ವೈದ್ಯಕೀಯ ಚಿಕಿತ್ಸೆಗಾಗಿ ಅತಿಯಾದ ಶುಲ್ಕಕ್ಕೆ ಕಡಿವಾಣ ಹಾಕದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್..!

0
537

Kannada News | Karnataka News

ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅತಿಯಾದ ಶುಲ್ಕ ವಿಧಿಸಲಾಗುತ್ತಿದೆ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಮಾಹಿತಿ ಬಿಡುಗಡೆ ಮಾಡಿದೆ. ಅತಿಹೆಚ್ಚು ಶುಲ್ಕದಿಂದ ಸಾಮಾನ್ಯ ಜನರು ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದ ಕಾರಣ ಸುಪ್ರೀಂ ಕೋರ್ಟ್ ಸರ್ಕಾರವನ್ನು ಇದರ ಬಗ್ಗೆ ಗಮನ ವಹಿಸುವಂತೆ ಎಚ್ಚರಿಕೆ ನೀಡಿತು.

ದೇಶದ ರಾಜಧಾನಿ ದೆಹಲಿಯ ಸುತ್ತ-ಮುತ್ತ ಇರುವ ಬಹುದೊಡ್ಡ ಖಾಸಗಿ ಆಸ್ಪತ್ರೆಗಳ ನಿಜ ಸಂಗತಿಯ ಬಗ್ಗೆ ಉಲ್ಲೇಖಿಸಿದ SC ರಾಷ್ಟೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ತನ್ನ ಜಾಲ ತಾಣದಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಈ ಆಸ್ಪತೆರ್ಗಳು ಶೇ.1192 ರಷ್ಟು ಲಾಭ ಮಾಡುತ್ತಿವೆ ಇದರ ಬಗ್ಗೆ ಕ್ರಮ ಜರುಗಿಸಿ ಎಂದು ತಾಕೀತು ಮಾಡಿತು.

ಖಾಸಗಿ ಆಸ್ಪತ್ರೆಗಳು ನೀಡುವ ಬಿಲ್ಲು ನಿಗದಿತಕ್ಕಿಂತ ಶೇ.1192 ರಷ್ಟು ಹೆಚ್ಚಾಗಿರುತ್ತದೆ. ಅದರಲ್ಲಿ, ಸ್ಕ್ಯಾನಿಂಗ್, MRI, X-RAY, ವೈದ್ಯರು ಶುಲ್ಕ, ಆಸ್ಪತ್ರೆ ಬೆಡ್, ಔಷದಿ, ರೂಮು, ಸಿರೆಂಜ್ ಮತ್ತು ಸರ್ಜರಿಯ ಶುಲ್ಕ ಒಳಗೊಂಡಿರುತ್ತದೆ. ಆಸ್ಪತ್ರೆಗಳು NPPA ಮಾನ್ಯತೆ ಪಡೆದ ಔಷದಿಯ ಬದಲು ಬೇರೆ ಔಷಧಿಯನ್ನು ರೋಗಿಗಳಿಗೆ ಶಿಫಾರಸ್ಸು ಮಾಡುತ್ತಾರೆ ಎಂದು NPPA ಜಾಲತಾಣದಲ್ಲಿ ಉಲ್ಲೇಖವಾಗಿದೆ.

ಇದಕ್ಕೆ ಒಂದು ಉದಾಹರಣೆಯಂತೆ ಔಷಧ ಬೆಲೆ ನಿಗದಿ ನಿಯಂತ್ರಕ (NPPA) ಇತ್ತೀಚೆಗೆ ಹೇಳಿದ್ದು, ಅಡ್ರೀನರ್ 2 ಎಂ.ಎಲ್. ಇಂಜೆಕ್ಷನ್ MRP 189.95 ರೂ. ಇದ್ದು, ಆಸ್ಪತ್ರೆಗಳಿಗೆ ಖರೀದಿ ದರ 14.70 ರೂ. ಆಗಿರುತ್ತದೆ. ಆದರೆ, ರೋಗಿಗಳ ಬಳಿಯಿಂದ ತೆರಿಗೆ ಸೇರಿದಂತೆ 5,318.60 ರೂ. ವಸೂಲಿಮಾಡಲಾಗುತ್ತಿದೆ.

ಇನ್ನು ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಎಷ್ಟೋ ಸುದ್ದಿ ವಾಹಿನಿಗಳು ಈ ಬಗ್ಗೆ ವರದಿ ಮಾಡಿದ ನಂತರವೂ ಸರ್ಕಾರ ಈ ಬಗ್ಗೆ ಕಿಂಚಿತ್ತೂ ಗಮನ ವಹಿಸದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇಷ್ಟು ದೊಡ್ಡ ಮೋಸ ನಡೆಯುತ್ತಿದರು ಆರೋಗ್ಯ ಸಚಿವಾಲಯ ಮೌನ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

Also Read: ನಿಮ್ಮ ಬಳಿ ರೇಷೆನ್ ಕಾರ್ಡ್ ಇದೆಯೇ? ಹಾಗಿದ್ದರೆ ಈ ಹೊಸ ನಿಯಮಗಳನ್ನು ಖಂಡಿತ ಓದಲೇಬೇಕು…!