆ ನಡೆದ ಒಂದು ಪ್ರಕರಣವೇ ಸಾಕ್ಷಿ. ಹರ್ಯಾಣದ ಒಬ್ಬ ೭ ವರ್ಷದ ಬಾಲಕಿ ಡೆಂಗೂ ಜ್ವರದಿಂದ ಬಳಲುತ್ತಿದ್ದಳು ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನ ಚಿಕಿತ್ಸೆ ನೀಡಲಾಯಿತು , ನಂತರ ಆಕೆಯನ್ನು ಗುರುಗಾವ್ ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಭರ್ತಿ ಮಾಡಲಾಯಿತು , ಆದರೆ ಆಗಸ್ಟ್ ೩೧ ರಂದು ಆಕೆಯ ಪರಿಸ್ಥಿತಿ ಹದಗೆಟ್ಟಿತು , ಇದಾದ ಮರುದಿನವೇ ಆ ಮಗುವನ್ನು ವೆಂಟಿಲೇಟರ್ ನಲ್ಲಿ ಇಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆ ಹುಡುಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮರಣಹೊಂದಿತು.

ಆಸ್ಪತ್ರೆ ಕೇವಲ ೧೫ ದಿನಗಳ ಚಿಕಿತ್ಸೆಗಾಗಿ ಸುಮಾರು 20 ಹಾಳೆಯ ರಸೀದಿಯನ್ನು ನೀಡಿದೆ ಅದರಲ್ಲಿ 660 ಸಿರಿಂಜಸ್ , 2700 ಗ್ಲೋವ್ಸ್ ಮತ್ತು ಇತರೆ ವಸ್ತುಗಳು ಸೇರಿವೆ ಇವೆಲ್ಲವನ್ನೂ ಸೇರಿಸಿ ಆಸ್ಪತ್ರೆ ಒಟ್ಟು 18 ಲಕ್ಷ ರೂಪಾಯಿಗಳ ರಸೀದಿ ನೀಡಿತ್ತು. ಅದರಲ್ಲಿ 660 ಸಿರಿಂಜಸ್ , 2700 ಗ್ಲೋವ್ಸ್ ಮತ್ತು ಫೋರ್ಟಿಸ್ ಆಸ್ಪತ್ರೆಯ ವೆಬ್ ಸೈಟ್ ನಲ್ಲಿಯೇ 13 ರೂ.ಗೆ ಸಿಗುವ ಶುಗರ್ ಟೆಸ್ಟಿಂಗ್ ಸ್ಟ್ರಿಪ್ಸ್ಗಳನ್ನು 200.ರೂ ಎಂದು ಬರೆಯಲಾಗಿತ್ತು.

ಒಟ್ಟಿನಲ್ಲಿ ಆರೋಗ್ಯ ಸಚಿವರು ಇಂತಹ ಆಸ್ಪತ್ರೆಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಇನ್ನು ಹತ್ತು ಹಲವಾರು ಆಸ್ಪತ್ರೆಗಳು ಹುಟ್ಟಿಕೊಳ್ಳುವುದಂತೂ ಖಚಿತ…!!

Also read: ಫೋರ್ಟಿಸ್ ಆಸ್ಪತ್ರೆಯಲ್ಲಿ ೭ ವರ್ಷದ ಮಗು ಡೆಂಗೀನಿಂದಾಗಿ ಅಸುನೀಗಿತು, ಆಸ್ಪತ್ರೆಯ ವೆಚ್ಚ ೧೮ ಲಕ್ಷ ರೂಪಾಯಿ ನೋಡಿ ಶಾಕ್-ಆದ ಕುಟುಂಬ!!